ಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ ಚೀನಾ ಕಂಪನಿಗಳು ಇದೀಗ ಕಾರುಗಳ ಕ್ಷೇತ್ರದಲ್ಲೂ ಹೊಸ ಇತಿಹಾಸ ಸೃಷ್ಟಿಸಲು ತಯಾರಾಗಿದೆ.

1,794

ಶವೋಮಿ ಕಂಪನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಮೊಬೈಲ್ ಮತ್ತು ಕಂಪ್ಯೂಟರ್ ಉತ್ಪಾದನೆಯಲ್ಲಿ ತಮ್ಮದೇ ಆದ ಮಾರುಕಟ್ಟೆಯನ್ನು ಸೃಷ್ಟಿಸಿದ ಕಂಪನಿ. ಕೇವಲ ಮೊಬೈಲ್ ಕಂಪ್ಯೂಟರ್ ಅಲ್ಲದೇ ಇತರೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಹೆಗ್ಗಳಿಕೆ ಈ ಕಂಪನಿಯದ್ದು. ಮೂಲತಃ ಚೀನಾ ಮೂಲದ ಕಂಪನಿ ಆದರೂ ಭಾರತದಲ್ಲಿ ಅದೆಷ್ಟೋ ಜನರಿಗೆ ಉದ್ಯೋಗ ಕೊಟ್ಟಿದೆ. ಉತ್ಪಾದನಾ ಘಟಕ ಭಾರತದಲ್ಲೇ ಇದ್ದು ಉತ್ತಮ ಸ್ಪಂದನೆ ದೊರೆತಿದೆ. ಈ ಕಂಪನಿ ಇದೀಗ ಮಾಧ್ಯಮ ವರ್ಗದ ಜನರ ಕನಸನ್ನು ಈಡೇರಿಸಲು ಹೊಸ ಉತ್ಪನ್ನವನ್ನು ಮಾರುಕಟ್ಟೆ ಪರಿಚಯಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ.

ಯಾವುದು ಆ ಉತ್ಪನ್ನ ಇದರಿಂದ ಮಾಧ್ಯಮ ವರ್ಗದವರ ಕನಸು ಹೇಗೆ ನನಸಾಗುತ್ತದೆ ? ಬನ್ನಿ ತಿಳಿಯೋಣ. ಜೀವನದಲ್ಲಿ ಎಲ್ಲರೂ ಒಂದು ಕಾರು ಹೊಂದಿರಬೇಕು ಎಂದು ಆಸೆ ಪಡುತ್ತಾರೆ. ಕಾರಲ್ಲಿ ಓಡಾಡಬೇಕು ಎಂಬುದು ಎಲ್ಲರ ಕನಸು ಆದರೆ ಅದನ್ನು ಖರೀದಿಸುವ ಕ್ಷಮತೆ ಎಲ್ಲರಲ್ಲೂ ಇರುವುದಿಲ್ಲ. ಹಾಗಾದರೆ ಕಾರಿಗು ಶವೋಮೀ ಕಂಪನಿಗೆ ಏನು ಸಂಬಂಧ ಎಂದು ಯೋಚಿಸಬಹುದು, ಆದರೆ ಇದೀಗ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಹೊಸ ವಸ್ತು ಎಲೆಕ್ಟ್ರಿಕ್ ಕಾರು. ಹೌದು ಅಚ್ಚರಿ ಎನಿಸಿದರು ಇದು ಸತ್ಯ ಸಂಗತಿ.

ಇದಕ್ಕಾಗಿ ಕಂಪನಿ ಇದೀಗಾಗಲೇ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು ಈ ವರ್ಷದಲ್ಲೇ ಕಾರುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಲ್ಲಿದೆ. ಈ ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಸಿದ್ದು ಹೌಡಾದಲ್ಲಿ ದೊಡ್ಡ ಪೈಪೋಟಿ ನಡೆಯುವುದು ಖಚಿತವಾಗಿದೆ. ಚೀನಾದ ವಸ್ತುಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿ ಬಿಟ್ಟಿದೆ. ಭಾರತ ಇದರಿಂದ ಅತಿ ಹೆಚ್ಚು ನಷ್ಟ ಅನುಭವಿಸುತ್ತಿದೆ. ಚೀನಾ ವಸ್ತುಗಳನ್ನು ಬಳಸುವುದನ್ನು ನಿಲ್ಲಿಸಿ ದೇಶಿಯ ವಸ್ತುಗಳನ್ನು ಬಳಸೋಣ.

Leave A Reply

Your email address will not be published.