ಅಂದು ಈ ಕಂಪನಿ ಕಷ್ಟದಲ್ಲಿದ್ದೇನೆ ಖರೀದಿ ಮಾಡಿ ಎಂದು ಬೇಡಿಕೊಂಡಿತ್ತು ಆದರೂ ಕೇಳದ ಆಪಲ್ ಸಂಸ್ಥೆ. ಇಂದು ಆಪಲ್ ಅನ್ನು ಮೀರಿಸಿ ಬೆಳೆದು ನಿಂತಿದೆ. ಯಾವುದು ಈ ಕಂಪನಿ?

2,658

ಆ್ಯಪಲ್ ಎಂದರೆ ಎಲ್ಲರಿಗೂ ಗೊತ್ತು. ಈ ಒಂದು ಬ್ರಾಂಡ್ ಅನ್ನು ಯಾವ ಎಲ್ಲಿನ ಬ್ರಾಂಡ್ ಎಂದು ಕೇಳುವ ಅವಶ್ಯಕತೆ ಯಾರಿಗೂ ಇಲ್ಲ. ಯಾಕೆಂದರೆ ತನ್ನ ಬ್ರಾಂಡ್ ಹೆಸರನ್ನು ಮಾರುಕಟ್ಟೆಯಲ್ಲಿ ಅಷ್ಟರ ಮಟ್ಟಿಗೆ ಬೆಳೆಸಿದೆ ಈ ಕಂಪನಿ. ಹೌದು ಈ ಆ್ಯಪಲ್ ಮೊಬೈಲ್ ಗಳಿಗೆ ಇರುವಷ್ಟು ಬೇಡಿಕೆ ಮತ್ತು ಕ್ರೇಜ್ ಮತ್ಯಾವ ಮೊಬೈಲ್ ಗಳಿಗು ಇಲ್ಲ. ಜೀವನದಲ್ಲಿ ಎಷ್ಟು ಕಷ್ಟ ಇದ್ದರೂ ಸಾಯುವ ಮುಂಚೆ ಒಮ್ಮೆ ಐಫೋನ್ ಹಿಡಿದುಕೊಳ್ಳಬೇಕು ಎಂದು ಆಶೆ ಪಡುವವರೆ ಹೆಚ್ಚು. ಆದರೆ ಇಂದು ಆ್ಯಪಲ್ ಕಂಪನಿಗೆ ಟಕ್ಕರ್ ಕೊಡಲು ಒಂದು ಕಂಪನಿ ಮುಂದೆ ಬಂದಿದೆ. ಹೌದು ಯಾವುದು ಆ ಕಂಪನಿ ಮತ್ತು ಯಾತಕ್ಕಾಗಿ ಈ ಪೈಪೋಟಿ ಬನ್ನಿ ತಿಳಿಯೋಣ.

ಏಲಾನ್ ಮಸ್ಕ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಿ ಬಾರಿ ಚರ್ಚೆಯಲ್ಲಿ ಇರುವ ವ್ಯಕ್ತಿಗಳ ಪೈಕಿ ಇವರು ಒಬ್ಬರು. ಟೆಸ್ಲಾ ಸಂಸ್ಥೆಯ ಸಂಸ್ಥಾಪಕರು ಇವರು. ತಮ್ಮ ಮುಂದಾಲೋಚನೆಗಳಿಂದ ಇವರು ಸದಾ ಮುಂದೆ ಇರುತ್ತಾರೆ. ಹಾಗಾದರೆ ಎಲಾನ್ ಮಸ್ಕ್ ಮತ್ತು ಈ ಬರುತ್ತಿರುವ ಹೊಸ ಕಂಪನಿಗೆ ಏನು ಸಂಬಂಧ ಎಂದು ಕೇಳಿದರೆ, ಖಂಡಿತವಾಗಿಯೂ ಸಂಬಂಧ ಇದೆ. ಹೌದು ಅಂದು ನಷ್ಟದಲ್ಲಿರುವ ಕಂಪನಿಯನ್ನು ಖರೀದಿಸುವಂತೆ ಆ್ಯಪಲ್ ಕಂಪನಿಗೆ ಪ್ರಸ್ತಾಪ ಇಟ್ಟಿದ್ದ ವ್ಯಕ್ತಿ ಮತ್ಯಾರು ಅಲ್ಲ ಬದಲಾಗಿ ಎಲಾನ್ ಮಸ್ಕ್. ಅಚ್ಚರಿ ಎನಿಸಿದರೂ ಸತ್ಯದ ಸಂಗತಿ ಇದು.

ಇದೀಗ ಆ್ಯಪಲ್ ಐಫೋನ್ ಗೆ ಟಕ್ಕರ್ ಕೊಡಬಲ್ಲ ಮತ್ತು ಅದಕ್ಕಿಂತ ಹೆಚ್ಚಿನ ಫೀಚರ್ ಹೊಂದಿರುವ ಫೋನ್ ಲಾಂಚ್ ಮಾಡಲು ಮುಂದಾಗಿದ್ದಾರೆ ಏಲಾನ್ ಮಸ್ಕ್ . ಹಾಲಿಯಲ್ಲಿ ಒಂದು ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಹೇಳಿದ್ದು ಇದೀಗ ತಲ್ಲಣ ಮೂಡಿಸುತ್ತಿದೆ. ಇದು ಎಲ್ಲಿಯವರೆಗೆ ಬಂದು ತಲುಪುತ್ತದೆ ಎಂದು ಕಾದು ನೋಡಬೇಕು. ಅದೇನೇ ಆಗಲಿ ಮೊಬೈಲ್ ಫೋನ್ ಕ್ಷೇತ್ರದಲ್ಲಿ ಪಾರುಪತ್ಯ ಸ್ಥಾಪಿಸಿದ್ದ ಐಫೋನ್ ಗು ಈಗ ಪೈಪೋಟಿ ಶುರು ಆಗಿದೆ ಎಂದರೆ ಅದು ಒಳ್ಳೆಯ ಬೆಳವಣಿಗೆ ಸರಿ.

Leave A Reply

Your email address will not be published.