ಮನೆಯಲ್ಲಿ ಫುಲ್ ಆಕ್ಟಿವ್ ಆಗಿ, ಎಲ್ಲರ ಜೊತೆ ಬಾರಿ ಮಾತನಾಡುತ್ತಿದ್ದ ಅರುಣ್ ಸಾಗರ್ ಶಾಕ್: ನೇರವಾಗಿ ಗೊಂಬೆ ಹೇಳಿದ್ದೇನು ಗೊತ್ತೇ??

151

ಬಿಗ್ ಬಾಸ್ ಕನ್ನಡ ಸೀಸನ್ 9, ಪ್ರವೀಣರು ಮತ್ತು ನವೀನರು ಎನ್ನುವ ಹೊಸ ಕಾನ್ಸೆಪ್ಟ್ ಇಂದ ಶುರುವಾಗಿದೆ. ಬಿಗ್ ಮನೆಯಲ್ಲಿ ಒಂದು ವಾರ ಕಳೆಯುವ ಹೊತ್ತಿಗೆ ಈಗಾಗಲೇ ಜಗಳ, ವಾದ ವಿವಾದ, ಮಾತು, ಪ್ರೀತಿ, ಸ್ನೇಹ ಭಾವನಾತ್ಮಕತೆ ಎಲ್ಲವನ್ನು ಬಿಗ್ ಬಾಸ್ ಮನೆಯಲ್ಲಿ ನೋಡುವ ಅವಕಾಶ ಸಿಕ್ಕಿದೆ. ಬಿಗ್ ಮನೆಯಲ್ಲಿ ಎಲ್ಲರನ್ನು ರಂಜಿಸುತ್ತಿರುವ ಸ್ಫರ್ಧಿ ಅರುಣ್ ಸಾಗರ್ ಅವರು, ಇದೀಗ ಇವರು ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ಕೋಪಕ್ಕೆ ಒಳಗಾಗಿದ್ದಾರೆ. ಬಿಗ್ ಮನೆ ಸದಸ್ಯರು ಅರುಣ್ ಸಾಗರ್ ಅವರ ವರ್ತನೆಯಿಂದ ಬೇಸರಗೊಂಡಿದ್ದಾರೆ.

ಈ ವಾರದ ಟಾಸ್ಕ್ ನಲ್ಲಿ ಬಿಗ್ ಬಾಸ್ ಕಲ್ಲು ಹೊಡೆಯುವ ಟಾಸ್ಕ್ ನೀಡಿದ್ದರು, ಇದನ್ನು ಪ್ರಶಾಂತ್ ಸಂಬರ್ಗಿ ಮತ್ತು ವಿನೋದ್, ಹಾಗೂ ಅರುಣ್ ಸಾಗರ್ ಮತ್ತು ನವಾಜ್ ಜೋಡಿ ಆಡಿದರು. ಈ ಟಾಸ್ಕ್ ಮುಗಿದ ಬಳಿಕ ಬಿಗ್ ಬಾಸ್ ಫಲಿತಾಂಶ ಹೇಳುವುದಕ್ಕಿಂತ ಮೊದಲು ಅರುಣ್ ಸಾಗರ್ ಅವರು ಜೋರಾಗಿ ಕೂಗಾಡಿದ್ದಾರೆ. ಇದರಿಂದ ಮನೆ ಮಂದಿಗೆ ಬೇಸರವಾಗಿದೆ. ಅನುಪಮಾ ಗೌಡ, ನೇಹಾ ಗೌಡ ಮತ್ತು ರೂಪೇಶ್ ಶೆಟ್ಟಿ ಬೇಸರಗೊಳ್ಳುತ್ತಾರೆ, ಆಗಲು ಅರುಣ್ ಸಾಗರ್ ಅವರು ಕಿರುಚುವುದನ್ನು ನಿಲ್ಲಿಸುವುದಿಲ್ಲ. ಆಗ ಅನುಪಮಾ ಗೌಡ ಅವರು, ಬಿಗ್ ಬಾಸ್ ಮಾತಿಗೆ ರೆಸ್ಪೆಕ್ಟ್ ಕೊಡಿ ಸರ್ ಎಂದು ಅರುಣ್ ಸಾಗರ್ ಅವರಿಗೆ ಹೇಳಿದ್ದಾರೆ.

ನೇಹಾ ಗೌಡ ಅವರು, ನೆಕ್ಸ್ಟ್ ಟೈಮ್ ಹೇಳಲ್ಲ.. ಹಿರಿಯರು ಅಂತ ಇಷ್ಟು ದಿನ ಸುಮ್ಮನೆ ಇದ್ವಿ, ಇನ್ನುಮುಂದೆ ಟ್ರೀಟ್ ಮಾಡೋದು ಬೇರೆ ಥರಾನೇ ಇರುತ್ತೆ..ಎಂದು ಅರುಣ್ ಸಾಗರ್ ಅವರಿಗೆ ವಾರ್ನಿಂಗ್ ನೀಡಿದ್ದಾರೆ. ಅರುಣ್ ಸಾಗರ್ ಇನ್ನುಮುಂದೆ ಹೇಗಿರುತ್ತಾರೆ ಎಂದು ತಿಳಿಯಲು ಬಿಗ್ ಬಾಸ್ ಎಪಿಸೋಡ್ ಗಳನ್ನು ನೋಡಬೇಕಿದೆ. ಅರುಣ್ ಸಾಗರ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 1ರಲ್ಲಿ ಸ್ಪರ್ಧಿಯಾಗಿ ಬಂದು, ಮೊದಲ ರನ್ನರ್ ಅಪ್ ಆಗಿದ್ದರು. ಇದೀಗ ಮತ್ತೊಂದು ಸಾರಿ ಬಿಗ್ ಬಾಸ್ ಗೆ ಬರುವ ಅವಕಾಶ ಪಡೆದುಕೊಂಡಿದ್ದಾರೆ.

Leave A Reply

Your email address will not be published.