ತೇಲುವ ಅಂಚೆ ಕಚೇರಿ ನೋಡಿದ್ದೀರಾ? ನಮ್ಮ ದೇಶದ ಈ ರಾಜ್ಯದಲ್ಲಿದೆ ಸೋಜಿಗ ಮೂಡಿಸುವ ಅಂಚೆ ಕಚೇರಿ.

320

ಭಾರತ ದೇಶ ಸದಾ ಒಂದಲ್ಲ ಒಂದು ಅದ್ಬುತಗಳಿಗೆ ಹೆಸರುವಾಸಿಯಾಗಿದೆ ಇದು ಅತಿ ಹೆಚ್ಚು ಪ್ರವಾಸಿಗರನ್ನು ಕೂಡ ಆಕರ್ಷಿಸುತ್ತದೆ. ಹಾಗೆ ಒಂದು ಆಕರ್ಷಣೀಯ ಸ್ಥಳ ಎಂದರೆ ಅದು ತೇಲುವ ಪೋಸ್ಟ್ ಆಫೀಸ್. ಹೌದು ಕೇಳಲು ವಿಚಿತ್ರ ಎನಿಸಿದರೂ ಇದು ವಾಸ್ತವ ಸಂಗತಿ. ಇಡೀ ದೇಶದಲ್ಲೇ ಇಂತಹ ಒಂದೇ ಒಂದು ಪೋಸ್ಟ್ office ಇರುವುದು ಬನ್ನಿ ಹಾಗಾದರೆ ಇದರ ಬಗೆಗಿನ ಹಿಚ್ಚಿನ ಮಾಹಿತಿ ತಿಳಿಯೋಣ.

ಜಮ್ಮು ಮತ್ತು ಕಾಶ್ಮೀರ ನಮ್ಮ ದೇಶದ ಪ್ರವಾಸಿ ತಾಣಗಳಲ್ಲಿ ಒಂದು. ಈಗ ಈ ತಾಣಕ್ಕೆ ಮತ್ತೊಂದು ಆಕರ್ಷಣೆ ತೇಲುವ ಪೋಸ್ಟ್ ಆಫೀಸ್. ಶ್ರೀನಗರದ ದಾಲ್ ಸರೋವರದ ಮೇಲೆ ತೇಲುತ್ತಿರುವ ಅಂಚೆ ಕಚೇರಿ, ದೇಶದಲ್ಲೇ ಮೊದಲನೆಯದು. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ರಾಜ್ಯ ಸಚಿವ ಸಚಿನ್ ಪೈಲಟ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತೇಲುವ ಅಂಚೆ ಕಚೇರಿಯನ್ನು ಉದ್ಘಾಟಿಸಿದ್ದರು.

ಇದು ಒಂದು ರೀತಿಯ ವಾಸ್ತುಶಿಲ್ಪವಾಗಿರುವುದರಿಂದ, ಈ ಅಂಚೆ ಕಚೇರಿ ಈಗ ಪ್ರವಾಸಿಗರ ಕಾಶ್ಮೀರ ಪ್ರವಾಸದ ಪ್ರಮುಖ ಭಾಗವಾಗಿದೆ. ತಮ್ಮ ಪ್ರೀತಿಪಾತ್ರರಿಗೆ ಪೋಸ್ಟ್‌ಕಾರ್ಡ್ ಕಳುಹಿಸಲು ಅಂಚೆ ಕಚೇರಿಗೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಕಾರಣ ಇದರ ಆಕರ್ಷಣೀಯತೆ ಅಲ್ಲದೆ ಇಲ್ಲಿನ ಅಂಚೆಚೀಟಿಗಳು ದಾಲ್ ಸರೋವರದ ಚಿತ್ರವನ್ನು ಒಳಗೊಂಡಿವೆ, ಇದು ಈ ಪ್ರಕೃತಿಯ ಕಲಾಕೃತಿಗೆ ಒಂದು ರೀತಿಯ ಗೌರವವಾಗಿದೆ.

ಇದರ ಜೊತೆಯಲ್ಲಿ, ಅಂಚೆ ಕಛೇರಿಯ ಆವರಣವು ವಿಶಿಷ್ಟವಾದ ಅಂಚೆಚೀಟಿಗಳ ದೊಡ್ಡ ಸಂಗ್ರಹವನ್ನು ಒಳಗೊಂಡಿರುವ ಅಂಚೆಚೀಟಿ ಸಂಗ್ರಹಾಲಯವನ್ನು ಒಳಗೊಂಡಿದೆ. ಅಲ್ಲಿ ಒಂದು ಸ್ಮಾರಕ ಅಂಗಡಿಯಿದ್ದು ಅಲ್ಲಿಂದ ಪೋಸ್ಟ್‌ಕಾರ್ಡ್‌ಗಳು, ಅಂಚೆಚೀಟಿಗಳು, ಸ್ಥಳೀಯ ವಸ್ತುಗಳು ಮತ್ತು ಶುಭಾಶಯ ಪತ್ರಗಳನ್ನು ಖರೀದಿಸಬಹುದು.

Leave A Reply

Your email address will not be published.