ನಿಮ್ಮ ಬಳಿ RUPAY ಏಟಿಎಂ ಕಾರ್ಡ್ ಇದ್ದರೆ ವಿಮೆ ಸೌಲಭ್ಯ ಸಿಗುತ್ತದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

790

ಭಾರತ ದೇಶದ ಸ್ವಂತ ಡೆಬಿಟ್ ಕಾರ್ಡ್ ಮೋದಿಯವರ ಕನಸಿನ RUPAY ಡೆಬಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ ನಿಮಗೆ ಉಚಿತ ಅಪಘಾತ ವಿಮೆ ಸಿಗುತ್ತದೆ. ಇದರ ಬಗ್ಗೆ ಅನೇಕರಿಗೆ ತಿಳಿದಿಲ್ಲ ಆದರೆ ಈ ಡೆಬಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ ನೀವು ಸ್ವಯಂ ಚಾಲಿತವಾಗಿ ವಿಮೆ ಗೆ ಅರ್ಹರಾಗುತ್ತಿರ. ಮಾಸ್ಟರ್ ಕಾರ್ಡ್, ವೀಸಾ ನಂತಹ ವಿದೇಶಿ ಕಾರ್ಡ್ ಗೆ ಠಕ್ಕರ್ ಕೊಡಲು ಭಾರತದ ಸ್ವಂತ ಡೆಬಿಟ್ ಕಾರ್ಡ್ ರುಪೆ ಡೆಬಿಟ್ ಕಾರ್ಡ್ ನೀಡುತ್ತಿರುವ ಈ ಆಫರ್ ನ ಸದುಪಯೋಗ ಪಡೆದುಕೊಳ್ಳಿ.

ಈ ವಿಮೆ ಜೀವ ವಿಮೆ ಅಥವಾ ವೈದ್ಯಕೀಯ ಹಾಗು ಅರೋಗ್ಯ ವಿಮೆಯಲ್ಲ. ಇದೊಂದು ಆಕಸ್ಮಿಕ ವಿಮೆಯಾಗಿದ್ದು ಮರಣ ಸಂಧರ್ಭದಲ್ಲಿ ತಿಳಿಸಿದ ನಿಯಮ ಪಾಲನೆ ಆದಲ್ಲಿ ಮಾತ್ರ ಕ್ಲೇಮ್ ಮಾಡಲು ಸಾಧ್ಯವಾಗುತ್ತದೆ. ಪ್ರೀಮಿಯಂ ಅಲ್ಲದೆ ಇದ್ದ ಕಾರ್ಡ್ ದಾರರು ನ್ಯೂ ಇಂಡಿಯಾ ಅಸ್ಸುರೇನ್ಸ್ ಇಂದ ವಿಮೆ ಪಡೆಯುತ್ತಾರೆ ಹಾಗೆ ಪ್ರೀಮಿಯಂ ಕಾರ್ಡ್ ದಾರರು ಟಾಟಾ AIG ಇಂದ ವಿಮ ರಕ್ಷಣೆ ಪಡೆಯುತ್ತಾರೆ.

ರುಪೆ ಕಾರ್ಡ್ ಅಲ್ಲಿ ಎರಡು ವಿಧಗಳಿವೆ. ಒಂದು ಪ್ರೀಮಿಯಂ ಕಾರ್ಡ್ ಹಾಗು ಇನೊಂದು ಪ್ರೀಮಿಯಂ ಇಲ್ಲದ ಕಾರ್ಡ್. ಈ ಕಾರ್ಡ್ ಗಳಿಗೆ ತಕ್ಕ ಹಾಗೆ ವಿಮ ಮೊತ್ತ ಕೂಡ ಬದಲಾಗುತ್ತದೆ. ರೂಪೇ ಡೆಬಿಟ್ ಕಾರ್ಡ್ನಲ್ಲಿ ಉಚಿತ ಆಕ್ಸಿಡೆಂಟಲ್ ವಿಮೆ ಪಡೆಯಲು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಇದನ್ನು ಹೇಗೆ ಕ್ಲೇಮ್ ಮಾಡುವುದು? ಘಟನೆಗೆ ಸಂಬಂದಿಸಿದ ಎಲ್ಲ ದಾಖಲೆಗಳನ್ನು ಮೊದಲು [email protected] ಅಥವಾ [email protected] ಗೆ ಮೇಲ್ ಮಾಡಬೇಕಾಗುತ್ತದೆ.

ಈ ಮುದ್ರಿತ ಮೇಲ್ ದಾಖಲೆಯನ್ನು ನ್ಯೂ ಅಸ್ಸುರೇನ್ಸ್ ಇಂಡಿಯಾ ಗೆ ಕಳುಹಿಸಬೇಕು. ಪ್ರೀಮಿಯಂ ಕಾರ್ಡ್ ದಾರರು ಟಾಟಾ ಐಜಿ ಗೆ ಕಳಿಸಬೇಕಾಗುತ್ತದೆ. ಈ ಕ್ಲೇಮ್ ಅಪಘಾತವಾದ ೯೦ ದಿನಗಳ ಒಳಗೆ ನಡೆಯಬೇಕು. ಒಬ್ಬ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದಾಗ ಪ್ರೀಮಿಯಂ ಹೊಂದಿರದ ವ್ಯಕ್ತಿ ೪೫ ದಿನಗಳ ಒಳಗೆ ದಾಖಲೆ ಕಳುಹಿಸಬೇಕು ಹಾಗೇನೇ ಪ್ರೀಮಿಯಂ ಕಾರ್ಡ್ ಹೊಂದಿರುವವರಿಗೆ ೯೦ ದಿನಗಳ ಸಮಯಾವಕಾಶ ಸಿಗುತ್ತದೆ. ಒಂದು ವೇಳೆ ವಿಳಂಬವಾದರೆ ನ್ಯೂ ಇಂಡಿಯಾ ಅಸ್ಸುರೇನ್ಸ್ ತನಿಖೆ ನಡಿಸಿ ನಂತರ ಕ್ಲೇಮ್ ನೀಡುತ್ತದೆ.

ಈ ವಿಮೆ ಕ್ಲೇಮ್ ಮಾಡುವಾಗ ಈ ದಾಖಲೆಗಳು ಬೇಕಾಗುತ್ತದೆ. ನಾಮಿನಿ/ಕಾರ್ಡ್ ದಾರರ ಆಧಾರ್ ಸಂಖ್ಯೆ, ಮರಣೋತ್ತರ ವರದಿ, ಡಿಸ್ಚಾರ್ಜ್ ವರದಿ, ೪೫/೯೦ ದಿನಗಳವರೆಗಿನ ಒಟ್ಟು ಖರ್ಚಿನ ಮಾಹಿತಿ, ಎಫ್ ಐ ಆರ್ ಕಾಪಿ, ಮರುಪಾವತಿ ಕಾರ್ಡ್ ಸಂಖ್ಯೆ, ಬ್ಯಾಂಕ್ ಡಿಕ್ಲೆರೇಷನ್. ಇಷ್ಟೆಲ್ಲಾ ದಾಖಲೆಗಳಿದ್ದರೆ ನಿಮಗೆ ಕ್ಲೇಮ್ ಮಾಡುವಾಗ ಸುಲಭವಾಗಿ ಸಿಗುತ್ತದೆ ವಿಮೆಯ ಸೌಲಭ್ಯಗಳು. ಇಲ್ಲವಾದರೆ ಸ್ವಲ್ಪ ತಡವಾಗುತ್ತದೆ ಎಲ್ಲ ದಾಖಲೆ ಒಗ್ಗೂಡಿಸಿ ವೆರಿಫಿಕೇಷನ್ ಮಾಡಲು.

Leave A Reply

Your email address will not be published.