ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಆಗುವುದು ನೋಡಿದ್ದೀರಿ, ಆದರೆ ಮದುವೆಯಿಂದ ಕೋಟಿಗಟ್ಟಲೆ ಹಣ ಸಂಪಾದಿಸಿದ ಈ ಪ್ರಸಿದ್ಧ ಜೋಡಿಯ ಬಗೆಗೆ ಗೊತ್ತೇ ನಿಮಗೆ?

946

ಮದುವೆ ಎಂಬುವುದು ಎಲ್ಲರ ಜೀವನದ ಮಹತ್ತರ ಘಟ್ಟ. ವಿಧ್ಯಾಭ್ಯಾಸ , ಮನೆ ಮತ್ತು ಮದುವೆ ಎಂಬುವುದು ಮೂರು ಪ್ರಮುಖ ಘಟ್ಟಗಳು. ಈ ಮದುವೆ ಮಾಡಲೆಂದೇ ಎಷ್ಟೋ ವರ್ಷಗಳಿಂದ ಜನರು ಹಣ ಒಟ್ಟು ಮಾಡಿಸಿ ಇಡುತ್ತಾರೆ. ಮದುವೆ ಎಂದರೆ ಸಣ್ಣ ಖರ್ಚಿನಲ್ಲಿ ಆಗುವುದಿಲ್ಲ, ಅದಕ್ಕೆ 5 ರಿಂದ 10 ಲಕ್ಷ ವರೆಗೂ ಖರ್ಚು ಮಾಡುತ್ತಾರೆ. ಈ ಮದುವೆಯ ಖರ್ಚುಗಳು ಮನೆ ಅಂತಸ್ತಿನಂತೆ ಬದಲಾಗುತ್ತದೆ. ಕೋಟಿಗಟ್ಟಲೆ ಖರ್ಚು ಮಾಡುವವರಿದ್ದಾರೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವವರು ಇದ್ದಾರೆ. ದೇವಸ್ಥಾನದಲ್ಲಿ ಸಿಂಪಲ್ ಆಗಿ ಮದುವೆ ಆಗುವವರು ಕೂಡ ಇದ್ದಾರೆ. ಆದರೆ ನಾವು ಈಗ ತಿಳಿಯಲು ಹೊರಟ ಮದುವೆಯ ವಿಚಾರ ಸ್ವಲ್ಪ ಭಿನ್ನ ಇಲ್ಲಿ ಒಂದು ರೂಪಾಯಿ ಕೂಡ ಖರ್ಚು ಮಾಡದೆ ಆದ ಮದುವೆ. ಇಲ್ಲಿನ ಖರ್ಚಿನ ಬದಲಾಗಿ ಮದುವೆಯಿಂದ ಆದಾಯ ಪಡೆದಿದ್ದಾರೆ.

ಹೌದು ಇದು ಸಾಮಾನ್ಯ ಮದುವೆಯ ಜೋಡಿ ಅಲ್ಲ ಇದು ಬಾಲಿವುಡ್ ಸೂಪರ್ ಸ್ಟಾರ್ ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆ. ಎಷ್ಟೇ ದೊಡ್ಡ ಮನೆತನದ ಮದುವೆ ಆದರೂ ಖರ್ಚು ಮಾಡುವುದು ಕಂಡಿದ್ದೇವೆ ಆದರೆ ಇಲ್ಲಿ ಈ ಇಬ್ಬರು ಜೋಡಿ ಖರ್ಚಿನ ಬದಲಿಗೆ ಆದಾಯ ಪಡೆದಿದ್ದಾರೆ. ಹೌದು ಇವರಿಬ್ಬರ ಮದುವೆಯ ಲೈವ್ ಅಪ್ಡೇಟ್ ನೀಡುವ ಹಕ್ಕನ್ನು ಅಮೆಜಾನ್ ಪ್ರೈಮ್ ಗೆ ಮಾರಾಟ ಮಾಡಲಾಗಿತ್ತು. ಇದರಿಂದ ಈ ಜೋಡಿಗೆ 80 ಕೋಟಿಗೂ ಹೆಚ್ಚು ಆದಾಯ ಬಂದಿದೆ. ಹೌದು ಅಚ್ಚರಿ ಎನಿಸಿದರು ಸತ್ಯ ಸಂಗತಿ ಇದು. ಅದೇನೇ ಆಗಲಿ ವಿದೇಶಿ ಒಬ್ಬಳು ಭಾರತೀಯ ಹುಡುಗನ ಮದುವೆ ಆಗಿ ಸನಾತನ ಧರ್ಮ ಸ್ವೀಕರಿಸಿರುವುದು ನಿಜವಾಗಿ ಸ್ವಾಗತಾರ್ಹ.

Leave A Reply

Your email address will not be published.