ಬಿಡುಗಡೆಯಾಗಿ ಮೂರೂ ವಾರವಾದರೂ ಹೊಸ ಸಿನಿಮಾಗಳಿಗೆ ಠಕ್ಕರ್ ನೀಡುತ್ತಿದೆ ಕನ್ನಡದ KGF Chapter 2.
ಯಶ್ ನಟನೆಯ ಹಾಗು ಪ್ರಶಾಂತ್ ನೀಲ್ ನಿರ್ದೇಶನದ ಕನ್ನಡದ ಹೆಮ್ಮೆ KGF ಚಾಪ್ಟರ್ ೨ ವಿಶ್ವದಾದ್ಯಂತ ಬಿಡುಗಡೆಯಾಗಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡುತ್ತಿದೆ. ಅದಲ್ಲದೆ ಇದೀಗ ಬಿಡುಗಡೆಯಾಗಿ ಮೂರೂ ವಾರ ಆದರೂ ಕೂಡ ಹೊಸ ಸಿನೆಮಾಗಳಿಗೆ ಠಕ್ಕರ್ ನೀಡುತ್ತಿದೆ. KGF ಗೆ ಉತ್ತಮ ಪ್ರತಿಕ್ರಿಯೆ ಇರುತ್ತಿದ್ದು ಇಂದು ಕೂಡ ಹಲವೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದೆ ಕಾರಣಕ್ಕೆ ಹೊಸದಾಗಿ ಬಿಡುಗಡೆ ಆದ ಹಿಂದಿ ಚಿತ್ರಗಳು ಕಲೆಕ್ಷನ್ ಮಾಡಲು ಪರದಾಡುತ್ತಿದೆ.
ಯಶ್ ಸಿನೆಮಾ ೧೦೦೦ ಕೋಟಿ ಕಲ್ಲೆಕ್ಷನ್ ಮಾಡಿದೆ ಹಾಗೇನೇ ಇನ್ನೊಂದು ದಕ್ಷಿಣದ RRR ಸಿನೆಮಾ ಕೂಡ ೧೦೦೦ ಗಡಿ ದಾಟಿ ಇನ್ನು ಪ್ರದರ್ಶನ ಕಾಣುತ್ತಿದೆ. ಜನರಿಗೆ ಇದೀಗ ಹಿಂದಿ ಆಗಲಿ ಅಥವಾ ಬೇರೆ ಯಾವುದೇ ಭಾಷೆಯ ಸಿನೆಮಾ ಆಗಲಿ ನಿರೀಕ್ಷೆ ಇನ್ನು ಹೆಚ್ಚಿಸಿದೆ. ಆದ್ದರಿಂದ ಸಿಂಪಲ್ ಆಗಿ ಇರುವ ಮೂವಿ ಯಾರು ನೋಡಲು ಬಯಸುತ್ತಿಲ್ಲ ಅದಕ್ಕೆ ಉತ್ತಮ ಉದಾಹರಣೆ ಇತ್ತೀಚಿಗೆ ಬಿಡುಗಡೆ ಆದ ಟೈಗರ್ ಶ್ರೋಫ್ ಅವರ ಹೇರೊಪಂತಿ ೨ ಹಾಗು ಅಜಯ್ ದೇವ್ಗನ್ ಅವರ ರನ್ ವೇ ೨೪ ಸಿನೆಮಾದ ಅತ್ಯಂತ ಕಳಪೆ ಕಲೆಕ್ಷನ್.
ಯಶ್ ರ KGF 2 ಏಪ್ರಿಲ್ ೧೪ ರಂದು ಬಿಡುಗಡೆ ಆಗಿದ್ದು ಇಂದು ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ನಿನ್ನೆಯೂ ಕೂಡ ಅಂದರೆ ಮೇ ೧ ರಂದು ದೇಶಾದ್ಯಂತ ೧೧.೨೫ ಕೋಟಿ ಸಂಪಾದಿಸಿದೆ. ಅದೇ ಇನೊಂದು ಕಡೆ ಹಿಂದಿ ಸಿನೆಮಾಗಳಾದ ಹೇರೊಪಂತಿ ೨ ಹಾಗು ರನ್ ವೇ ೩೪ KGF 2 ರಷ್ಟು ಠಕ್ಕರ್ ಕೊಡಲು ಕೂಡ ಸಾಧ್ಯವಾಗುತ್ತಿಲ್ಲ. ಸಿನೆಮಾ ವಿಶ್ಲೇಷಕ ರಮೇಶ್ ಬಾಲ ರ ಪ್ರಕಾರ ಮೇ ೧ ರವಿವಾರದಂದು KGF 2 Rs.11.25 ಕೋಟಿ, ರನ್ ವೇ ೩೪ Rs.7.25 ಕೋಟಿ ಹಾಗು ಹೇರೊಪಂತಿ Rs.೨ 4.25 ಕೋಟಿ ಗಳಿಸಿದೆ ಎಂದು ಹೇಳಿದ್ದಾರೆ.
ತಮಿಳು ನಾಡಿನ ಕುಂಭಕೋಣಂ ಥಿಯೇಟರ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ KGF ೨ ರವಿವಾರದ ರಾತ್ರಿ ಶೋ ಕೂಡ ಹೌಸ್ ಫುಲ್ ಆಗಿದೆ. ಇದು ೧೫ ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಬ್ಲಾಕ್ ಬಸ್ಟರ್ ಸಿನೆಮಾ ಎಂದು ಹೇಳಿಕೊಂಡಿದ್ದಾರೆ. ಬಿಡುಗಡೆ ಗೊಂಡು ೧೮ ದಿನಗಳಾದರೂ ಕೂಡ kgf ಕ್ರೇಜ್ ಇನ್ನು ಹೋಗಿಲ್ಲ ಎಂದು ಹೇಳಿದ್ದಾರೆ. ಮರುದಿನ ಅಂದರೆ ಮೇ ೨ ವರ್ಕಿಂಗ್ ಡೇ ಇದ್ದರು ಕೂಡ ರಾತ್ರಿ ಶೋ ಹೌಸ್ ಫುಲ್ ಆಗಿದ್ದು ಚಿತ್ರ ಮಂದಿರದವರಿಗೆ ಖುಷಿಯೋ ಖುಷಿ ಆಗಿದೆ. ಕನ್ನಡ ಸಿನೆಮಾ ಇನ್ನು ಮುಂದೆ ಅನೇಕ ದಿನ ಇದೆ ರೀತಿ ಗಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ.