ರೆಕಾರ್ಡ್ಸ್ ಗಳಿಗೆ ಅಡಿಪಾಯ ಹಾಕಿದ್ದೆ ನಾನು. KGF Chapter 2 ಬಗ್ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತು.

524

ಯಶ್ ನಟನೆಯ KGF ಚಾಪ್ಟರ್ ೨ ಕಲೆಕ್ಷನ್ ವಿಷಯದಲ್ಲಿ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ. ಇಡೀ ವಿಶ್ವವೇ ಕನ್ನಡ ಸಿನೆಮಾ ರಂಗದತ್ತ ತಿರುಗಿ ನೋಡುತ್ತಿದೆ. ಇದಕ್ಕೆ ಅನೇಕರು ಹೆಮ್ಮೆಯಿಂದ ನಮ್ಮ ದೇಶದ ಸಿನೆಮಾ ಅಂದರೆ ಇನ್ನು ಕೆಲ ಬಾಲಿವುಡ್ ನವರು ಭಾಷಾ ತಡೆ ಗೋಡೆ ತರುತ್ತಿದ್ದಾರೆ. ಇದಕ್ಕೆ ತಕ್ಕ ಪಾಠ ಇತ್ತೀಚಿಗೆ ಬಿಡುಗಡೆ ಆದ ಅವರ ಸಿನೆಮಾದ ಕಲೆಕ್ಷನ್ ಗಳಲ್ಲೇ ಗೊತ್ತಾಗುತ್ತೆ ಅವರಿಗೆ ದಕ್ಷಿಣ ಭಾರತದ ಸಿನೆಮಾದ ಯಶಸ್ಸಿನಿಂದ ಎಷ್ಟು ಉರಿದಿರಬೇಕು ಎಂದು. ಬಿಡುಗಡೆ ಆಗಿ ೩ ವಾರ ಆದರೂ ಕೂಡ ಇನ್ನು ರಾಕಿ ಭಾಯ್ ಹವಾ ಹಾಗೆ ಇದೆ.

ಕನ್ನಡದ ಸೂಪರ್ ಸ್ಟಾರ್ ರವಿಚಂದ್ರನ್ ಅವರು ಕೂಡ ಈ KGF ಬಗ್ಗೆ ಎರಡು ಮಾತುಗಳನ್ನು ಆಡಿದ್ದಾರೆ. KGF ೨ ಅನೇಕ ದಾಖಲೆಗಳನ್ನು ಮಾಡಿದೆ ಮಾಡಿರಬಹುದು, ಆದರೆ ಈ ದಾಖಲೆಗಳಿಗೆ ಫೌಂಡೇಶನ್ ಹಾಕಿದ್ದು ಯಾರು? ನಾನೆ ಫೌಂಡೇಶನ್ ಹಾಕಿದ್ದು . ಶಾಂತಿ ಕ್ರಾಂತಿ ಫೌಂಡೇಶನ್ ಆಯ್ತು, ಇನ್ನು KGF ದಾಖಲೆ ಸಮದೂಗಿಸಲು ಎಲ್ಲರು ಗುರಿಹೊಂದಬೇಕು ಎಂದು ಹೇಳಿದ್ದಾರೆ. ಇದನ್ನು ಇಡೀ ಚಿತ್ರರಂಗ ಕುಳಿತು ಚರ್ಚಿಸಬೇಕು ಎನ್ನುವುದು ರವಿಚಂದ್ರನ್ ಮಾತು.

ಅದೇ ಸಮಯದಲ್ಲಿ ಟಿಕೆಟ್ ಗಳ ಬೆಳೆಗಳ ಬಗ್ಗೆಯೂ ಮಾತಾಡಿದ್ದಾರೆ ವಿ ರವಿಚಂದ್ರನ್. ಈ ಹಿಂದೆ ೧೯೮೮ ರಲ್ಲಿ ಫಿಲಂ ಚೇಂಬರ್ ಅಲ್ಲಿ ಒಂದು ಗಲಾಟೆ ನಡೆದಿದೆ. ಹೆಚ್ಚು ಚಿತ್ರ ಮಾಡಿದ ಚಿತ್ರಕ್ಕೂ, ಸಾದಾರಣ ಬಂಡವಾಳ ಹಾಕಿ ಮಾಡಿದ ಚಿತ್ರದ ಟಿಕೆಟ್ ಗು ಒಂದೇ ರೀತಿಯ ಬೆಲೆ ಹಾಕಲಾಗುತ್ತಿತ್ತು. ಈ ಒಂದೇ ರೀತಿಯ ರೇಟ್ ಆ ಅಡ್ಮಿಶನ್ ಗೆ ರವಿಚಂದ್ರನ್ ಅಂದು ಗಲಾಟೆ ಮಾಡಿದ್ದರಂತೆ. ಅಂದು ಅದು ಸಾಧ್ಯವಾಗಲಿಲ್ಲ ಆದರೆ KGF ಇಂದು ಅದನ್ನು ಸಾಧ್ಯ ಮಾಡಿದೆ. ಒಂದು ಟಿಕೆಟ್ ಬೆಲೆ ೨೦೦೦ ರೂಪಾಯಿಗಳವರೆಗೂ ಮಾರಾಟವಾಗುತ್ತಿದೆ.

advertisement

ಇನ್ನು ಹೆಲೇಬೇಕೆಂದರೆ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ KGF ೨ ಒಟ್ಟು ೧೦೦೦ ಕೋಟಿ ದಾಟಿದೆ. ಇದಲ್ಲದೆ ಹಿಂದಿ ಭಾಷೆಯಲ್ಲಿ ಕೂಡ ೪೦೦ ಕೋಟಿ ಗಳಿಸುವತ್ತ ದಾಪುಗಾಲು ಹಾಕಿದೆ. ಅಲ್ಲದೆ ತಮಿಳಿನಲ್ಲಿ ಕನ್ನಡದ ಮೊದಲ ಸಿನೆಮಾ ೧೦೦ ಕೋಟಿ ಮಾಡಿದೆ. ಬೀಸ್ಟ್ ಸಿನೆಮಾ KGF ಎದುರು ಮಕಾಡೆ ಮಲಗಿದ್ದು ಇದೀಗ ಅಲ್ಲಿನ ವಿಜಯ್ ಅಭಿಮಾನಿಗಳೇ ಒಪ್ಪಿಕೊಂಡಿದ್ದಾರೆ. KGF ಸಿನಿಮಾ ಅಮೆಜಾನ್ ಪ್ರೈಮ್ ಬರೋಬ್ಬರಿ ೩೨೦ ಕೋಟಿ ಕೊಟ್ಟು OTT ರೈಟ್ಸ್ ಪಡೆದಿದೆ. ಇಷ್ಟೊಂದು ಕನ್ನಡ ಸಿನೆಮಾಗೆ ಹೊಸತ್ತೇ. ಒಟ್ಟಿಗೆ ಹೇಳಬೇಕೆಂದರೆ KGF ಒಟ್ಟಾರೆ ಎಲ್ಲ ಕಲೆಕ್ಷನ್ ಸೇರಿಸಿದರೆ ೧,೫೦೦ ಕ್ಕೂ ಅಧಿಕ ಕೋಟಿ ಗಳಿಸಿದೆ.

Leave A Reply

Your email address will not be published.