ಭಾರತಕ್ಕೆ ತುಸು ನೆಮ್ಮದಿ: ಎಲ್ಲರೂ ಇಂಜುರಿಯಿಂದ ಹೊರಹೋಗುತ್ತಿರುವಾಗ ತಂಡಕ್ಕೆ ವಾಪಸ್ಸಾದ ಟಾಪ್ 2 ಆಟಗಾರರು. ಈ ಸಲ ಕಪ್ ಪಕ್ಕ ನಮ್ದೇ
ಬಿಸಿಸಿಐ ಸೆಪ್ಟೆಂಬರ್ 16ರಂದು ಟಿ20 ವಿಶ್ವಕಪ್ ಹಾಗೂ ಭಾರತದಲ್ಲಿ ನಡೆಯಲಿರುವ ಎರಡು ಸೀರೀಸ್ ಗಳಿಗೆ ತಂಡವನ್ನು ಪ್ರಕಟಣೆ ಮಾಡಲಿದೆ. ಈ ಸಮಯದಲ್ಲಿ ಭಾರತ ತಂಡಕ್ಕೆ ಒಂದು ಸಂತೋಷವಾದ ಸುದ್ದಿ ಇದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಭಾರತ ತಂಡದ ಇಬ್ಬರು ಮುಖ್ಯ ಬೌಲರ್ ಗಳಾದ ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಇಬ್ಬರು ಸಹ ಭಾರತ ತಂಡಕ್ಕೆ ಸೆಲೆಕ್ಟ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ.
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿದ್ದ ಬುಮ್ರ ಹಾಗೂ ಹರ್ಷಲ್ ಪಟೇಲ್ ಇಬ್ಬರು ಸಹ ಶನಿವಾರ ಫಿಟ್ನೆಸ್ ಟೆಸ್ಟ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇವರಿಬ್ಬರು ಫಿಟ್ನೆಸ್ ಟೆಸ್ಟ್ ನಲ್ಲಿ ಉನ್ನತಿ ಹೊಂದಿದ್ದು, ಪಂದ್ಯವನ್ನಾಡಲು ಫಿಟ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಸಿಐ ಗೆ ಸಹ ಈ ವಿಷಯ ಗೊತ್ತಾಗಿದ್ದು, ಬುಮ್ರ ಹಾಗೂ ಹರ್ಷಲ್ ಪಟೇಲ್ ಇಬ್ಬರು ಸಹ ಆಯ್ಕೆಗೆ ಪರಿಗಣಿಸುವ ಫಿಟ್ನೆಸ್ ಗೆ ಬಂದಿದ್ದಾರೆ ಎಂದು ಗೊತ್ತಾಗಿದೆ.
ಇದರಿಂದಾಗಿ ಈ ಇಬ್ಬರು ಆಟಗಾರರು ಭಾರತ ತಂಡಕ್ಕೆ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಇನ್ನು ಟಿ20 ವಿಶ್ವಕಪ್ ಗೆ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಆಯ್ಕೆ ಆಗುವುದು ಖಚಿತ ಆಗಿದ್ದು, ನಾಲ್ಕನೇ ಬೌಲರ್ ಆಗಿ ಯುವ ಆಟಗಾರ ಅರ್ಷದೀಪ್ ಸಿಂಗ್ ಆಯ್ಕೆಯಾಗಬಹುದು. ಐದನೇ ಸ್ಥಾನಕ್ಕೆ ಆವೇಶ್ ಖಾನ್ ಅವರ ಬದಲಾಗಿ, ಮೊಹಮ್ಮದ್ ಶಮಿ ಅಥವಾ ದೀಪಕ್ ಚಹರ್ ಆಯ್ಕೆಯಾಗಬಹುದು. ಆಸ್ಟ್ರೇಲಿಯಾದ ಪಿಚ್ ಸ್ಪಿನ್ನರ್ ಗಳಿಗಿಂತ ವೇಗಿಗಳಿಗೆ ಅನುಕೂಲಕರವಾಗಿರುವುದರಿಂದ ಅವರನ್ನೇ ಹೆಚ್ಚು ಆಯ್ಕೆ ಮಾಡಲಾಗುತ್ತಿದೆ.