ವರ್ಕ್ ಲೋಡ್ ಇದೆ ಎಂದು ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಗೆ ಕಾರಣ ಹೇಳಿದ ಆಟಗಾರರಿಗೆ ರುಬ್ಬಿದ ಸುನಿಲ್ ಗವಾಸ್ಕರ್.
ಅಡಿಲೇಡ್ ಅಂಗಳದಲ್ಲಿ ಭಾರತ ಆಟಗಾರರ ನೀರಸ ಪ್ರದರ್ಶನದಿಂದ ತಂಡ ಇಂಗ್ಲೆಂಡ್ ಎದುರಿನ ಟಿ-೨೦ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿ ಮನೆಗೆ ತೆರಳಿದೆ. ಇಂಗ್ಲೆಂಡ್ ೧೦ ವಿಕೆಟ್ ಗಳ ಗೆಲುವು ದಾಖಲಿಸಿ ಫೈನಲ್ ತಲುಪಿದೆ. ಇದರ ಜೊತೆಗೆ ಸೋಲಿಗೆ ಒಬ್ಬರು ಇನ್ನೊಬ್ಬರ ಮೇಲೆ ಗೂಬೆ ಕುರಿಸುತ್ತಿದ್ದರೆ ವಿನಃ ಇವರ ತಪ್ಪಿದೆ ಎಂದು ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ಎಲ್ಲ ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದರೆ, ಹಿರಿಯ ಆಟಗಾರರು ಕೂಡ ಕೋಪ ಗೊಂಡಿದ್ದಾರೆ. ಸುನಿಲ್ ಗವಾಸ್ಕರ್ ಕೂಡ ಅವರಲ್ಲಿ ಒಬ್ಬರು.
ಟ್ರಾವೆಲ್ ಇದೆ ತುಂಬಾ ಎಂದು ವರ್ಕ್ ಲೋಡ್ ಕಾರಣ ಹೇಳಬಾರದು ಯಾವುದೇ ಆಟಗಾರರು. ಇಂತಹ ಚಿಕ್ಕ ಕಾರಣ ಹೇಳುವುದನ್ನು ಮೊದಲು ಬಿಡಬೇಕು. ಮುಂದೆ ತಂಡದಲ್ಲಿ ಬದಲಾವಣೆ ಆಗಿಯೇ ಆಗುತ್ತದೆ. ನ್ಯೂಜಿಲ್ಯಾಂಡ್ ಸರಣಿಗೆ ಬದಲಾವಣೆ ಮಾಡಲಾಗಿದೆ. ಈ ವರ್ಕ್ ಲೋಡ್ ಎನ್ನುವ ಮಾತು ಕೇಳುತ್ತಲೇ ಇದೆ. ಇದು ಭಾರತಕ್ಕೆ ಆಡುವಾಗ ಮಾತ್ರ ಯಾಕಿರುತ್ತದೆ? ನೀವುಗಳು ಐಪಿಎಲ್ ಅಲ್ಲಿ ಆಡುತ್ತಿರ. ಕಳೆದ ವರ್ಷದ ಐಪಿಎಲ್ ನಲ್ಲೆ 4 ಸೆಂಟರ್ ಗಳಿದ್ದವು. ಅವಾಗ ಒಂದು ಮೈದಾನದಿಂದ ಇನ್ನೊಂದು ಕಡೆಗೆ ಟ್ರಾವೆಲ್ ಮಾಡುತ್ತಿರಲಿಲ್ಲವೇ?
ಐಪಿಎಲ್ ಅಲ್ಲಿ ದಣಿವು ಆಗುತ್ತಿರಲಿಲ್ಲವೇ? ಭಾರತಕ್ಕೆ ಆಡುವಾಗ ಮಾತ್ರ ಈ ಸಂಚಾರದ ದಣಿವು, ವರ್ಕ್ ಲೋಡ್ ಎಲ್ಲ ಬರುವುದೇ? ಇದು ತಪ್ಪು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಇನ್ನು ಸೇರಿಸುತ್ತ, ಬಿಸಿಸಿಐ ಈ ಆಟಗಾರರಿಗೆ ಪಾಂಪೆರ್ ಮಾಡಿದ್ದೂ ಜಾಸ್ತಿ ಆಗಿದೆ. ಆಟಗಾರರಿಗೆ ಒಂದು ಕಠಿಣ ಸಂದೇಶ ನೀಡಲೇ ಬೇಕು. ವರ್ಕ್ ಲೋಡ್ ಹಾಗು ಫಿಟ್ನೆಸ್ ಎರಡು ಒಟ್ಟಿಗೆ ಆಗಲು ಹೇಗೆ ಸಾಧ್ಯ? ನೀವು ಫಿಟ್ ಇದ್ದೀರಾ ಎಂದರೆ ವರ್ಕ್ ಲೋಡ್ ಪ್ರಮೇಯನೇ ಬರಲ್ಲ. ಫಿಟ್ ಆಗಿರಲು ಹಾಗೇನೇ ತಂಡದಲ್ಲಿರಲು ರೆಟೈನರ್ ಫಿ ಕೂಡ ಕೊಡಲಾಗುತ್ತದೆ. ದಣಿವು ಅಂತ ಆಡದೆ ಹೋದರೆ ನಿಮಗೆ ಕೊಡುವ ಹಣ ಕೂಡ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಸುನಿಲ್ ಗವಾಸ್ಕರ್ ಆಟಗಾರರಿಗೆ ಬೆಂಡೆತ್ತಿದ್ದಾರೆ.