ಹಿಂದಿ ವಿವಾದದ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ ಮಹೇಶ್ ಬಾಬು. ತನ್ನ ಹೊಸ ಸಿನಿಮಾದಲ್ಲಿನ ಈ ದೃಶ್ಯಕ್ಕೆ ಅವರ ಅಭಿಮಾನಿಗಳು ಕೂಡ ಬೇಸರವಾಗಿದ್ದರಂತೆ.

264

ಮಹೇಶ್ ಬಾಬು ತೆಲುಗಿನ ಸೂಪರ್ ಸ್ಟಾರ್ ಇವರ ಬಗ್ಗೆ, ಇವರ ನಟನೆ ಬಗ್ಗೆ ತೆಲುಗು ಅಲ್ಲದೆ ದೇಶದ ಎಲ್ಲ ಕಡೆ ಗೌರವ ಇದೆ. ಹಾಗೇನೇ ಇವರ ಅಭಿಮಾನಿಗಳು ಕೂಡ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಇವರು ನಟಿಸಿದ ಸಿನೆಮಾಗಳೆಲ್ಲ ಬ್ಲಾಕ್ ಬಸ್ಟರ್ ಅಂದರೆ ತಪ್ಪಾಗಲಾರದು. ತೆಲುಗು ಇಂಡಸ್ಟ್ರಿ ಅಲ್ಲಿ ತಮ್ಮದೇ ಒಂದು ಹವಾ ಸೃಷ್ಟಿಸಿದ ನಟ ಮಹೇಶ್ ಬಾಬು. ಇವರು ಇಲ್ಲಿಯವರೆಗೆ ಯಾವುದೇ ವಿವಾದಗಳಿಗೆ ಸಿಲುಕಿಲ್ಲ. ಆದರೆ ಕೆಲ ದಿನಗಳ ಹಿಂದೆ ಅದಕ್ಕೂ ಮಹೇಶ್ ಬಾಬು ಹೆಸರುವಾಸಿಯಾಗಿದ್ದರು.

ಭಾರತ ಚಿತ್ರರಂಗ ಅಂದರೆ ಅದು ಕೇವಲ ಟಾಲಿವುಡ್ ಅಲ್ಲ, ಇಲ್ಲಿ ಬಾಲಿವುಡ್, ಸ್ಯಾಂಡಲ್ವುಡ್, ಕಾಸ್ಟಲ್ವುಡ್, ಕಾಲಿವುಡ್, ಮಾಲಿವುಡ್ ಹಾಗೇನೇ ಇನ್ನು ಅನೇಕ ಇಂಡಸ್ಟ್ರಿ ಗಳು ಸೇರಿದೆ. ಕನ್ನಡದ kgf ತೆಲುಗಿನ RRR ಹಾಗೇನೇ ತೆಲುಗಿನ ಇನ್ನೊಂದು ಮಾಸ್ಟರ್ಪೀಸ್ ಬಾಹುಬಲಿ ೧ ಹಾಗು ೨ ಸಿನೆಮಾಗಳು ಅತಿ ಹೆಚ್ಚು ಹಣ ಗಳಿಸಿದ್ದು ಹಿಂದಿ ಭಾಷೆಯಲ್ಲಿ. ಆದರೆ ಈ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಇದನ್ನು ಮರೆತು ಬಿಟ್ಟಿದ್ದಾರೆ ಎಂದೆನಿಸುತ್ತದೆ ಇವರ ಇತ್ತೀಚಿನ ಹಿಂದಿ ಹೇಳಿಕೆ. ಒಬ್ಬ ಪತ್ರಕಾರ ಹಿಂದಿ ಸಿನೆಮಾ ಮಾಡುತ್ತೀರಾ ಎಂದು ಕೇಳಿದಕ್ಕೆ, ಬಾಲಿವುಡ್ ಅಲ್ಲಿ ನನ್ನನ್ನು ಭರಿಸುವ ಶಕ್ತಿ ಇಲ್ಲ ಎಂದು ಹೇಳಿದ್ದಾರೆ. ಇದು ಎಲ್ಲ ಕಡೆ ದೊಡ್ಡ ಸುದ್ದಿ ಆಗಿತ್ತು.

ಮಹೇಶ್ ಅವರ ಈ ಹೇಳಿಕೆ ಇಂದ ಎಲ್ಲ ಕಡೆ ಅಸಮಾಧಾನ ಹುಟ್ಟಿಕೊಂಡಿತು. ಅವರದೇ ಇಂಡಸ್ಟ್ರಿ ಅವರು ಮಹೇಶ್ ಬಾಬು ಹೇಳಿಕೆ ತಪ್ಪೆಂದು ಹೇಳಿದ್ದರು. ಅದಾದ ನಂತರ ಅವರು ಅದಕ್ಕೆ ಸಮಜಾಯಿಷಿ ಕೊಟ್ಟರು ಕೂಡ ಅವರ ವಿವಾದ ದೊಡ್ಡ ಸದ್ದು ಮಾಡಿತ್ತು. ಈ ವಿವಾದ ನಿಲ್ಲುವ ಮೊದಲೇ ಇನ್ನೊಂದು ವಿವಾದ ಎದ್ದಿದೆ. ಅದು ಮಹೇಶ್ ಅವರ ಹೊಸ ಸಿನೆಮಾ ಸರ್ಕಾರೀ ವಾರಿ ಪಾಟ ಮೇಲೆ. ಈ ಸಿನೆಮಾ ಮೇ ೧೨ ರಂದು ತೆರೆಗೆ ಬಂದಿತ್ತು. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಸಿನೆಮಾದ ಒಂದು ದೃಶ್ಯಕ್ಕೆ ಇದೀಗ ಅಭಿಮಾನಿಗಳು ಕೋಪಗೊಂಡಿದ್ದಾರೆ.

ಈ ಚಿತ್ರದಲ್ಲಿ ಮಹೇಶ್ ಬಾಬು ನಿದ್ರೆ ಬರುವುದಿಲ್ಲ ಎಂದು ನಾಯಕಿಯನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಾನೆ. ನಾಯಕಿ ಮಾವ ಕೂಡ ನಾಯಕಿ ಜೊತೆ ಬರುತ್ತಾನೆ. ರಾತ್ರಿ ಮಲಗಿದಾಗ ಲ್ಯಾಪ್ಟಾಪ್ ಕದಿಯಲು ನಾಯಕಿ ಮಾವ ಹೋಗುತ್ತಾನೆ. ಈ ವೇಳೆ ನಾಯಕ ನಿದ್ದೆಯಲ್ಲಿ ನಡೆದು ಬರುತ್ತಾನೆ. ನಾಯಕನಿಂದ ತಪ್ಪಿಸಿಕೊಳ್ಳಲು ಈ ನಾಯಕಿ ಮಾವ ಟಾಯ್ಲೆಟ್ ಗೆ ಓದಿ ಹೋಗಿ ಅಲ್ಲಿ ಕಮೋಡ್ ಮೇಲೆ ಕೂರುತ್ತಾನೆ. ನಾಯಕ (ಮಹೇಶ್ ಬಾಬು) ಕೂಡ ಟಾಯ್ಲೆಟ್ ಹೋಗಿ ಹೊರ ಬರುತ್ತಾನೆ. ಟಾಯ್ಲೆಟ್ ಇಂದ ಹೊರ ಬಂದಾಗ ನಾಯಕಿ ಮಾವನ ತಲೆಯಿಂದ ಮೂತ್ರ ಬೀಳುತ್ತಿರುವ ದೃಶ್ಯ ತೋರಿಸಲಾಗಿದೆ. ಇಲ್ಲಿ ನೇರವಾಗಿ ಏನು ತೋರಿಸದಿದ್ದರು ಕೂಡ ಅಭಿಮಾನಿಗಳು ಅಸಮಾಧಾನ ಗೊಂಡಿದ್ದಾರೆ. ಇಷ್ಟು ಕೀಳುಮಟ್ಟದಲ್ಲಿ ಕಾಮಿಡಿ ತೋರಿಸಬಾರದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Leave A Reply

Your email address will not be published.