2021 ನೇ ಸಾಲಿನಲ್ಲಿ ಅತೀ ಹೆಚ್ಚು ಗೂಗಲ್ ನಲ್ಲಿ ಸರ್ಚ್ ಮಾಡಿದ ಚಲನಚಿತ್ರಗಳು ಯಾವುದು ಗೊತ್ತೇ?
ಸಿನೆಮಾ ಜಗತ್ತು ಎಂದರೆ ಹಾಗೆ ನೋಡಿ ಸದಾ ಚರ್ಚೆಯಲ್ಲಿ ಇರುತ್ತದೆ. ಅದೆಷ್ಟೋ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಇದು ಸಹಕಾರಿ ಆಗಿದೆ. ಇದನ್ನೇ ನಂಬಿಕೊಂಡು ಅದೆಷ್ಟೋ ಲಕ್ಷ ಕಲಾವಿದರು ಇದ್ದಾರೆ. ವಿವಿಧ ಭಾಷೆ ಪ್ರದೇಶವಾರು ಸಿನೆಮಾಗಳು ಇದ್ದು ಅದರದ್ದೇ ಆದ ವೈಶಿಷ್ಟ್ಯ ಇದೆ. ಕೆಲವೊಂದು ಸಿನೆಮಾಗಳು ಕೇವಲ ಪ್ರದೇಶಕ್ಕೆ ಸೀಮಿತ ಆದರೆ ಕೆಲ ಸಿನೆಮಾಗಳು ಭಾರತ ವಿದೇಶದಾದ್ಯಂತ ಚರ್ಚೆಯಲ್ಲಿ ಇರುತ್ತದೆ. ಹಾಗಾದರೆ 2021 ರಲ್ಲೂ ಅತೀ ಹೆಚ್ಚು ಗೂಗಲ್ ಹುಡುಕಾಟ ನಡೆಸಿರುವ ಸಿನೆಮಾಗಳ ಬಗ್ಗೆ ಗೊತ್ತೇ ? ಇಲ್ಲವಾದರೆ ಇಲ್ಲಿ ಓದಿರಿ.
ಸಿನೆಮಾ ರಂಗ ಎಂದರೆ ಹಿಂದೆ ಒಂದು ಸಮಯ ಇತ್ತು ಇಲ್ಲಿ ಬರಿ ಬಾಲಿವುಡ್ ಮಾತ್ರ ಮೆರೆದಾಡುತ್ತ ಇತ್ತು. ಇಲ್ಲಿ ಬೇರೆ ಭಾಷೆಯ ಸಿನೆಮಾಗಳು ಲೆಕ್ಕಕ್ಕಿಲ್ಲ, ಬಾರಿ ಸ್ಟಾರ್ ನಟರು ಮತ್ತು ಅವರ ಮಕ್ಕಳೇ ತುಂಬಿದ್ದರು. ನೈಜ ನಟ ನಟಿಯರಿಗೆ ಮಣೆ ಹಾಕುತ್ತಿರಲಿಲ್ಲ. ಈ ಒಂದು ವಿಚಾರದಲ್ಲಿ ತುಂಬಾ ಚರ್ಚೆಗಳು ಕೂಡ ಆಗಿದ್ದವು. ಹಾಗಿದ್ದ ಅಂತಹ ದಿನಗಳಿಂದ ಈಗ ಕಾಲ ಬದಲಾಗಿದೆ. ಬಾಕ್ಸ್ ಆಫಿಸ್ ಉಡಿಸ್ ಮಾಡಿ ಸಾಮ್ರಾಜ್ಯ ಸ್ಥಾಪಿಸಿದ್ದ ಕೆಲ ಹೆಸರಾಂತ ನಟ ನಟಿಯರು ವಿಳಾಸ ಇಲ್ಲದೆ ಮಾಯವಾಗಿದ್ದರೆ. ಜನರಲ್ಲಿ ಅಂಗಲಾಚುವ ಪರಿಸ್ಥಿತಿಗೆ ಬಂದಿದ್ದಾರೆ. ಹಾಗಾದರೆ ಈ ಬಾರಿ ಅತೀ ಹೆಚ್ಚು ಗೂಗಲ್ ಸರ್ಚ್ ಆದ ಸಿನೆಮಾಗಳು ನೋಡುವುದಾದರೆ ಮೊದಲ ಸ್ಥಾನದಲ್ಲಿ ತಮಿಳು ನಟ ಸೂರ್ಯ ಅಭಿನಯಿಸಿರುವ ಜೈ ಭೀಮ್ ಚಿತ್ರ ಇದೆ.
ಭಾಷೆಗಳ ಎಲ್ಲೆ ಮೀರಿ ನಿಂತು ಪಾನ್ ಇಂಡಿಯಾ ಮೂವಿ ಆಗಿ ಹೊರ ಹೊಮ್ಮಿತು. ಅದರ ನಂತರದ ಸ್ಥಾನದಲ್ಲಿ ಕ್ಯಾಪ್ಟನ್ ವಿಕ್ರಂ ಭಾತ್ರ ಅವರ ಬಯೋ ಚಿತ್ರ ಶೇರ್ ಶಾ ಇದೆ. ದೇಶಭಕ್ತಿಯ ಕಥೆಯನ್ನು ಎತ್ತಿ ಸಾರುವ ಈ ನೈಜ ಘಟನೆ ಆಧಾರಿತ ಸಿನೆಮಾ ಬಾಕ್ಸ್ ಆಫೀಸ್ ಕಿಂಗ್ ಆಗಿ ಮೆರೆದಿತ್ತು. ನಂತರದ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಚಿತ್ರ ಇದೆ. ಅದೇನೇ ಆಗಲಿ ಕೇವಲ ಕೆಲ ನಟ ನಟಿಯರಿಗೆ ಮೀಸಲಾಗಿದ್ದ ಸಿನೆಮಾ ರಂಗದಲ್ಲಿ ಹೊಸ ಪ್ರತಿಭೆಗಳು ಮೂಡಿ ಬರುತ್ತಿರುವುದು ನಿಜವಾದ ಒಳ್ಳೆಯ ಬೆಳವಣಿಗೆ. ಜನರು ಈಗ ಹೆಸರಿನ ಹಿಂದೆ ಹೋಗುವುದು ಬಿಟ್ಟು ಪ್ರತಿಭೆಯ ಹಿಂದೆ ಹೋಗುತ್ತಿರುವುದು ಇನ್ನಷ್ಟು ಹೊಸ ಪ್ರತಿಭೆಗಳು ಮುಂದಕ್ಕೆ ಬರಲು ಪ್ರೋತ್ಸಾಹ ನೀಡುತ್ತದೆ.