ರಾಮ್ ಚರಣ್ ಪತ್ನಿ ಉಪಾಸನಾ ರವರ ಆಸ್ತಿ ಎಷ್ಟು ಗೊತ್ತೇ?? ಈಕೆಯ ಮುಂದೆ ಸ್ಟಾರ್ ನಟರು ಕೂಡ ಡಮ್ಮಿ. ಎಷ್ಟಿದೆ ಗೊತ್ತೇ??

221

ಟಾಲಿವುಡ್ ನಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರನ್ನು ತಂದೆಗೆ ತಕ್ಕ ಮಗ ಎಂದು ಕರೆಯುತ್ತಾರೆ. ಚಿರಂಜೀವಿ ಅವರ ಹಾಗೆಯೇ ರಾಮ್ ಚರಣ್ ಸಹ ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ. ಯಾವುದೇ ವಿವಾದಗಳಿಗೂ ಸಿಕ್ಕಿಕೊಳ್ಳದೆ, ತಾನಾಯಿತು ತನ್ನ ಕೆಲಸ ಆಯಿತು ಎಂದು ಇರುತ್ತಾರೆ ರಾಮ್ ಚರಣ್. ಸಿನಿಮಾಗಳ ವಿಚಾರದಲ್ಲಿ ಸಹ ರಾಮ್ ಚರಣ್ ಅವರು ತಂದೆಯ ಹಾಗೆ ಹಿಟ್ ಆಗುವಂತಹ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ, ಇವರ ಪತ್ನಿ ಉಪಾಸನಾ ಕೊನಿಡೇಲಾ ಅವರಿಗೂ ಸಹ ದೊಡ್ಡ ಮಟ್ಟರ ಫಾಲೋಯಿಂಗ್ ಇದೆ. ಮೆಗಾಸ್ಟಾರ್ ಕುಟುಂಬದ ಸೊಸೆ ಎನ್ನುವ ಕಾರಣಕ್ಕೆ, ಉಪಾಸನಾ ಅವರಿಗೆ ಇರುವ ಜನಪ್ರಿಯತೆ ಅಷ್ಟಿಷ್ಟಲ್ಲ.

ಉಪಾಸನಾ ಅವರು ಯಾರೋ ಅಲ್ಲ, ಕಾಮಿನೇಮಿ ಕುಟುಂಬದ ಕುಡಿ ಇವರು, ಕಾಮಿನೇನಿ ಪ್ರತಾಪ್ ರೆಡ್ಡಿ ಅವರ ಸ್ವಂತ ಮೊಮ್ಮಗಳು. ಅನಿಲ್ ಕುಮಾರ್ ಕಾಮಿನೇನಿ ಅವರ ಮಗಳು. ಇವರದ್ದು ದೊಮಕೊಂಡ ಸಂಸ್ಥಾನಕ್ಕೆ ಸೇರಿದ ಕುಟುಂಬ, ಆ ಕುಟುಂಬದ ಕೂಸು ಉಪಾಸನಾ. ಉಪಾಸನಾ ಅವರು ಅಪೋಲೊ ಆಸ್ಪತ್ರೆಯ ಉಪಾಧ್ಯಕ್ಷರು, ಸೋಷಿಯಲ್ ಮೀಡಿಯಾದಲ್ಲಿ ಆರೋಗ್ಯದ ವಿಚಾರದಲ್ಲಿ ಆಗಾಗ ಸಲಹೆ ನೀಡುತ್ತಾರೆ ಉಪಾಸನಾ ಅವರು. ಜೊತೆಗೆ ಮಹಿಳೆಯರ ಆರೋಗ್ಯದ ಬಗ್ಗೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಪ್ರಸ್ತುತ ಇವರ ಆಸ್ತಿ ಬಗ್ಗೆ ಭಾರಿ ಸುದ್ದಿಯಾಗುತ್ತಿದೆ.

ಉಪಾಸನಾ ಅವರ ಒಟ್ಟು ಆಸ್ತಿ ಎಷ್ಟಿರಬಹುದು ಎನ್ನುವ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದ್ದು, ಅಪೋಲೊ ಗ್ರೂಪ್ ನಲ್ಲಿ ಉಪಾಸನಾ ಅವರ ಒಟ್ಟು ಆಸ್ತಿ 10,000 ಕೋಟಿ ರೂಪಾಯಿ ಆಗಿದೆ, ಅದನ್ನು ಹೊರತುಪಡಿಸಿ ನೂರಾರು ಕೋಟಿ ರೂಪಾಯಿ ಆಸ್ತಿ ಇವರ ಹೆಸರಿನಲ್ಲಿದೆ, ಒಟ್ಟಾರೆ ಸಿಕ್ಕಿರುವ ಮಾಹಿತಿ ಪ್ರಕಾರ, ಉಪಾಸನಾ ಅವರು 12,000 ಕೋಟಿ ಆಸ್ತಿಗೆ ಒಡತಿ ಎಂದು ಮಾಹಿತಿ ಸಿಕ್ಕಿದೆ. ಇವರ ಆಸ್ತಿ ತೆಲುಗು ಚಿತ್ರರಂಗದ ಯಾವ ಸ್ಟಾರ್ ಹೀರೋ ಆಸ್ತಿಗೂ ಕಡಿಮೆ ಇಲ್ಲ, ಆದರೂ ಉಪಾಸನಾ ಅವರು ಬಹಳ ಸರಕವಾಗಿರತ್ತಾರೆ, ಜೊತೆಗೆ ಬುದ್ಧಿವಂತರು ಆಗಿದ್ದಾರೆ.

Leave A Reply

Your email address will not be published.