ಬೆಡ್ ಮೇಲೆ ಮಲಗಿ ನೆಟ್ ಫ್ಲಿಕ್ಸ್ ನೋಡಲು ಈ ಕಂಪನಿ ಜನರಿಗೆ ಕೊಡುತ್ತಿರುವ ಹಣ ಎಷ್ಟು ಗೊತ್ತೆ? ಯಾಕಾಗಿ ಇಷ್ಟೊಂದು ದೊಡ್ಡ ಮೊತ್ತ ಕೊಡುತ್ತಿದೆ?

468

ಮಲಗುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಎಲ್ಲರೂ ಮಲಗಿ ಕಾಲ ಕಳೆಯಲು ಇಷ್ಟ ಪಡುತ್ತಾರೆ. ರಜೆ ಇದ್ದಾಗ ಅಂತೂ ಸದಾ ನಿದ್ದೆಯಲ್ಲೇ ಕಾಲ ಕಳೆಯುತ್ತೇವೆ. ಮಲಗಿ ಟೀವಿ ನೋಡಿಕೊಂಡು ಕಾಲ ಹರಣ ಮಾಡುತ್ತೇವೆ . ರಜೆ ಇಲ್ಲದ ಸಮಯದಲ್ಲೂ ಅಷ್ಟೇ ನೋಡಿ ನಾವು ಬೆಳಿಗ್ಗೆ ಏಳುವುದೆ ಕಷ್ಟಕ್ಕೆ. ಎದ್ದು ರೆಡಿ ಆಗಿ ಕೆಲಸಕ್ಕೆ ಹೋಗುವುದು ದೊಡ್ಡ ಸಾಹಸ. ಆದರೆ ಇಲ್ಲೀಗ ಒಂದು ಕಂಪನಿ ಮಲಗಿಕೊಂಡು NETFLIX ನೋಡಲು ಬಾರಿ ದೊಡ್ಡ ಮೊತ್ತದ ಹಣ ನೀಡುತ್ತಿದೆ. ಅಚ್ಚರಿ ಎನಿಸಿದರೂ ಇದು ಸತ್ಯ ಸಂಗತಿ. ಯಾವುದು ಆ ಕಂಪನಿ ಅದು ನೀಡುತ್ತಿರುವ ಮೊತ್ತ ಎಷ್ಟು ಬನ್ನಿ ತಿಳಿಯೋಣ.

“CRAFTED BEDS” ಇದುವೇ ಆ ಕಂಪನಿ. ಹೌದು ಬ್ರಿಟಿಷ್ ಮೂಲದ ಈ ಕಂಪನಿ ಜನರು ಮಲಗಿಕೊಂಡು NETFLIX ನೋಡಲು ಬರೋಬ್ಬರಿ 20 ಲಕ್ಷ ಹಣ ನೀಡುತ್ತಿದೆ. ಹೌದು ಅಚ್ಚರಿ ಆಗಬಹುದು ಆದರೂ ಸತ್ಯ ಸಂಗತಿ ಇದು. ಈ ಕಂಪನಿ ಮೂಲತಃ ಬೆಡ್ ತಯಾರಿಕೆಯ ಕಂಪನಿ ಆಗಿದ್ದು, ಇದು ತನ್ನ ಬೆಡ್ ನ ಕ್ವಾಲಿಟಿ ಸುಧಾರಣೆ ಮಾಡಲು ಕಂಪನಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಇದಕ್ಕಾಗಿ ಜನರಿಂದ ಅಪ್ಲಿಕೇಶನ್ ತೆಗೆದು ಕೊಳ್ಳುತ್ತಿದೆ. ಇದರಲ್ಲಿ ಆಯ್ಕೆ ಆದ ಜನರಿಗೆ ಇಲ್ಲಿ ಈ ಕಂಪನಿ ತಯಾರಿಸಿದ ಬೆಡ್ ಮೇಲೆ ಮಲಗಿ NEYFLIX ನೋಡುವ ಅವಕಾಶ ನೀಡುತ್ತದೆ.

ಹೀಗೆ ಒಂದು ದಿನ ಪೂರ್ತಿ ನೋಡಿ ತಮ್ಮ ಕಂಪನಿ ತಯಾರಿಸಿದ ಬೆಡ್ ಬಗ್ಗೆ ತಿಳಿಸಬೇಕು ಮತ್ತು ಅದರ ಗುಣಮಟ್ಟದ ಬಗೆಗೆ ಹೇಳಬೇಕು ಅಷ್ಟೇ ಅಲ್ಲದೆ ಅದರಲ್ಲಿ ಮಾಡಬೇಕಾದ ಸುಧಾರಣೆ ಬಗೆಗೆ ಹೇಳಬೇಕು . ಹೀಗೆ ತಮ್ಮ ಅನುಭವ ಮತ್ತು ಸುಧಾರಣೆ ಬಗ್ಗೆ ತಿಳಿಸಿದರೆ ಕಂಪನಿ ನಿಮಗೆ 20 ಲಕ್ಷ ಕೊಡುವುದಾಗಿ ಹೇಳಿಕೊಂಡಿದೆ. ಅದೇನೇ ಇರಲಿ ಜನರಿಗೆ ಇದೊಂದು ಸುವರ್ಣಾವಕಾಶ ಆದಷ್ಟು ಜನರು 20 ಲಕ್ಷ ಗೆಲ್ಲಲಿ ಎಂದು ಆಶಿಸುವ.

Leave A Reply

Your email address will not be published.