ಮೊದಲ ದಿನದ KGF Chapter 2 ಕಲೆಕ್ಷನ್ ಎಷ್ಟು ಗೊತ್ತೇ? ಎಲ್ಲ ಹಿಂದಿನ ರೆಕಾರ್ಡ್ ಮೂಲೆಗುಂಪು ಮಾಡಿದ ಪ್ರಶಾಂತ್ ನೀಲ್ ಸಿನಿಮಾ.

407

ಪ್ರಶಾಂತ್ ನೀಲ್ ನಿರ್ದೇಶನದ ಹಾಗು ರಾಕಿಂಗ್ ಸ್ಟಾರ್ ಯಶ್ ಅಭಿನಯದ ದೇಶದ ಬಹು ನಿರೀಕ್ಷಿತ ಚಿತ್ರ KGF Chapter 2 ಕೊನೆಗೂ ತೆರೆ ಕಂಡಿದ್ದು ಅತ್ಯಂತ ಉತ್ತಮ ಓಪನಿಂಗ್ ಪಡೆಯಿತು. ಅದೇ ರೀತಿ ಪ್ರೇಕ್ಷಕರಿಂದ ಕೂಡ ಉತ್ತಮ ರೆಸ್ಪಾನ್ಸ್ ಚಿತ್ರಕ್ಕೆ ಬರುತ್ತಿದೆ. ಕೆಲ ಸಿನಿ ವಿಮರ್ಶಕರ ಪ್ರಕಾರ ಈ ಚಿತ್ರವೂ ಮೊದಲ ದಿನದಲ್ಲೇ ೧೩೦ ಕೋಟಿ ಗು ಅಧಿಕ ಗಳಿಕೆ ಮಾಡಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆ ಬಂದಿರುವುದರಿಂದ ಇನ್ನು ಬರುವ ದಿನಗಳಲ್ಲಿ ಉತ್ತಮ ಗಳಿಕೆ ಕಾಣಲಿದೆ ಎಂದು ಕೂಡ ಅಭಿಪ್ರಾಯ ಪಟ್ಟಿದ್ದಾರೆ.

ತೆರೆ ಮೇಲೆ ಬರಲು ಹಲವು ಬರಿ ಮುಂದೂಡಲ್ಪಟ್ಟಿತು. ಕೊನೆಗೂ ವಿಶ್ವದ ಬಹು ನಿರೀಕ್ಷಿತ ಸಿನಿಮಾ KGF ಚಾಪ್ಟರ್ 2 ಏಪ್ರಿಲ್ ೧೪,೨೦೨೨ ರಂದು ತೆರೆ ಮೇಲೆ ಬಂದೆ ಬಿಟ್ಟಿತು. KGF 1 ರ ಮುಂದುವರೆದ ಭಾಗವಾಗಿ KGF 2 ಬಂದಿದು ಜನರು ಯಶ್ ಹಾಗು ಉಳಿದ ನಂತರ ನಟನೆಗೆ ಫಿದಾ ಆಗಿದ್ದರೆ. ಅಲ್ಲದೆ ರವಿ ಬಸರೂರು ಅವರ bgm ಹಾಗು ಸಿನಿಮಾದ ಸಿನಿಮಾಟೋಗ್ರಫಿ ಹಾಲಿವುಡ್ ರೇಂಜ್ ಅಲ್ಲಿ ಇದೆ ಎಂದು ಕೂಡ ಹೇಳಿದ್ದಾರೆ ಪ್ರೇಕ್ಷಕರು. ಅದು ಎಲ್ಲರಿಗು ಕಾಣುತ್ತದೆ ಕೂಡ. ಕೇವಲ ಹಿಂದಿ ಆವೃತ್ತಿಯೇ ೫೦ ಕೋಟಿ ಗು ಅಧಿಕ ಗಳಿಸಿದೆ ಎಂದು ಸಿನಿಮಾ ವಿಶ್ಲೇಷಕರು ಹೇಳಿದ್ದಾರೆ.

ಪ್ರೇಕ್ಷಕರ ಸಕಾರಾತ್ಮಕ ವಿಮರ್ಶೆ ಹಾಗು ಸಿನಿ ವಿಮರ್ಶಕರ ಸಕಾರಾತ್ಮಕ ವಿಮರ್ಶೆ ಕಾರಣದಿಂದಾಗಿ ಈ ದಿನ ಶೋ ಕೂಡ ಹೆಚ್ಚು ಮಾಡಲಾಗಿದೆ. ಅದೇ ರೀತಿ ಸಕಾರಾತ್ಮಕ ವಿಮರ್ಶೆಯಿಂದ ಎರಡನೇ ದಿನದ ಕಲೆಕ್ಷನ್ ಕೂಡ ಮೊದಲ ದಿನಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ. ಹಿಂದಿ ಸಿನೆಮಾ ಜೆರ್ಸಿ KGF ಜೊತೆ ಸಿನೆಮಾ ಬಿಡುಗಡೆ ಮಾಡದೇ ಉತ್ತಮ ಕೆಲಸ ಮಾಡಿದೆ ಎಂದು ಕೂಡ ಹೇಳಲಾಗುತ್ತಿದೆ. ಇದೀಗ KGF Chapter 3 ಕೂಡ ಬರಲಿದೆ ಎಂದು ನಿರ್ದೇಶಕರು ಅಂತಿಮವಾಗಿ ಸಣ್ಣ ಕ್ಲೂ ಬಿಟ್ಟು ಹೋಗಿದ್ದಾರೆ.

Leave A Reply

Your email address will not be published.