ಭಾರತೀಯರನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ ಎಂದ OTT ದಿಗ್ಗಜ Netflix.

550

ಇನ್ನು ಮುಂದೆ ಏನಿದ್ದರೂ OTT ಗಳದ್ದೇ ಹವಾ. ಜನರು ಥೇಟರ್ ಗೆ ಹೋಗಿ ಸಿನಿಮಾ ನೋಡುವ ಕಾಲ ಹೋಗಿದೆ, ಜನ ಏನಿದ್ದರೂ ಮನೆಯಲ್ಲಿಯೇ ನೋಡೋವ ಅನ್ನುವ ಮಟ್ಟಿಗೆ ಬಂದಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೋರೋಣ ಬಂದಿದ್ದು ಸಿನಿಮಾ ಮಂದಿರಗಳು ಸಂಪೂರ್ಣವಾಗಿ ಮುಚ್ಚಿದ್ದು. ಇದೀಗ ಎಲ್ಲ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಂಡ ಒಂದು ತಿಂಗಳಲ್ಲಿ OTT ಗಳಲ್ಲಿ ಬಂದಿದ್ದು ಉದಾಹರಣೆ ಇದೆ. ಅತಿ ಕಡಿಮೆ ಬೆಲೆಯಲ್ಲಿ ಎಲ್ಲ ಶೋ ಗಳನ್ನೂ ನೋಡುವ ಅವಕಾಶ ಈ OTT ನೀಡುತ್ತಿದೆ.

OTT ಅಂದರೆ over the top ಎನ್ನುವ ಅರ್ಥ ಇದೆ. ಅನೇಕ OTT ಗಳಿವೆ. netflix ಅಮೆಜಾನ್ ಪ್ರೈಮ್, hotstar zee ೫, voot ಹಾಗೇನೇ sun nxt ನಂತಹಗಳು. ಇವುಗಳ ನಡುವೆ ಅನೇಕ ಪೈಪೋಟಿಗಳಿವೆ. ಇವುಗಳಲ್ಲಿ ಅನೇಕರು ಕೋಟ್ಯಂತರ subscriber ಗಳನ್ನೂ ಪಡೆದಿದ್ದಾರೆ. ಇವುಗಳ ಬೆಲೆ ಕೂಡ ಬೇರೆ ಬೇರೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ OTT ಗಳ ದಿಗ್ಗಜ ಅಂತಾನೆ ಅನಿಸಿಕೊಂಡಿರುವ Netflix ಮಾತ್ರ ಭಾರತದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಅದಕ್ಕೆ ಏನು ಕಾರಣ ಅಂತಾನೆ ಗೊತ್ತಾಗ್ತಿಲ್ಲ ಅಂತೇ ಈ Netflix ಮುಖ್ಯಸ್ಥರಿಗೆ.

ಭಾರತದಲ್ಲಿ netflix ಪ್ರತಿ ತಿಂಗಳು ೨೦೦ ರೂಪಾಯಿಗಳಂತೆ ಅತಿ ಕಡಿಮೆಯ subscription ನೀಡಿತ್ತು. ಆಗಲು ಜನರು ಇದನ್ನು ಖರೀದಿಸುವಲ್ಲಿ ಉತ್ಸಾಹ ತೋರಲಿಲ್ಲ. ಆಮೇಲೆ ಬೆಲೆ ೧೫೦ ರುಪಾಯಿಗೆ ಇಳಿಸಿದರು ಕೂಡ ಇದ್ದ subscriber ಕೂಡ ಬಿಟ್ಟು ಹೋಗಿದ್ದಾರೆ. ಇತ್ತೀಚಿನ ವರದಿ ಪ್ರಕಾರ disney hotstar ಅತ್ಯಧಿಕ ಜನರನ್ನು ಒಳಗೊಂಡಿದೆ. ಎರಡನೇ ಸ್ಥಾನದಲ್ಲಿ ಅಮೆಜಾನ್ ಪ್ರೈಮ್ ಇದ್ದಾರೆ ಮೂರನೇ ಸ್ಥಾನದಲ್ಲಿ netflix ಇದೆ. ಇವುಗಳ ನಡುವಿನ ಅಂತರ ಬಹಳಷ್ಟಿದೆ. ಇತ್ತೀಚಿಗೆ ಭಾರತದಲ್ಲಿ netflix ಬಳಕೆ ಮಾಡುವವರ ಸಂಖ್ಯೆ ಕೇವಲ ೫೫ ಲಕ್ಷಕ್ಕೆ ಬಂದು ನಿಂತಿದೆ. ಇದರಿಂದ netflix ಸಂಸ್ಥೆಯ ಶೇರ್ ಸುಮಾರು ೪೦% ರಷ್ಟು ಕಡಿಮೆ ಆಗಿದೆ. ಸುಮಾರು ೧೦೦ ಬಿಲಿಯನ್ ಡಾಲರ್ ನಷ್ಟು ನಷ್ಟ ಅನುಭವಿಸಿದೆ.

Leave A Reply

Your email address will not be published.