ಮಾಲ್ ಹಾಗು ಆಫೀಸ್ ಟಾಯ್ಲೆಟ್ಗಳಲ್ಲಿ ಬಾಗಿಲು ಕಾಲಿನ ಬಳಿ ತೆರೆದಿರುತ್ತದೆ. ಇದಕ್ಕೆ ಅಚ್ಚರಿಯ ಕಾರಣ ಏನು?

502

ಮಾಲ್ ಹಾಗು ಆಫೀಸ್ ಗಳಲ್ಲಿ ನೀವು ಶೌಚಾಲಯ ಬಳಸಿದ್ದೀರಾ ಅಂದರೆ ನೀವು ಅಲ್ಲಿನ ಬಾಗಿಲುಗಳನ್ನು ನೋಡಿರಬಹುದು. ಆ ಬಾಗಿಲುಗಳು ಪೂರ್ತಿ ಮುಚ್ಚಿರುವುದಿಲ್ಲ. ಬದಲಾಗಿ ಕೆಳಗಿನ ಭಾಗದಲ್ಲಿ ಸ್ವಲ್ಪ ತೆರೆದಿರುತ್ತದೆ. ಇದು ಯಾವ ಕಾರಣಕ್ಕೆ ಈ ರೀತಿ ಮಾಡಿರಬಹುದು ಎಂದು ನೀವು ಕೂಡ ಯೋಚನೆ ಮಾಡಿರಬಹುದು. ಇದರ ಹಿಂದಿನ ಕಾರಣವೇನು ಎಂದು ತಿಳಿಯಲು ಪ್ರಯತ್ನ ಕೂಡ ಪಟ್ಟಿರಬಹುದು. ಇದಕ್ಕೆ ಕಾರಣ ಅನೇಕವಿದೆ, ಇದರ ಬಗ್ಗೆ ನಾವಿಂದು ಹೇಳುತ್ತೇವೆ.

ಈ ಬಾಗಿಲುಗಳು ಕೆಳಗೆ ತೆರೆದಿರುವುದರಿಂದ ಸ್ವಚ್ಛ ಮಾಡುವ ಕೆಲಸಗಾರರಿಗೆ ಸುಲಭವಾಗಿ ಸ್ವಚ್ಛ ಮಾಡಬಹದು. ನೆಲದ ಮೇಲಿನ ನೀರು ಹಾಗು ತೇವಾಂಶದಿಂದ ಬಾಗಿಲುಗಳು ಹಾಳಾಗುವ ಸಂಭವವೂ ಕೂಡ ಕಡಿಮೆ ಇರುತ್ತದೆ. ಈ ಬಾಗಿಲುಗಳಿಂದ ಗಾಳಿ ತಡೆಯಿಲ್ಲದೆ ಹೋಗುವುದರಿಂದ ಒಳಗೆ ಬಳಸುವವರಿಗೆ ಉಸಿರುಗಟ್ಟುವ ಪ್ರಸಂಗ ಬರುವುದಿಲ್ಲ. ಅದೇ ರೀತಿ ಧೂಮಪಾನ ಮಾಡುವ ಅಭ್ಯಾಸ ಇದ್ದವರಿಗೆ ಪೂರ್ತಿ ಮುಚ್ಚಿದ ಬಾಗಿಲುಗಳಿಂದ ಅಪಾಯ ಸಂಭವಿಸ ಬಹುದು ಈ ಕಾರಣಕ್ಕೂ ಕೂಡ ಈ ಬಾಗಿಲು ಪೂರ್ತಿ ಮುಚ್ಚಿರುವುದಿಲ್ಲ.

ಅದಲ್ಲದೆ ಯಾರಾದರೂ ಧೂಮಪಾನ ನಿಷಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿದ್ದಾರೆ ಸುಲಭವಾಗಿ ಈ ರೀತಿಯ ಬಾಗಿಲುಗಳಿಂದ ಗೊತ್ತಾಗುತ್ತದೆ. ಕೂಡಲೇ ಅವರನ್ನು ಹೊರಗೆ ಕಳುಹಿಸಬಹುದು. ಮಕ್ಕಳು ಒಂದು ವೇಳೆ ಶೌಚಾಲಯ ಬಳಸುವಾಗ ಅಪ್ಪಿ ತಪ್ಪಿ ಚಿಲಕ ಹಾಕಿ ಕೊಂಡರೆ ಹಾಗೆ ತೆರೆಯಲು ಅವರಿಗೆ ಸಾಧ್ಯವಾಗದೆ ಇದ್ದಾರೆ ಇಂತಹ ಬಾಗಿಲುಗಳಿಂದ ಸುಲಭವಾಗಿ ಅವರನ್ನು ಹೊರಗೆ ತರಬಹುದು. ತುರ್ತು ಪರಿಸ್ಥಿತಿಯಲ್ಲಿ ಈ ಬಾಗಿಲುಗಳು ಸಹಾಯಕವಾಗಿದೆ.

ಅದು ಮಾತ್ರ ಅಲ್ಲದೆ ಈಗಿನ ಅನೇಕ ಕಡೆ ಕಬ್ಬಿಣದ ಬಾಗಿಲು ಮಾಡದೇ ಕೇವಲ ಪ್ಲಯ್ ವುಡ್ ನಂತಹ ವಸ್ತುಗಳಿಂದ ಬಾಗಿಲು ತಯಾರಿಸುತ್ತಾರೆ. ಇದು ಈ ಕೆಳಗೆ ನೀರಿನ ತೇವಾಂಶ ಇದ್ದರೆ ಬಾಗಿಲುಗಳು ಹಾಳಾಗುವ ಸಂಭವ ಹೆಚ್ಚಿರುತ್ತದೆ. ಇದು ಕಾರಣಕ್ಕೂ ಕೂಡ ಬಾಗಿಲುಗಳನ್ನು ನೆಲಕ್ಕೆ ಮುಟ್ಟಿಸದೆ ಸ್ವಲ್ಪ ಅಂತರ ವಿಟ್ಟು ಬಾಗಿಲುಗಳನ್ನು ತಯಾರಿಸುತ್ತಾರೆ. ಈ ತರಹ ಬಾಗಿಲುಗಳನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಇಂತಹ ಇನ್ನು ಅನೇಕ ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಫಾಲೋ ಮಾಡಿ.

Leave A Reply

Your email address will not be published.