ಬುದ್ದಿ ಜೀವಿ ಹಾಗೂ ಬಾಲಿವುಡ್ ಕಲಾವಿದರೂ ಬೆಂಬಲಕ್ಕೆ ನಿಂತರು ಕೂಡ ಅಮಿರ್ ಸಿನಿಮಾ ನಿಜಕ್ಕೂ ಗಳಿಸಿದ್ದು ಎಷ್ಟು ಗೊತ್ತೇ?? ಅಸಲಿ ಸತ್ಯ ಕೊನೆಗೂ ಬಯಲು
ನಮಸ್ಕಾರ ಸ್ನೇಹಿತರೆ ಕಳೆದ ನಾಲ್ಕು ವರ್ಷಗಳಿಂದ ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಗಿರುವ ಅಮೀರ್ ಖಾನ್ ನಟನೆಯ ಯಾವುದೇ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಆದರೆ ಈಗ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಆಗಸ್ಟ್ 11ರಂದು ಬಿಡುಗಡೆಯಾಗಿದೆ. ಅಮೀರ್ ಖಾನ್ ನಟನೆಯ ಸಿನಿಮಾಗಳು ಯಾವತ್ತೂ ಕೂಡ ಮೊದಲ ದಿನದ ಕಲೆಕ್ಷನ್ ನಲ್ಲಿ ದಾಖಲೆಯನ್ನು ನಿರ್ಮಿಸುತ್ತವೆ ಎಂಬುದಾಗಿ ಎಲ್ಲರು ಮಾತನಾಡಿಕೊಳ್ಳುತ್ತಾರೆ.
ಆದರೆ ಲಾಲ್ ಸಿಂಗ್ ಚಡ್ಡ ಸಿನಿಮಾದಲ್ಲಿ ಈ ಲೆಕ್ಕಾಚಾರ ಉಲ್ಟಾಪಲ್ಟ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ರಿಪೋರ್ಟ್ ಗಳು ಹೇಳುತ್ತವೆ. ಅದರಲ್ಲೂ ವಿಶೇಷವಾಗಿ ಈ ಸಿನಿಮಾ ಅಕ್ಷಯ್ ಕುಮಾರ್ ನಟನೆಯ ರಕ್ಷಾಬಂಧನ್ ಸಿನಿಮಾದ ಎದುರಿಗೆ ಕ್ಲಾಶ್ ಆಗಿ ಬಿಡುಗಡೆಯಾಗಿದೆ. ಹೀಗಾಗಿ ಮೊದಲ ದಿನದ ಕಲೆಕ್ಷನ್ ನಲ್ಲಿ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ದೊಡ್ಡ ಮಟ್ಟದ ಆ’ಘಾತ ಎದುರಾಗಿದೆ ಎಂದರೆ ತಪ್ಪಾಗಲಾರದು. ಇಂಗ್ಲೀಷ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿರುವ ಲಾಲ್ ಸಿಂಗ್ ಚಡ್ಡ ಈಗಾಗಲೇ ಸಿನಿಮಾ ಪ್ರೇಮಿಗಳಿಗೆ ಮೊದಲ ದಿನದಿಂದಲೇ ರಚಿಸದೇ ಇರುವ ಕಾರಣಕ್ಕಾಗಿ ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರಗಳು ಪ್ರೇಕ್ಷಕರಿಂದ ಹೆಚ್ಚಾಗುತ್ತಿವೆ ಇದರ ಕಾರಣದಿಂದಾಗಿ ಮೊದಲ ದಿನದಿಂದಲೇ ಸಿನಿಮಾದ ಕಲೆಕ್ಷನ್ ನಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಹೀಗಾಗಿ ಮೊದಲ ದಿನ ಕ್ಲಾಶ್ ಇದ್ದರೂ ಕೂಡ ಖಂಡಿತವಾಗಿ ಸಿನಿಮಾ 15 ಕೋಟಿ ರೂಪಾಯಿ ಮೊದಲ ದಿನ ಕಲೆಕ್ಷನ್ ಮಾಡುತ್ತದೆ ಎಂಬುದಾಗಿ ಭಾವಿಸಲಾಗಿತ್ತು ಆದರೆ ಆ ಆಸೆಗೂ ಕೂಡ ತಣ್ಣೀರು ಎರಚಿದೆ. ಮೊದಲ ದಿನ ಲಾಲ್ ಸಿಂಗ್ ಚಡ್ಡ ಗಳಿಸಿರುವ ಗಳಿಕೆ ಕೇವಲ 10.45 ಕೋಟಿ ಮಾತ್ರ.
ಅದರಲ್ಲೂ ಮಲ್ಟಿಪ್ಲೆಕ್ಸ್ ನಿಂದ ಬಂದಿರುವ ಕಲೆಕ್ಷನ್ 6.25 ಕೋಟಿ. ಹೀಗಾಗಿ ನಾನ್ ಮಲ್ಟಿಪ್ಲೆಕ್ಸ್ ನಲ್ಲಂತೂ ಅಮೀರ್ ಖಾನ್ ನಟನೆಯ ಈ ಸಿನಿಮಾವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಎಂದೇ ಹೇಳಬಹುದಾಗಿದೆ. ವಾರಂತ್ಯದಲ್ಲಿ ಅಮೀರ್ ಖಾನ್ ನಟನೆಯ ಈ ಸಿನಿಮ ಕಲೆಕ್ಷನ್ ಮಾಡಿದರೆ ಸಿನಿಮಾ ಉಳಿಯಬಹುದು ಇಲ್ಲದಿದ್ದರೆ ಖಂಡಿತವಾಗಿ ಇದು ಅಮೀರ್ ಖಾನ್ ನಟನೆಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮಟ್ಟದ ಫ್ಲಾಪ್ ಫಲಿತಾಂಶವನ್ನು ಹೊಂದುವ ಸಿನಿಮಾ ಆಗಿ ಪರಿಣಮಿಸಲಿದೆ ಎನ್ನುವುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.