ಮನುಷ್ಯ ಮತ್ತು ನಾಯಿಯ ಒಡನಾಟ ಹಾಗು ಬಾಂಧವ್ಯದ ಕಥೆಯೆ ಚಾರ್ಲಿ777.

248

ಪ್ರಾಣಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದು ಕೂಡ ಬೆಕ್ಕು ಅಥವಾ ನಾಯಿಗಳೆಂದರೆ ಎಲ್ಲ ವರ್ಗದ ಜನರಿಗೂ ಅಚ್ಚು ಮೆಚ್ಚು. ನಾವುಗಳು ದನವನ್ನು ದೇವರ ರೀತಿ ಕಾಣಿದರೆ ನಾಯಿಯನ್ನು ನಮ್ಮ ಉತ್ತಮ ಸ್ನೇಹಿತನ ರೀತಿ ಕಾಣುತ್ತೇವೆ. ಈ ನಾಯಿ ಮತ್ತು ಮನುಷ್ಯನ ಒಡನಾಟದ ಒಂದು ಕಲ್ಪನೆಯೇ ಈ ರಕ್ಷಿತ್ ಶೆಟ್ಟಿ ಅಭಿನಯದ ಹಾಗು ಕಿರಣ್ ರಾಜ್ ನಿರ್ದೇಶನದ ಮೊದಲ ಸಿನೆಮಾ ಚಾರ್ಲಿ 777. ನಾಯಿ ಹಾಗು ಮನುಷ್ಯನ ನಡುವಿನ ಬಾಂದವ್ಯ, ಡ್ರಾಮಾ ಇದೆಲ್ಲವನ್ನು ಕಿರಣ್ ರಾಜ್ ತಮ್ಮ ಮೊದಲನೇ ಸಿನೆಮಾದಲ್ಲಿ ತುಂಬಾ ಅಚ್ಚು ಮೆಚ್ಚಾಗಿ ಹಾಗು ನೀಟಾಗಿ ತೋರಿಸಿದ್ದಾರೆ.

ನಾಯಿ ಹಾಗು ಮನುಷ್ಯನ ಬಾಂದವ್ಯ ಮನುಷ್ಯರ ನಡುವಿನ ಬಾಂಧವ್ಯಕ್ಕೂ ಹೆಚ್ಚಾಗಿರುತ್ತದೆ. ಇದು ಎಲ್ಲರಿಗು ಗೊತ್ತಿರುವಂತದ್ದೇ ವಿಷಯ. ಈ ಇಬ್ಬರ ನಡುವಿನ ಬಾಂದವ್ಯ ಹಾಗು ಅದು ಹೇಗೆ ವೃದ್ಧಿ ಆಗುತ್ತದೆ ಎನ್ನುವ ಬಿಲ್ಡ್ ಅಪ್ ಕಥೆನೇ ಮೊದಲರ್ಧದಲ್ಲಿ ಕಿರಣ್ ರಾಜ್ ತೋರಿಸಿದ್ದಾರೆ. ಜೀವನದಲ್ಲಿ ಇನೇನು ಭವಿಷ್ಯನೇ ಇಲ್ಲ, ಎಲ್ಲವನ್ನು ತ್ಯಜಿಸಿ ಕುಡುಕನಾಗಿ ಒಂಟಿಯಾಗಿ ಜೀವನ ಕಳೆಯುವ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ನಾಯಿಯೊಂದು ಸಿಕ್ಕ ನಂತರ ಅವರ ಜೀವನ ಹೇಗೆ ಬದಲಾಯಿತು ಇಬ್ಬರ ನಡುವಿನ ಬಾಂದವ್ಯ ಹೇಗೆ ಹೆಚ್ಚಾಯಿತು ಎನ್ನುವುದು ನಿಜಕ್ಕೂ ಮನೋರಂಜನೆ ನೀಡುವ ದೃಶ್ಯಗಳಾಗಿವೆ.

ಇನ್ನು ಎರಡನೇ ಅರ್ಧ ನಾವು ಹೇಳುವುದಕ್ಕಿಂತ ನೀವು ನೋಡುವುದೇ ಲೇಸು ಎನ್ನುವುದು ನಮ್ಮ ಅಭಿಪ್ರಾಯ. ಕಿರಣ್ ರಾಜ್ ತಮ್ಮ ಮೊದಲ ಪ್ರಯತ್ನದಲ್ಲೇ ಜಯ ಸಾಧಿಸಿದ್ದಾರೆ ಎನ್ನುವುದು ಈ ಸಿನೆಮಾಗೆ ಪ್ರೇಕ್ಷಕರಿಂದ ಬರುವ ಪ್ರತಿಕ್ರಿಯೆ ಇಂದ ಗೊತ್ತಾಗುತ್ತಿದೆ. ದೇಶಾದ್ಯಂತ ಈ ಸಿನೆಮಾಗೆ ಮೆಚ್ಚುಗೆ ಹರಿದು ಬರುತ್ತಿದೆ. ಈ ಸಿನೆಮಾ ನೋಡಿ ಹೊರಗೆ ಬರುವಾಗ ಎಲ್ಲರು ಕಣ್ಣೀರಿಡುತ್ತ ಬರುವುದು ಅಂತೂ ಖಚಿತ. ಅಷ್ಟು ಚೆನ್ನಾಗಿ ಹಾಸ್ಯ, ನಾಟಕ, ಭಾವನಾತ್ಮಕವಾಗಿ ಮೂಡಿ ಬರುವಂತೆ ನಿರ್ದೇಶಕ ಕಿರಣ್ ರಾಜ್ ನೋಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಚಾರ್ಲಿ ಹಾಗು ಧರ್ಮ( ರಕ್ಷಿತ್ ಶೆಟ್ಟಿ) ಅಭಿನಯಿಸಿದ್ದಾರೆ. ಕನ್ನಡಿಗರೆಲ್ಲರೂ ಇದನ್ನು ಸಿನೆಮಾ ಮಂದಿರದಲ್ಲಿ ನೋಡಲೇಬೇಕೆಂದು ನಾವು ಹೇಳುತ್ತೇವೆ. ನೀವು ಸಿನೆಮಾ ನೋಡಿದರೆ ನಿಮ್ಮ ಅಭಿಪ್ರಾಯ ಕಾಮೆಂಟ್ ಅಲ್ಲಿ ತಿಳಿಸಿ.

Leave A Reply

Your email address will not be published.