ಯಶ್ ರವರ KGF -2 ಎದುರು ಸೋಲೊಪ್ಪಿಕೊಂಡ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್.
ಯಶ್ ಎಂದರೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಾಯಕ ನಟ. ಯಾವುದೇ ಒಂದು ಹಿನ್ನಲೆಯಿಲ್ಲದ ಕಿರುತೆರೆ ಮೂಲಕ ಬಂದು ಇಷ್ಟೊಂದು ಮಟ್ಟಿಗೆ ಬೆಳೆದು ನಿಂತಿದ್ದಾರೆ ಎಂದರೆ ಅದು ಅವರ ಪರಿಶ್ರಮವೇ ಸರಿ. ಪರಿಶ್ರಮಕ್ಕೆ ಎಂದಿಗೂ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂಬುದಕ್ಕೆ ಯಶ್ ಒಂದು ನೈಜ ಉದಾಹರಣೆ. ಅವರ ಎಲ್ಲ ಸಿನೆಮಾ ನೋಡಿದರು ಕಥೆ ಉತ್ತಮವಾಗಿರುತ್ತದೆ. ಅದೇ ಕಾರಣಕ್ಕೆ ಮಾಡಿದ ಸ್ವಲ್ಪ ಸಿನಿಮಾದಲ್ಲಿ ಉತ್ತಮ ಹೆಸರನ್ನು ಗಳಿಸಿದ್ದಾರೆ.
ಹಾಗಾದರೆ ಇದೀಗ ಯಶ್ ಅವರನ್ನು ನೋಡಿ ಅಮೀರ್ ಖಾನ್ ಭಯ ಪಟ್ಟಿದ್ದು ಯಾಕೆ. ಹೌದು ಏಪ್ರಿಲ್ 14 ರಂದು ಇಡೀ ವಿಶ್ವವೇ ಖಾತುರದಿಂದ ಕಾಯುತ್ತಿರುವ “KGF 2” ಸಿನೆಮಾ ತೆರೆ ಕಾಣಲಿದ್ದು. ಅದೇ ದಿನದಂದು ಆಮೀರ್ ಖಾನ್ ನಟನೆಯ “ಲಾಲ್ ಸಿಂಗ್ ಚಡ್ಡಾ” ತೆರೆ ಕಾಣಲಿದೆ . ಆದರೆ ಈ ಹಿಂದೆ ಶಾರುಕ್ ಖಾನ್ ಕೂಡ ಇದೆ ಸಾಹಸಕ್ಕೆ ಕೈ ಹಾಕಿ ತಮ್ಮ ಕೈ ಸುಟ್ಟು ಕೊಂಡಿದ್ದರು. KGF ಚಾಪ್ಟರ್ 1 ತೆರೆ ಕಂಡಾಗ, ಶಾರುಕ್ ಖಾನ್ ನಟನೆಯ ಹೀರೋ ಸಿನಿಮಾ ಕೂಡ ತೆರೆ ಕಂಡಿತ್ತು.
ಆದರೆ KGF ಅಬ್ಬರಕ್ಕೆ ಬಂಡವಾಳ ಕೂಡ ಕಳೆದು ಕೊಂಡಿತ್ತು ಸಿನೆಮಾ. ಬಾಲಿವುಡ್ ರಾರಾಜಿಸುವ ಮುಂಬೈ ಮಹಾರಾಷ್ಟ್ರ ದಲ್ಲಿನ ಚಿತ್ರ ಮಂದಿರಗಳನ್ನು ಕೂಡ ಯಶ್ ಅವರ KGF ಸಿನೆಮಾ ಮುತ್ತಿತ್ತು. ಇದೆ ಕಾರಣಕ್ಕೆ ಇದೀಗ ಆಮೀರ್ ಖಾನ್ ಕೂಡ ತಮ್ಮ ಸಿನೆಮಾ ರಿಲೀಸ್ ಡೇಟ್ ಮುಂದೂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಿಂತ ಮೊದಲು ಬಾಲಿವುಡ್ ನ ಯಂಗ್ ನಟ ವರುಣ್ ಧವನ್ ಸಿನೆಮಾ ಕೂಡ KGF ೨ ಬಿಡುಗಡೆ ದಿನವೇ ರಿಲೀಸ್ ಆಗುವುದಿತ್ತು ಆದರೆ ಯಶ್ ಸಿನಿಮಾ ಮುಂದೆ ನಿಲ್ಲುವುದಿಲ್ಲ ಎಂದು ಗೊತ್ತಾದ ಕೂಡಲೇ ಅದರ ರಿಲೀಸ್ ದಿನಾಂಕ ಮುಂದೂಡಿದ್ದಾರೆ.