ಸಾಯಿ ಪಲ್ಲವಿ “ಗಾರ್ಗಿ” ಗಾಗಿ ಸ್ಪಷ್ಟವಾಗಿ ಕನ್ನಡ ಮಾತಾಡಲು ಕಲಿಯುತ್ತಿದ್ದಾರೆ. ಕರ್ನಾಟಕದಲ್ಲೇ ಬೆಳೆದು ಕನ್ನಡ ಗೊತ್ತಿಲ್ಲ ಎನ್ನುವವರು ಇವರನ್ನು ನೋಡಿ ಕಲಿಬೇಕು.

309

ಇಂದಿನ ಸಿನಿ ಜಗತ್ತಿನಲ್ಲಿ ಪಾನ್ ಇಂಡಿಯಾ ಸಿನೆಮಾದ ಟ್ರೆಂಡ್ ಸೃಷ್ಟಿ ಆಗಿದೆ. ಇದು ರಿಮೇಕ್ ಸಿನೆಮಾಗಳಿಗೆ ತುಸು ಹಿನ್ನಡೆ ಅಂದರು ಕೂಡ ತಪ್ಪಾಗಲಾರದು. ಈ ಪಾನ್ ಇಂಡಿಯಾ ಸಿನೆಮಾದಲ್ಲಿ ಹಲವು ಸೂಪರ್ ಫ್ಲಾಪ್ ಆಗಿದೆ ಕೆಲವು ಸೂಪರ್ ಹಿಟ್ ಆಗಿದೆ ಅದರಲ್ಲಿ ಕನ್ನಡದ KGF ಹಾಗು ತೆಲುಗಿನ RRR ಬಾಹುಬಲಿ ಹಾಗು ತಮಿಳಿನ ೨.೦. ಇದೀಗ ದಕ್ಷಿಣದ ಎಲ್ಲ ಸಿನೆಮಾಗಳು ಈ ಟ್ರೆಂಡ್ ಹಿಂದೆ ಹೋಗಲು ತಯಾರಾಗುತ್ತಿದೆ. ಅದಕ್ಕೆ ಕನ್ನಡದ ವಿಕ್ರಾಂತ್ ರೋಣ, ಚಾರ್ಲಿ ೭೭೭, ಹಾಗೇನೇ ಇದೀಗ ತಮಿಳಿನ ಗಾರ್ಗಿ ಕೂಡ ಬಹು ಭಾಷೆಯಲ್ಲಿ ಮೂಡಿ ಬರಲಿದೆ.

ತಮಿಳಿನ ಗಾರ್ಗಿ ಇದೊಂದು ಮಹಿಳೆ ಪ್ರಧಾನ ಪಾತ್ರದಲ್ಲಿ ಇರಲಿರುವ ಸಿನೆಮಾ ಎನ್ನುವುದು ನಮಗೆ ಮೇಕಿಂಗ್ ನೋಡಿದರೇನೇ ಗೊತ್ತಾಗುತ್ತದೆ. ಇದರಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇವರ ಭಾವನೆ ನಟನೆ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇವರು ಇತರರಿಗೆ ನೀಡುವ ಗೌರವ ಹಾಗೇನೇ ಸಾಮಾಜಿಕ ಕಳಕಳಿಗೂ ಬಹು ಜನರು ಉಘೇ ಉಘೇ ಎಂದಿದ್ದಾರೆ. ಇದೀಗ ಇವರ ಸಿನೆಮಾ ಗಾರ್ಗಿ ಕನ್ನಡ , ತಮಿಳ್, ತೆಲುಗು ಭಾಷೆಯಲ್ಲಿ ಬರಲಿದೆ. ಇದಕ್ಕೆ ಡಬ್ಬಿಂಗ್ ತಯಾರಿ ನಡೆಯುತ್ತಿದೆ. ಕನ್ನಡ ಸಾಯಿ ಪಲ್ಲವಿ ಅವರಿಗೆ ಬರದೇ ಇದ್ದರು ಕೂಡ ಕಲಿಯುತ್ತಿದ್ದಾರೆ. ಇದು ಇಂಟರ್ನೆಟ್ ಅಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಸಾಯಿ ಪಲ್ಲವಿ ಅವರಿಗೆ ಕನ್ನಡ ಉಚ್ಚಾರ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಎಡೆಬಿಡದೆ ಪ್ರಯತ್ನ ಮಾಡಿ ಸಾಯಿ ಪಲ್ಲವಿ ಅವರು ಕನ್ನಡ ಡಬ್ಬಿಂಗ್ ಮಾಡಲು ಕಲಿತಿದ್ದಾರೆ. ಅವರು ಕನ್ನಡ ಹೇಗೆ ಕಲಿತಿದ್ದಾರೆ ಎನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇದು ಸಿಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ೭೭೭ ಸಿನೆಮಾದ ನಾಯಕಿ ನಟಿ ಕೂಡ ಸಾಯಿ ಪಲ್ಲವಿ ಅವರನ್ನು ಹೊಗಳಿದ್ದಾರೆ. ಸಾಯಿ ಪಲ್ಲವಿ ಕನ್ನಡ ಮಾತನಾಡುವುದನ್ನು ನೋಡಲು ಖುಷಿಯಾಗುತ್ತದೆ. ಸಾಯಿ ಪಲ್ಲವಿ ಕನ್ನಡ ಸರಿಯಾಗಿ ಮಾತನಾಡಲು ಟೀಮ್ ಪ್ರಯತ್ನವನ್ನು ಹೊಗಳಲೇಬೇಕು.

ಸಾಯಿ ಪಲ್ಲವಿ ಅವರನ್ನು ನಂಬಿ ಅವರಿಗೆ ಬೆಂಬಲವಾಗಿ ನಿಂತಿದ್ದಕ್ಕೆ ನಿರ್ದೇಶಕರನ್ನು ಮೆಚ್ಚಬೇಕು. ಎಂದು ಸಂಗೀತ ಶೃಂಗೇರಿ ಸೋಶಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದಾರೆ. ಈ ಸಿನೆಮಾ ಬಗ್ಗೆ ಹೇಳಬೇಕೆಂದು ನಾನು ಕೆಲ ತಿಂಗಳುಗಳ ಕಾಲ ಕಾದೆ. ಕೊನೆಗೂ ನನ್ನ ಹುಟ್ಟುಹಬ್ಬದ ದಿನ ಈ ವಿಷಯ ಹೇಳಲು ಚಿತ್ರತಂಡ ಅನುಮತಿ ನೀಡಿದೆ. ಗಾರ್ಗಿ ನಿಮ್ಮ ಮುಂದೆ ಇದೆ ಎಂದು ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಇನ್ನು ಶೂಟಿಂಗ್ ಮುಗಿದಿದ್ದು ಮೂರೂ ಭಾಷೆಯಲ್ಲಿ ಟೀಸರ್ ಬಿಡುಗಡೆ ಆಗಲಿದೆ. ಈ ಸಿನೆಮಾ ಕಥೆ ಬರೆದು ನಿರ್ದೇಶನ ಮಾಡಿದ್ದೂ ಗೌತಮ್ ಚಂದ್ರನ್.

Leave A Reply

Your email address will not be published.