ತಾಯಿಯನ್ನು ಚಳಿಯಿಂದ ರಕ್ಷಿಸಲು ಮಗ ಮಾಡಿದ ಕೆಲಸ ಏನು ಗೊತ್ತೇ ? ಮಗ ಎಂದರೆ ಹೀಗಿರಬೇಕು ಎಂದ ಐಪಿಎಸ್ ಅಧಿಕಾರಿ?

821

ತಾಯಿ ಎಂದರೆ ಸರ್ವಸ್ವ, ಅದಕ್ಕಿಂತ ಮಿಗಿಲಾದ ಬೆಲೆಬಾಳುವ ವಸ್ತು ಈ ಭೂಮಿಯಲ್ಲಿ ಯಾವುದು ಇಲ್ಲ ಎಂದರೂ ತಪ್ಪಲ್ಲ. ತಾಯಿ ತನಗೋಸ್ಕರ ಎಂದು ಏನನ್ನೂ ಮಾಡಿಕೊಳ್ಳುವುದಿಲ್ಲ, ತನ್ನ ಕುಟುಂಬ ಮಕ್ಕಳು ಗಂಡನಿಗೋಸ್ಕರ ಸರ್ವಸ್ವ ದಾರೆ ಎರೆದು ಬಿಡುತ್ತಾಳೆ. ಆಕೆ ತನ್ನವರಿಂದ ಏನನ್ನು ಅಪೇಕ್ಷೆ ಕೂಡ ಮಾಡುವುದಿಲ್ಲ. ಬದಲಾಗಿ ತನ್ನವರು ಖುಷಿಯಿಂದ ಇರಬೇಕು ಎಂದು ಅಪೇಕ್ಷೆ ಪಡುತ್ತಾಳೆ. ಈಗ ಇತಹ ತಾಯಿಗೆ ಮಗನೊಬ್ಬ ಮಾಡಿದ ಕೆಲಸ ಈಗ ಫುಲ್ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಬದಲಾವಣೆಗಳ ಜೊತೆಗೆ ಬೆರೆತ ಜನರು ತಮ್ಮ ನೈಜತೆಯನ್ನು ಮರೆಯುತ್ತಿದ್ದಾರೆ. ತನ್ನ ಸಂಸ್ಕೃತಿ ಮರೆತು ತನ್ನ ತಂದೆ ತಾಯಿಯ ಕರ್ತವ್ಯ ಮರೆತು ಅವರನ್ನು ಆಶ್ರಮಗಳಲ್ಲಿ ಬಿಟ್ಟು ಬಿಡುತ್ತಾರೆ. ಮುಂದೊಂದು ದಿನ ಅವರಿಗೂ ಇಂತಹ ಪರಿಸ್ಥಿತಿ ಬರುವುದು ಎಂದು ಯೋಚನೆ ಕೂಡ ಮಾಡುವುದಿಲ್ಲ. ಅಂತಹದರಲ್ಲಿ ಈ ವ್ಯಕ್ತಿ ಒಬ್ಬರು ತನ್ನ ತಾಯಿಯ ಪ್ರತಿ ಮಾಡಿದ ಕೆಲಸವನ್ನು ಐಪಿಎಸ್ ಅಧಿಕಾರಿ ದಿಪಾಂಶು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಹಂಚಿ ಮಗ ಎಂದರೆ ಹೀಗೆ ಇರಬೇಕು ಎಂದು ಶೀರ್ಷಿಕೆ ಕೂಡ ಹಾಕಿದ್ದಾರೆ.

ಚಳಿಯಿಂದ ನಡುಗುತ್ತಿರುವ ತನ್ನ ತಾಯಿಗೆ ಮಗನೊಬ್ಬ ತಲೆಗೆ ಬಟ್ಟೆ ಕಟ್ಟುತ್ತಿರುವ ಈ ವಿಡಿಯೋ ಇಂಟರ್ನೆಟ್ ನಲ್ಲಿ ಇಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೇಸ್ಬುಕ್ ವಾಟ್ಸಪ್ Instagram ನಲ್ಲಿ ಎಲ್ಲರೂ ಹಂಚಿಕೊಂಡಿದ್ದಾರೆ. ಇದು ಎಷ್ಟು ವೈರಲ್ ಆಯ್ತು ಎಂದರೆ ಐಪಿಎಸ್ ಅಧಿಕಾರಿ ಕೂಡ ಹಂಚಿ ಕೊಂಡಿದ್ದಾರೆ. ಅದೇನೇ ಆಗಲಿ ತಾಯಿ ಎಂಬಾಕೆ ತನ್ನ ಮಗ ಹಣ ಆಸ್ತಿ ಕೊಡಬೇಕು ಎಂಬ ನಿರೀಕ್ಷೆಯಲ್ಲಿ ಯಾವತ್ತೂ ಇರುವುದಿಲ್ಲ , ಬದಲಾಗಿ ಆಕೆ ಅಕ್ಕರೆಯ ಎರಡು ಮಾತು ಇಂತಹ ಭಾಂದವ್ಯ ಮಾತ್ರ ಬಯಸುತ್ತಾಳೆ. ಇನ್ನಾದರೂ ಎಚ್ಚತ್ತುಕೊಂಡು ಹೆತ್ತವರನ್ನು ಆಶ್ರಮದಲ್ಲಿ ಬಿಡುವವರು ಸ್ವಲ್ಪ ಯೋಚಿಸಬೇಕು. ಲಕ್ಷಾಂತರ ಖರ್ಚು ಮಾಡಿ ಉಪಯೋಗಕ್ಕೆ ಬಾರದ ನಾಯಿಯನ್ನು ಮನೆ ಒಳಗೆ ಸಾಕುತ್ತಾರೆ, ಹೆತ್ತ ತಾಯಿಯನ್ನು ಆಶ್ರಮದಲ್ಲಿ ಬಿಡುತ್ತಾರೆ. ಈ ಒಂದು ನಿದರ್ಶನ ಇಂತಹವರಿಗೆ ಪ್ರೇರಣೆ ಆಗಲಿ ಎಂಬುವುದು ನಮ್ಮ ಆಶಯ.

Leave A Reply

Your email address will not be published.