ಶೂ ಲೇಸೆ ಕಟ್ಟಿಕೊಳ್ಳಿ ಅಂತ ೭ ಕೋಟಿ ಕೊಟ್ಟ ದೊಡ್ಡ ಕಂಪನಿ. ಇದರ ವಿಚಿತ್ರ ಕಾರಣವೇನು ಗೊತ್ತೇ?
ಜೀವನದಲ್ಲಿ ಎಲ್ಲಾ ರೀತಿಯ ಘಟನೆಗಳನ್ನು ನೋಡಿದ್ದೀರಾ ಕೇಳಿದ್ದೀರಾ ಆದರೆ ಇಂತಹ ಒಂದು ಘಟನೆ ಕೇಳಿರುವ ಸಾಧ್ಯತೆ ಬಾರಿ ಕಡಿಮೆ. ಯಾಕೆಂದರೆ ಇದು ಒಂತರಾ ಓದಲು ವಿಚಿತ್ರ ಎನಿಸಬಹುದು. ಶೂ ತಯಾರಿಕಾ ಕಂಪನಿ ಒಂದು ಒಬ್ಬ ವ್ಯಕ್ತಿ ತನ್ನ ಕಂಪನಿಯ ಶೂ ಖರೀದಿಸಿ ಅದರ ಲೇಸ್ ಕಟ್ಟಿಕೊಳ್ಳಲು ಆತನಿಗೆ ನೀಡಿದ್ದು ಬರೋಬ್ಬರಿ 7 ಕೋಟಿ ಹಣ ಹೌದು .ಆದರೆ ಯಾತಕ್ಕಾಗಿ ಅಷ್ಟೊಂದು ಮೊತ್ತ ಕೊಟ್ಟಿತ್ತು ಎಂದು ಯೋಚನೆ ಮಾಡುತ್ತಿದ್ದಾರೆ ಅದಕ್ಕೆ ಉತ್ತರ ಇಲ್ಲಿದೆ.
ಈ ಘಟನೆ ನಡೆದಿದ್ದು 1970ರಲ್ಲಿ, ಅಂದರೆ ಈ 7 ಕೋಟಿ ರೂಪಾಯಿ ಹಣ ಈಗಿನ ಮಾರುಕಟ್ಟೆ ಬೆಲೆ, ಹಾಗಾದರೆ 1970ರಲ್ಲಿ ಅಷ್ಟೊಂದು ಹಣದ ಮಾರುಕಟ್ಟೆ ಬೆಲೆ ಎಷ್ಟಿದ್ದರಬಹುದು. ಎಲ್ಲಾ ಕಂಪನಿಗಳು ವಿಚಿತ್ರ ರೀತಿಯಲ್ಲಿ ಜಾಹೀರಾತನ್ನು ನೀಡುತ್ತದೆ. ಯಾವುದು ತುಂಬಾ ಜನರನ್ನು ಸೆಳೆಯುತ್ತದೆ ಆ ಕಂಪನಿ ಸ್ವಲ್ಪ ಹಣ ಗಳಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಜಾಹೀರಾತನ್ನು ಆರ್ಟ್ ಎಂದು ಕರೆಯುತ್ತಾರೆ. ಅದು ಮತ್ಯಾವ ಕಂಪನಿ ಅಲ್ಲ ನಮಗೆಲ್ಲ ಗೊತ್ತಿರುವ ಪೂಮ (PUMA) ಕಂಪನಿ. ಹೌದು ಅದು ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಒಂದು ಪ್ರಯತ್ನಕ್ಕೆ ಕೈ ಹಾಕಿತ್ತು 1970 ರಲ್ಲಿ.
ಅಂದು ಅಂತಾರಾಷ್ಟ್ರೀಯ ಫುಟ್ ಬಾಲ್ ವರ್ಲ್ಡ್ ಕಪ್ ಪಂದ್ಯಾಟ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿಭಿನ್ನವಾಗಿ ಜಾಹೀರಾತನ್ನು ಮಾಡಬೇಕು, ತಮ್ಮ ಪ್ರಾಡಕ್ಟ್ ಮಾರುಕಟ್ಟೆಯಲ್ಲಿ ಸದ್ದು ಮಾಡಬೇಕು ಎಂಬ ನಿಟ್ಟಿನಲ್ಲಿ ಫುಟ್ಬಾಲ್ ಆಟಗಾರನ ಜೊತೆ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಅವರು ಮತ್ಯಾರು ಅಲ್ಲ ಫುಟ್ಬಾಲ್ ದಂತಕಥೆ ಪೀಲೆ ಅವರು. ಹೌದು ಪೀಲೆ ಅವರ ಜೊತೆ ಮಾಡಿಕೊಂಡ ಒಪ್ಪಂದ ಪ್ರಕಾರ ಅವರು ಪಂದ್ಯದ ವೇಳೆ ನಿಂತು ತಮ್ಮ ಶೂ ಲೇಸ್ ಕಟ್ಟಿಕೊಳ್ಳಬೇಕು ಎಂದು. ಈ ಸಂದರ್ಭದಲ್ಲಿ ಕ್ಯಾಮೆರಾ ಇವರನ್ನು ಫೋಕಸ್ ಮಾಡಿಯೇ ಮಾಡುತ್ತದೆ. ಆಗ ಪೂಮಾ ಹೆಸರು ಎಲ್ಲರಿಗೂ ಗೊತ್ತಾಗುತ್ತದೆ ಎಂಬ ನಿಟ್ಟಿನಲ್ಲಿ 20,000ಡಾಲರ್ ನ ಒಪ್ಪಂದ ಮಾಡಿಕೊಂಡಿತ್ತು. ಅಂದರೆ ಇಂದಿನ ಮಾರುಕಟ್ಟೆ ಬೆಲೆ ಪ್ರಕಾರ ಅದು 7ಕೋಟಿ ರೂಪಾಯಿ ಆಗುತ್ತದೆ.