ರೈಲ್ವೆ ಸ್ಟೇಷನ್ ಅಲ್ಲಿ ಗುಟ್ಕಾ ತಿಂದು ಉಗುಳುವುದರಿಂದ ಸರಕಾರಕ್ಕೆ ವರ್ಷಕ್ಕೆ ಆಗುತ್ತಿರುವ ನಷ್ಟ ಎಷ್ಟು ಗೊತ್ತೇ? ಜವಾಬ್ದಾರಿ ನಾಗರಿಕರಾಗಿ ಈ ಕೆಲಸ ಮಾಡಲೇಬೇಡಿ.

466

ರೈಲ್ವೇ ಇಲಾಖೆ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ. ಇಡೀ ದೇಶದಲ್ಲೇ ಅತಿ ದೊಡ್ಡ ಸಾರಿಗೆ ವ್ಯವಸ್ಥೆ ಇದ್ದಾರೆ ಅದು ರೈಲ್ವೆ ಸಾರಿಗೆ ಮಾತ್ರ. ದೇಶದ ಮೂಲೆ ಮೂಲೆಗೂ ಸಾಗುವ ಈ ರೈಲ್ವೆ ವ್ಯವಸ್ಥೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಸಾಗುವ ವ್ಯವಸ್ಥೆ. ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡಿ ಸಾಕುವ ವ್ಯವಸ್ಥೆ ಇದ್ದರೆ ಅದು ಭಾರತೀಯ ರೈಲ್ವೇ ಇಲಾಖೆ. ಹೌದು ಇದು ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇಲಾಖೆ.

ಹಾಗಾದರೆ ಇಷ್ಟೊಂದು ಆದಾಯ ಇರುವ ಈ ರೈಲ್ವೆ ಇಲಾಖೆ ವರ್ಷಕ್ಕೆ 1200 ಕೋಟಿ ಅಷ್ಟು ಹಣವನ್ನು ಸುಮ್ಮನೆ ವ್ಯರ್ಥ ಮಾಡುತ್ತಿದೆ. ಹೌದು ಇದು ರೈಲ್ವೆ ಇಲಾಖೆ ಬೇಕಂತಲೇ ಮಾಡುವ ಖರ್ಚಲ್ಲ. ಬದಲಾಗಿ ಜನರ ಬೇಜವಾಬ್ದರಿ ವರ್ತನೆಯಿಂದ ರೈಲ್ವೆ ಇಲಾಖೆ ಈ ಒಂದು ಹಣವನ್ನು ವ್ಯಯ ಮಾಡುತ್ತಿದೆ. ರೈಲ್ವೇ ಪಟ್ಟಿ, ರೈಲ್ವೆ ಕಂಪರ್ಟ್ ಮೆಂಟ್ ಗಳಲ್ಲಿ ಕೆಲವೊಂದು ಜನರು ಗುಟ್ಕಾ ಪಾನ್ ಪರಾಗ್ ತಿಂದು ಉಗುಳುವುದನ್ನು ಕಾಣಬಹುದು. ದೇಶದಾದ್ಯಂತ ಇದನ್ನು ಸ್ವಚ್ಚ ಗೊಳಿಸಲು ಭಾರತೀಯ ರೈಲ್ವೆ ಇಲಾಖೆ ಬರೋಬ್ಬರಿ 1200 ಕೋಟಿಯಷ್ಟು ಹಣ ವ್ಯಯಿಸುತ್ತದೆ. ಭಾರತೀಯ ನಾಗರಿಕರಾಗಿ ನಮಗೂ ಕೂಡ ಸಾರ್ವಜನಿಕ ಆಸ್ತಿಯ ಬಗೆಗೆ ಕರ್ತವ್ಯ ಇದೆ.

ಅದನ್ನು ಉಳಿಸುವುದು ನಮ್ಮ ಕರ್ತವ್ಯ ಕೂಡ ಇದೆ. ಹೀಗೆ ಬೇಜವಾಬ್ದರಿ ತನದಿಂದ ವರ್ತಿಸುವುದು ಬಿಟ್ಟು ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿ ಸರ್ಕಾರದ ಬೊಕ್ಕಸದ , ರೈಲ್ವೆ ಇಲಾಖೆಯ ಹಣ ಉಳಿಸೋಣ ಇದನ್ನು ಬೇರೆ ಯಾವುದೋ ಕೆಲ್ಸಕ್ಕೆ ವಿನಿಯೋಗಿಸಬಹುದು. ಇಂತಹ ಕೆಲಸ ಮಾಡುವ ಜನರನ್ನು ಅಲ್ಲಲಿ ಹಿಡಿದು ದಂಡ ಹಾಕಬೇಕು ಆಗಲೇ ಇಂತವರು ಸುಧಾರಿಸುತ್ತಾರೆ ಇಲ್ಲವಾದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ.

Leave A Reply

Your email address will not be published.