ಸೋನು ಗೌಡ ರವರಿಗೆ ಒಮ್ಮೆಲೇ ಶಾಕ್ ನೀಡಿದ ಸುದೀಪ್: ಮುಂದಿನ ವಾರ ಹೊರಹೋಗುವುದು ಖಚಿತ. ಯಾಕೆ ಅಂತೇ ಗೊತ್ತೇ??

173

ನಮಸ್ಕಾರ ಸ್ನೇಹಿತರೇ ಈಗಾಗಲೇ ವೂಟ್ ಅಪ್ಲಿಕೇಶನ್ ನಲ್ಲಿ ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ ಕನ್ನಡ ಓ ಟಿಟಿ ಸೀಸನ್ 1 ಮೊದಲ ಎರಡು ವಾರಗಳನ್ನು ಭರ್ಜರಿಯಾಗಿ ಪೂರೈಸಿದೆ. ಒಬ್ಬರಾದ ಮೇಲೆ ಒಬ್ಬರು ಬಿಗ್ ಬಾಸ್ ನಿಂದ ಎಲಿಮಿನೇಷನ್ ಆಗಿ ಹೊರಹೋಗುತ್ತಿದ್ದಾರೆ. ಇನ್ನು ಈ ವಾರ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ರವರು ಹೇಳಿರುವ ಒಂದು ಮಾತು ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಬಿಗ್ ಬಾಸ್ ವೀಕ್ಷಕರಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಕೂಡ ಸದ್ದು ಮಾಡುತ್ತಿರುವ ಸೋನು ಶ್ರೀನಿವಾಸ ಗೌಡ ಅವರು ಮನೆಯಿಂದ ಹೊರ ಹೋಗುತ್ತಾರೆ ಎಂಬುದಾಗಿ ಕಿಚ್ಚ ಸುದೀಪ್ ರವರು ಹೇಳಿದ್ದಾರೆ. ಅರೆ ಇದೇನಿದು ಕಿಚ್ಚ ಸುದೀಪ್ ರವರು ಹೀಗೆ ಹೇಳಿದ್ರಲ್ಲ ಎನ್ನುವುದಾಗಿ ನೀವು ಆಶ್ಚರ್ಯ ಪಡುತ್ತಿದ್ದರೆ ಅದಕ್ಕೆ ಒಂದು ಕಾರಣ ಕೂಡ ಇದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇನ್ನೇನು ಈ ಬಿಗ್ ಬಾಸ್ ಕೇವಲ ಒಂದು ತಿಂಗಳುಗಳ ಕಾಲ ಮಾತ್ರ ಪ್ರಸಾರ ಕಾಣಲಿದ್ದು ನಂತರ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭವಾಗಲಿದೆ. ಈ ಬಿಗ್ ಬಾಸ್ ನಲ್ಲಿ ಚೆನ್ನಾಗಿ ಪ್ರದರ್ಶನ ನೀಡುವವರು ಮಾತ್ರ ಒಂದು ತಿಂಗಳ ನಂತರ ಪ್ರಾರಂಭ ಕಾಣಲಿರುವ ಬಿಗ್ ಬಾಸ್ ಕನ್ನಡ ಸೀಸನ್ 9 ಗೆ ಆಯ್ಕೆ ಅಗಲಿದ್ದಾರೆ.

ಈ ಬಗ್ಗೆ ಕಿಚ್ಚ ಸುದೀಪ್ ರವರು ಆರ್ಯವರ್ಧನ್ ಗುರೂಜಿ ಅವರ ಬಳಿ ಯಾರು ತೇರ್ಗಡೆ ಆಗಬಹುದು ಎಂಬುದಾಗಿ ಕೇಳಿದಾಗ ರಾಕೇಶ್ ತೇರ್ಗಡೆ ಆಗುತ್ತಾನೆ ಎಂಬುದಾಗಿ ಹೇಳುತ್ತಾ ಒಗಟೊಗಟಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ರಾಕೇಶ್ ರವರು ಯಾರೋ ಜೊತೆಗೆ ಕ್ಲೋಸ್ ಆಗಿರುತ್ತಾರೋ ಅವರು ವೀಕ್ ಆಗುತ್ತಾ ಹೋಗುತ್ತಾರೆ ಹಾಗೂ ಮನೆಯಿಂದ ಎಲಿಮಿನೇಟ್ ಕೂಡ ಆಗುತ್ತಾರೆ ಎಂಬುದಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಕಿಚ್ಚ ಸುದೀಪ್ ರವರು ಆ ಲೆಕ್ಕದಲ್ಲಿ ಹೇಳುವುದಾದರೆ ಮುಂದಿನ ವಾರ ಸೋನು ಗೌಡ ಅವರು ಮನೆಯಿಂದ ಹೊರ ಹೋಗಬೇಕಾಗುತ್ತದೆ ಎಂಬುದಾಗಿ ನಗುತ್ತಾ ಹೇಳುತ್ತಾರೆ. ಈ ಮಾತನ್ನು ಕೇಳಿ ಎಲ್ಲರೂ ಕೂಡ ನಗಲು ಪ್ರಾರಂಭಿಸುತ್ತಾರೆ. ನಿಮ್ಮ ಪ್ರಕಾರ ಟಿವಿಯಲ್ಲಿ ಪ್ರಸಾರವಾಗಲಿರುವ ಮುಖ್ಯ ಬಿಗ್ ಬಾಸ್ ಗೆ ಯಾರು ತೇರ್ಗಡೆಯಾಗುತ್ತಾರೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.