ಸಿನಿಮಾ ಲಾಸ್ ಬಿಡಿ; ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತ ಕಾರಣಕ್ಕೆ ಅಮಿರ್ ಖಾನ್ ನಷ್ಟವಾಗಿದ್ದು ಎಷ್ಟು ಕೋಟಿ ಗೊತ್ತೇ?? ಅಮಿರ್ ಗೆ ಮತ್ತೊಂದು ಶಾಕ್

180

ನಟ ಆಮೀರ್ ಖಾನ್ ಹಾಗೂ ನಟಿ ಕರೀನಾ ಕಪೂರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದೆ. ಸಿನಿಮಾ ಮೇಲೆ ಎಲ್ಲರಿಗೂ ಭಾರಿ ನಿರೀಕ್ಷೆ ಇತ್ತು, ಲಾಲ್ ಸಿಂಗ್ ಚಡ್ಡಾ ಸಿನಿಮಾಗಾಗಿ ಆಮೀರ್ ಖಾನ್ ಅವರು ಬರೋಬ್ಬರಿ 4 ವರ್ಷಗಳ ಕಾಲ ಕೆಲಸ ಮಾಡಿದ್ದರು, ಕರೀನಾ ಕಪೂರ್ ಅವರು ಸಹ ಅಷ್ಟೇ ಸಮಯ ನೀಡಿದ್ದರು. ಇನ್ನು 180 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿತ್ತು. ಆದರೆ ಸಿನಿಮಾ ಬಿಡುಗಡೆಗಿಂತ ಮೊದಲೇ ಸಾಕಷ್ಟು ವಿವಾದಗಳಿಗೆ ಕಾರಣವಾಯಿತು.

ದೇಶದ ಹಲವೆಡೆ ಸಿನಿಮಾವನ್ನು ಬಾಯ್ಕಾಟ್ ಮಾಡಲಾಯಿತು, ಈ ರೀತಿಯ ವಿವಾದಗಳನ್ನು ಎದುರಿಸಿದ್ದಕ್ಕೋ ಏನೋ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋತು ಹಣಗಳಿಕೆ ಆಗಲೇ ಇಲ್ಲ. ಸಿನಿಮಾ ನೋಡಲು ಥಿಯೇಟರ್ ಗೆ ಜನರು ಬರಲಿಲ್ಲ. 100 ಕೋಟಿ ಗಳಿಕೆ ಮಾಡಲು ಸಹ ಈ ಸಿನಿಮಾ ಇಂದ ಸಾಧ್ಯವಾಗಲಿಲ್ಲ. ಲಾಲ್ ಸಿಂಗ್ ಚಡ್ಡಾ ಸೋಲಿನಿಂದ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗಿದ್ದು, ಅದನ್ನು ಭರಿಸುವ ಸಲುವಾಗಿ ನಟ ಆಮೀರ್ ಖಾನ್ ತಮ್ಮ ಶುಲ್ಕವನ್ನು ವಾಪಸ್ ನೀಡುವ ನಿರ್ಧಾರ ಮಾಡಿದ್ದಾರೆ ಎಂದು ಈಗ ವರದಿಗಳ ಪ್ರಕಾರ ತಿಳಿದುಬಂದಿದೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾ ನಿರ್ಮಾಣ ಮಾಡಿದ್ದು Viacom18 ಸಂಸ್ಥೆ, ಸಿನಿಮಾ ಇಂದ ಈ ಸಂಸ್ಥೆಗೆ ಬರೋಬ್ಬರಿ 100 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದ್ದು, ಇದೀಗ ಆ ನಷ್ಟವನ್ನು ಆಮೀರ್ ಖಾನ್ ಅವರೇ ಭರಿಸುವುದಾಗಿ ಹೇಳಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಲಾಲ್ ಸಿಂಗ್ ಚಡ್ಡಾ ಆಮೀರ್ ಖಾನ್ ಅವರ ಕನಸ್ಸಿನ ಕೂಸು ಆಗಿತ್ತು ಎಂದರೆ ತಪ್ಪಾಗುವುದಿಲ್ಲ. ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದರು, ಆದರೆ ವಿವಾದಗಳ ಸುಳಿಗೆ ಸಿಲುಕಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲುವುದು ಮಾತ್ರವಲ್ಲದೆ, ಆಮೀರ್ ಖಾನ್ ಅವರಿಗೆ ನಷ್ಟ ಉಂಟುಮಾಡಿದೆ.

Leave A Reply

Your email address will not be published.