ಮನೆಯಲ್ಲೇ 200 ಸ್ಕ್ವೇರ್ ಫೀಟ್ ಜಾಗ ಹಾಗು ಕಡಿಮೆ ಅಂದರೆ ೧೦೦೦೦ ರೂಪಾಯಿ ಬಂಡವಾಳ ಇದ್ದರೆ ಶುರು ಮಾಡಬಹುದು ಈ ಉದ್ಯಮ?

362

ಎಲ್ಲರಿಗೂ ಓದಬೇಕು ಕಲಿಯಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಯಾವಾಗ ಇದು ಮುಗಿಸಿ ಕೆಲಸಕ್ಕೆ ಹೋಗಲು ಆರಂಭಿಸುತ್ತಾರೆ ಆಗ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಭಾವನೆ ಮೂಡುತ್ತದೆ. ಮತ್ತೊಬ್ಬರ ಕೈ ಕೆಳಗೆ ದುಡಿಯುವ ಬಗೆಗೆ ಜಿಗುಪ್ಸೆ ಹುಟ್ಟಿ ಬರುತ್ತದೆ. ಆಗ ಅವರು ಸ್ವ ಉದ್ಯೋಗ ಮಾಡಬೇಕು ಎಂಬ ಯೋಚನೆಯಲ್ಲಿ ತೊಡಗುತ್ತಾರೆ. ಅದೆಷ್ಟೋ ಜನ ಯುವಕರು ತಮ್ಮ ಸ್ವಂತ ವ್ಯವಹಾರ ನಡೆಸಿ ಮೇಲೆ ಬರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಯಾವ ವ್ಯವಹಾರಕ್ಕೆ ಕೈ ಹಾಕಬೇಕು ಎಂದು ತಿಳಿದಿರುವುದಿಲ್ಲ. ನಾವು ಇಂದು ಇಲ್ಲಿ ನಿಮಗೆ ಕಡಿಮೆ ಕರ್ಚಿನಲ್ಲೂ ಸ್ವ ಉದ್ಯಮ ಮಾಡಬಹುದು ಎಂದು ಹೇಳಿಕೊಡುತ್ತೇವೆ.

ಸ್ವಂತ ವಹಿವಾಟು ನಡೆಸಿ ಕೈ ಸುಟ್ಟುಕೊಂಡ ಅದೆಷ್ಟೋ ಮಂದಿ ಇದ್ದಾರೆ .ಅಂತಹವರ ಹಾಗೆ ನಿಮ್ಮ ಜೀವನ ಆಗದಿರಲಿ ಎಂಬುವುದು ನಮ್ಮ ಕಾಳಜಿ. ಬನ್ನಿ ಈ ವ್ಯವಹಾರದ ಬಗ್ಗೆ ತಿಳಿಯೋಣ. ನಿಮ್ಮ ಬಳಿ ಸ್ವಲ್ಪ ಜಾಗ ಇದೆಯೇ ? ಎಂದರೆ 200 ಸ್ಕ್ವೇರ್ ಫೀಟ್ ವರೆಗೆ ಜಾಗ ಅಥವಾ ಮನೆಯ ಮಾಡಿಯ ಮೇಲೆ ಜಾಗ ಇದ್ದರೂ ಇದನ್ನು ಆರಂಭಿಸಬಹುದು. ಇದಕ್ಕೆ ಬೇಕಾದ ಬಂಡವಾಳ ಆರಂಭದಲ್ಲಿ 10,000 ಅಷ್ಟೇ ಆದರೆ ಮತ್ತೆ ವ್ಯವಹಾರದ ಬೆಳವಣಿಗೆ ನೋಡಿ ನೀವು ಬಂಡವಾಳ ಹೆಚ್ಚಿಸಿ ಕೊಳ್ಳಬಹುದು. ಇದು ನಮ್ಮ ಸಾಂಪ್ರದಾಯಿಕ ವ್ಯವಹಾರದಲ್ಲಿ ಒಂದಾದ ಕೋಳಿ ಸಾಕಣೆ. ಆದರೆ ಇದು ಯಾವುದೇ ಸಾಮಾನ್ಯ ಕೋಳಿ ಅಲ್ಲ ವರ್ಷ ಪೂರ್ತಿ ಮೊಟ್ಟೆ ಇಡುವ ಕೋಳಿ ಇದು. ಹೌದು ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

BV380 ಕೋಳಿ ಎಂದು ಇದನ್ನು ಕರೆಯುತ್ತಾರೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ ಮತ್ತು ಇದು ಊರಿನ ತಳಿಗೆ ಸೇರಿದ ಕೋಳಿ ಆಗಿದ್ದು. ಯಾವುದೇ ರೀತಿಯ ಹವಾಮಾನಕ್ಕೆ ಒಗ್ಗಿ ಕೊಳ್ಳುತ್ತದೆ. ರೈತರು ಹೇಳುವ ಹಾಗೆ ಇದು 18 ರಿಂದ 40 ಡಿಗ್ರಿ ವರೆಗಿನ ತಾಪಮಾನ ಸಹಸಿಕೊಳ್ಳುತ್ತದೆ. ಆರಂಭದಲ್ಲಿ 100 ಕೊಳಿಯಿಂದ ಈ ಉದ್ಯಮ ಆರಂಭಿಸಬಹುದು. ಇದರ ಗೂಡಿನ ಖರ್ಚು ಕೋಳಿಯ ಖರ್ಚು ಸೇರಿ 10,000 ವರೆಗೆ ಅಂದಾಜು ಬರುತ್ತದೆ, ಮತ್ತು ಇದು ವರ್ಷದ ಪೂರ್ತಿ ಮೊಟ್ಟೆ ಇಡುತ್ತದೆ. ರೈತರ ಮಾಹಿತಿ ಪ್ರಕಾರ ಇದು 18 ತಿಂಗಳು ಮೊಟ್ಟೆ ಇಡುತ್ತದೆ. ಇದರ ಆಹಾರ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ. ಹೆಚ್ಚೇನೂ ಖರ್ಚು ವೆಚ್ಚ ಇಲ್ಲ.

ಕೆಲಸ ಕೂಡ ಕಡಿಮೆ ಮಾಹಿತಿ ಪ್ರಕಾರ ದಿನಕ್ಕೆ ಒಂದು ಘಂಟೆ ಸಂಜೆ ಒಂದು ಘಂಟೆ ಕೆಲಸ ಇರುತ್ತದೆ ಅಷ್ಟೇ. ಇದರಿಂದ ಗೊಬ್ಬರ ಕೂಡ ಸಿಗುತ್ತದೆ. ಈ ಮೊಟ್ಟೆ ಸಾಮಾನ್ಯ ಮೊತ್ತೆಯಂತೆ ಅಲ್ಲ ಇದಕ್ಕೆ ಒಂದಕ್ಕೆ 10ರೂಪಾಯಿ ವರೆಗೆ ಮಾರುಕಟ್ಟೆ ದರ ಇದೆ. ಯಾಕಂದರೆ ಇದರಲ್ಲಿ ಅಷ್ಟೊಂದು ಆರೋಗ್ಯ ಸತ್ವ ಇದೆ. ಬಿಪಿ ಶುಗರ್ ರಕ್ತ ಹೀನತೆ, ಮಕ್ಕಳಿಗೆ, ಬೆಳವಣಿಗೆ ಇಲ್ಲದವರಿಗೆ ಈ ಮೊಟ್ಟೆಗಳು ಬೇಕು. ಆದ್ದರಿಂದ ನೀವು ಕೂಡ ಸ್ವ ಉದ್ಯೋಗ ನಡೆಸುವ ಯೋಚನೆ ಅಲ್ಲಿದ್ದಾರೆ BV 380 ಕೋಳಿ ಸಾಕಣೆ ಬಗ್ಗೆ ಯೋಚಿಸಿ.

Leave A Reply

Your email address will not be published.