ಪ್ಯೂನ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಭಾರತದ ಪ್ರಸಿದ್ಧ ಬ್ರಾಂಡ್ ಫೆವಿಕಾಲ್ ತಯಾರಿಸುವ ಕಂಪನಿ ಮಾಲೀಕನಾಗಿದ್ದು ಹೇಗೆ ಗೊತ್ತೇ?

552

ಹಳತ್ತು ಕುರ್ಚಿ ಹಾಗು ಪೀಠೋಪಕರಣಗಳನ್ನು ಅಂಟಿಸಿ ಜೋಡಿಸುವ ಫೆವಿಕಾಲ್ ಗಮ್ ನ ಜಾಹಿರಾತು ನೀವುಗಳು ಟಿವಿ ಅಲ್ಲಿ ನೋಡಿರುತ್ತೀರ. ನಾವು ಚಿಕ್ಕಂದಿನಿಂದ ಇಂದು ದೊಡ್ಡವರಾಗಿ ಬೆಳೆದಿದ್ದೇವೆ ಆದರೆ ಈ ಜಾಹಿರಾತು ಮಾತ್ರ ಇನ್ನು ಹಳೆಯದಾಗಿಲ್ಲ. ಇಂದಿಗೂ ಕೂಡ ನಾವು ಫೆವಿಕಾಲ್ ಹೆಸರು ಕೇಳುತ್ತಿದ್ದೇವೆ. ಸುಮಾರು ೬೦ ವರ್ಷಗಳ ಹಳೆಯ ಈ ಫೆವಿಕಾಲ್ ಗಮ್ ಇಂದಿಗೂ ತನ್ನ ಕಾರ್ಯ ನಿರುವಹಿಸುತ್ತಿದೆ. ಇಂದು ಕೂಡ ಎಲ್ಲರಿಗು ಚಿರ ಪರಿಚಿತ ಈ ಫೆವಿಕಾಲ್. ಚಿಕ್ಕ ವಸ್ತುವಿನಿಂದ ಹಿಡಿದು ದೊಡ್ಡ ವಸ್ತುವಿನ ವರೆಗೂ ಅಂಟಿಸುವ ಕೆಲಸಕ್ಕೆ ಈ ಫೆವಿಕಾಲ್ ಬಳಕೆಯಾಗುತ್ತದೆ. ಆದರೆ ನೀವು ಈ ಬ್ರಾಂಡ್ ನಿರ್ಮಾಣ ಮಾಡಿದವರ ಬಗ್ಗೆ ತಿಳಿದುಕೊಂಡಿದ್ದೀರಾ?

ಫೆವಿಕಾಲ್ ಪ್ರತಿ ಮನೆ ಮನೆಗೂ ತಲುಪಲು ಶ್ರಮ ಪಟ್ಟವರು ಬಲವಂತ್ ಪಾರೇಖ್. ಪ್ರತಿ ಮನೆ ಮಾತಾಗಲು ಕೂಡ ಕಾರಣ ಪಾರೇಖ್. ಭಾರತ ಸ್ವತಂತ್ರ ಪಡೆದ ನಂತರ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಿದ ಕೆಲ ಜನರಲ್ಲಿ ಒಬ್ಬರು ಬಲವಂತ್ ಪಾರೇಖ್. ಇಂದು ಪಾರೇಖ್ ಕೋಟ್ಯಧಿಪತಿ ಆಗಿದ್ದರು ಕೂಡ ಇವರು ತಮ್ಮ ಉದ್ಯಮ ಪ್ರಾರಂಭಿಸುವಾಗ ಬಹಳ ಕಷ್ಟ ಪಟ್ಟಿದ್ದಾರೆ. ಸ್ವತಂತ್ರ ನಂತರ ಭಾರತದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಜನರ ಬಳಿ ಊಟ ಹಾಗು ಹಾಕಿಕೊಳ್ಳಲು ಬಟ್ಟೆ ಖರೀದಿ ಮಾಡಲು ಕೂಡ ಹಣವಿರಲಿಲ್ಲ. ಇದೆ ಸಮಯದಲ್ಲಿ ದೇಶದ ಜನರ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಲು ಪಾರೇಖ್ ಅವರು ಫೆವಿಕಾಲ್ ತಯಾರಿಸಲು ಅಡಿಪಾಯ ಹಾಕಿದರು.

ಬಲವಾಂತ್ ಪಾರೇಖ್ ಅವರ ಜನ್ಮ ೧೯೨೫ ರಲ್ಲಿ ಗುಜರಾತಿನಲ್ಲಿ ಆಯಿತು. ಬಾಲ್ಯದಲ್ಲಿಯೇ ಉದ್ಯಮ ಮಾಡುವ ಆಸಕ್ತಿ ಇತ್ತು. ಆದರೆ ಮನೆಯಲ್ಲಿ ಪಾರೇಖ್ ವಿದ್ಯಾಭ್ಯಾಸ ಮಾಡಿ ವಕೀಲರಾಗಬೇಕು ಎನ್ನುವುದು. ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ವಕೀಲ ಪದವಿ ವಿದ್ಯಾಭ್ಯಾಸಕ್ಕಾಗಿ ಮುಂಬೈ ಗೆ ಬಂದರು. ಈ ಸಮಯದಲ್ಲಿ ಇಡೀ ಭಾರತ ಮಹಾತ್ಮಾ ಗಾಂಧೀಜಿ ಅವರ ಜೊತೆ ಭಾರತದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ಸಮಯ. ಪಾರೇಖ್ ಕೂಡ ಈ ಸಮಯದಲ್ಲಿ ಸ್ವತಂತ್ರ ಹೋರಾಟಕ್ಕೆ ಧುಮುಕಿದರು.

ಜೀವನೋಪಾಯಕ್ಕಾಗಿ ಸರಳ ಕೆಲಸ
ವಕೀಲ ವೃತ್ತಿ ಮಾಡುವುದಿಲ್ಲ ಎಂದು ತೀರ್ಮಾನಿಸಿದ ಪಾರೇಖ್ ಅವರು ತಮ್ಮ ಜೀವನೋಪಾಯಕ್ಕಾಗಿ ಏನಾದರು ಕೆಲಸ ಮಾಡಲೇಬೇಕಿತ್ತು. ಅದಕ್ಕಾಗಿ ಅವರು ಮುಂಬೈ ಅಲ್ಲಿ ಡೈಯಿಂಗ್ ಅಂಡ್ ಪ್ರಿಂಟಿಂಗ್ ಪ್ರೆಸ್ ಅಲ್ಲಿ ಕೆಲಸ ಕಂಡುಕೊಂಡರು. ಶುರು ಶುರ್ವಿನಲ್ಲಿ ಈ ಪ್ರೆಸ್ ಅಲ್ಲಿ ಕೆಲಸ ಮಾಡುವುದಕ್ಕೆ ಉತ್ಸಾಹ ಇರುತ್ತಿರಲಿಲ್ಲ. ಆದರೆ ಅವರ ಆರ್ಥಿಕ ಪರಿಸ್ಥಿತಿ ಎದುರು ಸೋಲುವುದಕ್ಕಿಂತ ಈ ಕೆಲಸ ಮಾಡುವುದೇ ಒಳಿತು ಎಂದು ಕೆಲಸ ಮುಂದುವರೆಸಿದರು.

ಸ್ವಲ್ಪ ಸಮಯ ಪ್ರೆಸ್ ಅಲ್ಲಿ ಕೆಲಸ ಮಾಡಿದ ನಂತರ ಆ ಕೆಲಸ ಬಿಟ್ಟು ಒಂದು ಕಟ್ಟಿಗೆ ಕೆಲಸ ದ ಆಫೀಸ್ ಅಲ್ಲಿ ಪ್ಯೂನ್ ಆಗಿ ಕೆಲಸಕ್ಕೆ ಸೇರಿಕೊಂಡರು. ವಕೀಲ ವೃತ್ತಿಗೆ ಓದಿದ ವ್ಯಕ್ತಿಗೆ ಈ ಪ್ಯೂನ್ ಕೆಲಸ ಬಹಳ ಕಷ್ಟದ ಕೆಲಸವಾಗಿತ್ತು. ಆದರೆ ಪಾರೇಖ್ ರ ದೃಢ ನಿರ್ಧಾರ ಈ ಕೆಲಸ ಮಾಡುವಂತೆ ಅವರಿಗೆ ಪ್ರೇರೇಪಣೆ ನೀಡಿತ್ತು. ಈ ಕೆಲಸದ ವೇಳೆ ಪಾರೇಖ್ ಅವರಿಗೆ ಗೋದಾಮಿನಲ್ಲಿ ಇರಬೇಕಾಯಿತು. ಅವರ ಜೊತೆ ಅವರ ಪತ್ನಿ ಕೂಡ ಅಲ್ಲಿಯೇ ಇದ್ದು ತಮ್ಮ ಸಂಸಾರ ಸಾಗಿಸುತ್ತಿದ್ದರು. ಹೀಗೆ ಬೇರೆ ಬೇರೆ ಕೆಲಸ ಮಾಡಿ ಒಂದು ಉದ್ಯಮ ಮಾಡುವ ಅನುಭವ ಪಡೆದುಕೊಂಡರು.

ಜರ್ಮನಿ ಅಲ್ಲಿ ಸಿಕ್ಕಿತು ಉದ್ಯಮ ಮಾಡುವ ಉಪಾಯ.
ತಮ್ಮ ಕೆಲಸ ಬದಲಾಯಿಸುತ್ತಲೇ ಇದ್ದ ಪಾರೇಖ್ ಅವರಿಗೆ ಒಬ್ಬ ವ್ಯಾಪಾರಿಯ ಮೂಲಕ ಜರ್ಮನಿ ಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಸಿಕ್ಕಿದ ವ್ಯಾಪಾರಿಗಳ ಮೂಲಕ ತಮ್ಮ ಉದ್ಯಮ ಪ್ರಾರಂಭಿಸುವ ಉಪಾಯ ಸಿಕ್ಕಿತು ಪಾರೇಖ್ ಅವರಿಗೆ. ಅಲ್ಲಿಂದ ವಾಪಸಾಗುತ್ತಿದ್ದಂತೆ ಪಾರೇಖ್ ಅವರು ಪಶಿಮತ್ಯ ದೇಶಗಳಿಂದ ಸೈಕಲ್, ಎಕ್ಸ್ಟ್ರಾ ನಟ್ಸ್ ಹಾಗು ಪೆಪ್ಪರ್ ಹೈ ನಂತಹ ವಸ್ತುಗಳನ್ನು ಆಮದು ಮಾಡುವ ಉದ್ಯಮ ಪ್ರಾರಂಭಿಸಿದರು. ಅದಾದ ನಂತರ ಅವರ ಅದೃಷ್ಟ ರಾತ್ರೋ ರಾತ್ರಿ ಬದಲಾಯಿತು.

ಉದ್ಯಮ ಪ್ರಾರಂಭಿಸಿದ ತಕ್ಷಣ ತಮ್ಮ ಬಾಡಿಗೆ ಮನೆಯಿಂದ ಹೊರಗೆ ಬಂದರು. ಅಲ್ಲಿಂದ ಒಂದು ಫ್ಲಾಟ್ ಖರೀದಿಸಿ ಅಲ್ಲಿಯೇ ತಮ್ಮ ಪರಿವಾರದ ಜೊತೆ ವಾಸಿಸಲು ಪ್ರಾರಂಭಿಸಿದರು. ಈ ಉದ್ಯಮದಿಂದ ಪಾರೇಖ್ ಅವರಿಗೆ ಉತ್ತಮ ಯಶಸ್ಸು ಸಿಕ್ಕಿತು. ಅದೇ ರೀತಿ ಬಹಳ ಕಡಿಮೆ ಸಮಯದಲ್ಲಿ ಉತ್ತಮ ಹಣ ಮಾಡಿದರು. ಆದರೆ ಪಾರೇಖ್ ಅವರಿಗೆ ಬ್ರಿಟಿಷರು ಭಾರತ ಬಿಟ್ಟು ಹೋದ ನಂತರ ನಿಜವಾದ ಯಶಸ್ಸು ಸಿಕ್ಕಿತು. ಯಾಕೆಂದರೆ ಭಾರತ ಸ್ವತಂತ್ರ ಹೊಂದಿದ ನಂತರ ಯಾರಿಗೂ ಕೂಡ ಬಗ್ಗಬೇಕಾಗಿರಲಿಲ್ಲ ಭಾರತೀಯರು.

ಭಾರತದ ಫೆವಿಕಾಲ್ ಮ್ಯಾನ್(FEVICOL MAN OF INDIA )
ಬಲವಂತ್ ಪಾರೇಖ್ ಅವರನ್ನು ಫೆವಿಕಾಲ್ ಮ್ಯಾನ್ ಎಂದು ಕರೆಯಲಾಗುತ್ತದೆ. ಪಿಡಿಲೀಟೆ ಎನ್ನುವ ಕಂಪನಿ ಅಲ್ಲಿ ಫೆವಿಕಾಲ್ ಎನ್ನುವ ಉತ್ಪನ್ನ ಉತ್ಪಾದಿಸಲು ಪ್ರಾರಂಭಿಸಿದರು. ಈ ಫೆವಿಕಾಲ್ ಜೊತೆಗೆ DR ಫಿಕ್ಸಿಟ್, ಫೆವಿ ಕ್ವಿಕ್, M – ಸೀಲ್ ನಂತಹ ಪ್ರಾಡಕ್ಟ್ ಕೂಡ ಉತ್ಪಾದಿಸಲು ಪ್ರಾರಂಭಿಸಿದರು. ಇದರ ಹಿಂದೆಯೂ ಕಾರಣವಿದೆ. ತಾನು ಪಿಯುನ ಆಗಿ ಕಟ್ಟಿಗೆ ಫ್ಯಾಕ್ಟರಿ ಅಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕಟ್ಟಿಗೆ ಗಳನ್ನೂ ಜೋಡಿಸಲು ಬಹಳ ಕಷ್ಟ ಪಡುತ್ತಿದ್ದರು. ಇದು ಅವರಿಗೆ ಅನುಭವ ಇಡಿದರಿಂದ ಕಟ್ಟಿಗೆ ಗಳನ್ನೂ ಜೋಡಿಸುವ ಈ ಗಮ್ ಗಳನ್ನೂ ತಯಾರಿಸುವ ಉದ್ಯಮಕ್ಕೆ ತಮ್ಮನು ತಾವು ತೊಡಗಿಸಿಕೊಂಡರು.

ಇದಾದ ನಂತರ ಪಾರೇಖ್ ಅವರು ಬಹಳ ಸಂಶೋಧನೆ ನಡೆಸಿ ಸಿನಿಟೆಟಿಕ್ ರಸಾಯನ ದ ಫಾರ್ಮುಲಾ ವನ್ನು ಕಂಡು ಹಿಡಿದರು. ಇದನ್ನು ಪ್ರಯೋಗ ನಡೆಸಿದರು ಇದರ ಉತ್ಪನ್ನವೇ ವಾಸನೆ ರಹಿತ ಬೆಲ್ಲ. ೧೯೯೫ ರಲ್ಲಿ ತಮ್ಮ ಸಹೋದರ ಸುನಿಲ್ ಪಾರೇಖ್ ಅವರ ಜೊತೆ ಗೂಡಿ PIDLITE ಇಂಡಸ್ಟ್ರೀಸ್ ಗೆ ಅಡಿಪಾಯ ಹಾಕಿದರು. ಈ ಬ್ರಾಂಡ್ ನ ಫೆವಿಕಾಲ್ ಪರಿಮಳ ದಿಂದ ಕೂಡಿತ್ತು. ಇದಕ್ಕಿಂತ ಮೊದಲು ಜನರು ಪ್ರಾಣಿಗಳ ಕೊಬ್ಬಿನಿಂದ ಗಮ್ ಅನ್ನು ತಯಾರಿಸುತ್ತಿದ್ದರು. ಅದನ್ನು ಮಾಡುವುದು ತುಂಬಾ ಕಷ್ಟದ ಕೆಲಸ ಕೂಡ ಆಗಿತ್ತು. ಅದೇ ಕಾರಣಕ್ಕೆ ಫೆವಿಕಾಲ್ ಜನರನ್ನು ತಲುಪಲು ಸಹಕಾರಿಯಾಯಿತು.

ಈ PIDILITE ಇಂಡಸ್ಟ್ರೀಸ್ ಅನೇಕ ಜನರಿಗೆ ಉದ್ಯೋಗ ನೀಡಿದೆ. ಇಂದಿನ ದಿನಗಳಲ್ಲಿ ಇದು ೨೦೦ ಕ್ಕೂ ಹೆಚ್ಚು ಪ್ರಾಡಕ್ಟ್ ಗಳನ್ನೂ ಉತ್ಪಾದನೆ ಮಾಡುತ್ತಿದೆ. ಆದರೆ ಇದೆಲ್ಲದಕ್ಕಿಂತ ಹೆಚ್ಚು ಲಾಭ ಫೆವಿಕಾಲ್ ಇಂದಾನೆ ಬರುತ್ತಿದೆ. ೧೯೯೭ ರಲ್ಲಿ ಈ ಫೆವಿಕಾಲ್ ಅನ್ನು ಟಾಪ್ ೧೫ ಬ್ರಾಂಡ್ ನಲ್ಲಿ ಸೇರಿಸಲಾಯಿತು. ೨೦೦೪ ರಲ್ಲಿ PIDILITE ಕಂಪನಿ ಕಾರುಬಾರು ೧೦೦೦ ಕೋಟಿ ದಾಟಿತು. ೨೦೦೬ ರಲ್ಲಿ ಈ ಕಂಪನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರಾಡಕ್ಟ್ ಮಾರಾಟ ಮಾಡಲು ಪ್ರಾರಂಭಿಸಿತು. ಅಮೇರಿಕ, ಥೈಲ್ಯಾಂಡ್, ದುಬೈ, ಈಜಿಪ್ಟ್ ಹಾಗು ಬಾಂಗ್ಲಾದೇಶದಲ್ಲಿ ಬ್ರಾಂಚ್ ಗಳನ್ನೂ ಹೊಂದಿದೆ ಬಲವಂತ್ ಪಾರೇಖ್ ಅವರ PIDILITE INDUSTRY.

Leave A Reply

Your email address will not be published.