ಸೂಪರ್ ಹಿಟ್ ಸಿನಿಮಾದ ಎರಡನೇ ಸೀಕ್ವೆಲ್ ಗೆ ರಾಜಮೌಳಿ ತಂದೆ ಚಿತ್ರಕತೆ ಸಲ್ಮಾನ್ ಖಾನ್ ನಾಯಕ. ಅಷ್ಟಕ್ಕೂ ಈ ಸಿನಿಮಾ ಯಾವುದು ಗೊತ್ತೇ?

1,080

ಭಾರತೀಯ ಸಿನಿಮಾ ರಂಗ ಅಂದರೆ ಅನೇಕ ಮಂದಿಗೆ ಹೊತ್ತಿನ ಊಟಕ್ಕೆ ಎಡೆ ಮಾಡಿಕೊಟ್ಟು ಜೀವನ ಕಲ್ಪಿಸಿದ ರಂಗ. ಭಾರತೀಯ ಸಿನಿಮಾ ರಂಗ ಇತರ ದೇಶಗಳ ರೀತಿ ಅಲ್ಲದೆ ಅನೇಕ ಭಾಷಾ ವೈವಿದ್ಯತೆ ಇಂದ ಕೂಡಿದೆ. ಭಾರತದಂತಹ ಹೆಚ್ಚಿನ ಜನಸಂಖ್ಯೆ ಹಾಗು ಚಲನಚಿತ್ರವನ್ನು ಪ್ರೀತಿಸುವ ಜನರಿರುವಾಗ ಎಲ್ಲ ದೇಶಗಳು ಭಾರತಕ್ಕೆ ತಕ್ಕಂತಹ ಸಿನಿಮಾ ಮಾಡುವಲ್ಲಿ ಇಂದಿನ ದಿನಗಳಲ್ಲಿ ಹೆಚ್ಚಿನ ಒಟ್ಟು ನೀಡುತ್ತಿವೆ. ಭಾರತದ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರ್ಚು ಹಾಗು ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದಂತಹ ಸಿನಿಮಾ ಬಾಹುಬಲಿ. ಇದರ ಎರಡು ಭಾಗಗಳು ಅತ್ಯಂತ ಯಶಸ್ವೀ ಕಂಡಂತಹ ಸಿನಿಮಾಗಳು. ಇದಕ್ಕೆ ಮುಖ್ಯ ಕಾರಣ ಭಾರತದ ಶ್ರೇಷ್ಠ ನಿರ್ದೇಶಕರಲ್ಲಿ ಒಂದಾದಂತಹ ರಾಜಮೌಳಿ ಅವರು.

ಅದಾದ ನಂತರ ಇದೀಗ ಟ್ರಿಪಲ್ R ಸಿನಿಮಾ ಮೂಲಕ ಮತ್ತೊಮ್ಮೆ ಸದ್ದು ಮಾಡಲು ಹೊರಟಿದ್ದಾರೆ ರಾಜಮೌಳಿ. ಈಗಾಗಲೇ ಟ್ರೈಲರ್ ಬಿಡುಗಡೆ ಆಗಿದ್ದು ಅತಿ ಹೆಚ್ಚು ವೀಕ್ಷಣೆ ಪಡೆದ ಟ್ರೈಲರ್ ಗಳ ಪಟ್ಟಿಗೆ ಸೇರಿಸಿ ಭಾರತೀಯ ಸಿನಿಮಾದ ತಾಕತ್ತನ್ನು ತೋರಿಸಿದೆ. ಇದೀಗ ದೇಶದ ಎಲ್ಲ ಕಡೆ ಪ್ರಮೋಷನ್ ನಡೆಯುತ್ತಿದ್ದು RRR ತಂಡ ಮುಂಬೈ ತಲುಪಿದೆ. ಇಲ್ಲಿ ಪ್ರಮೋಷನ್ ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬಂದಿದ್ದು ಅತ್ಯಂತ ಮಹತ್ವದ ಘೋಷಣೆ ಮಾಡಿದ್ದಾರೆ. ಇವರು ಒಂದು ಸಿನಿಮಾದ ಎರಡನೇ ಸೀಕ್ವೆಲ್ ಮಾಡುತ್ತಾರೆ ಎನ್ನುವ ಅಧಿಕೃತ ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಬಿಡುಗಡೆ ಆಗಿ ಬಾಕ್ಸ್ ಆಫೀಸ್ ಅಲ್ಲಿ ದೂಳೆಬ್ಬಿಸಿದ ಭಜರಂಗಿ ಭಾಯಿಜಾನ್ ಚಿತ್ರದ ಎರಡನೇ ಸೀಕ್ವೆಲ್ ಮಾಡುವುದಾಗಿ ಸಲ್ಮಾನ್ ಖಾನ್ ಘೋಷಿಸಿದ್ದಾರೆ. ಇದಕ್ಕೆ ಚಿತ್ರಕತೆ ಬರೆಯುತ್ತಿರುವವರು ಬೇರಾರು ಅಲ್ಲ ನಿರ್ದೇಶಕ ರಾಜಮೌಳಿ ಅವರ ತಂದೆ ಕೆ ವಿ ವಿಜಯೇಂದ್ರ ಪ್ರಸಾದ್ ಅವರು ಬರೆಯಲಿದ್ದಾರೆ ಎನ್ನುವ ದೊಡ್ಡ ಸುದ್ದಿ ನೀಡಿದ್ದಾರೆ. ರಾಜಮೌಳಿ ತಂದೆ ಬಾಹುಬಲಿ ಸಿನೆಮಾಕೆ ಚಿತ್ರಕತೆ ಬರೆದದ್ದು ಬಾಹುಬಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಕಾರಣವಾಗಿತ್ತು. ಇದೀಗ ಭಜರಂಗಿ ಭಾಯಿಜಾನ್ ಗೆ ಎಂಟ್ರಿ ಆಗಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

Leave A Reply

Your email address will not be published.