8 ವರ್ಷದ ಪೋರ ಸ್ಥಾಪಿಸಿದ ಕೋಟ್ಯಂತರ ಬೆಲೆ ಬಾಳುವ ಈ ಕಂಪನಿ. ಅಷ್ಟಕ್ಕೂ ಈತನ ತಲೆಯಲ್ಲಿದ್ದ ಬಿಸಿನೆಸ್ ಐಡಿಯಾ ಏನು ಗೊತ್ತೇ?

1,040

ಮಕ್ಕಳು ಎಂದರೆ ಹಾಗೆ ನೋಡಿ ಸದಾ ತಮ್ಮವರ ಸುತ್ತಲೂ ಈ ಜಗದ ಪರಿವೆ ಇಲ್ಲದೆ ಆಟ ಆಡುತ್ತಾ ಓಡಾಡುತ್ತಾ ಇರುತ್ತಾರೆ. ಮಕ್ಕಳು ಎಂದರೆ ಮೊಬೈಲ್ ಕಂಪ್ಯೂಟರ್ ಗಳಲ್ಲಿ ಆತ ಆಡುತ್ತಾ ಕಾಲ ಹರಣ ಮಾಡುತ್ತಾ ಇರುತ್ತಾರೆ. ಆದರೆ ಇಲ್ಲೊಬ್ಬ ಹುಡುಗ ಆಟ ಆಡುವ ಈ ಸಣ್ಣ ಪ್ರಾಯದಲ್ಲಿ ದೊಡ್ಡ ಕಂಪನಿ ಒಂದನ್ನು ಹುಟ್ಟು ಹಾಕಿ ಅದರ CEO ಆಗಿ ಕೆಲಸ ಮಾಡುತ್ತಿದ್ದಾನೆ. ಹಾಗಾದರೆ ಯಾರು ಈ ಪೋರ ? ಯಾವುದು ಆ ಕಂಪನಿ? ಬನ್ನಿ ತಿಳಿಯೋಣ.

ಆ ಹುಡುಗನ ಹೆಸರು ತನಿಶ್ ಮಿತ್ತಲ್. ಸಾಮಾನ್ಯವಾಗಿ ಮಕ್ಕಳು ಎಂದರೆ ಕಲಿಕೆಯಲ್ಲಿ ಆಸಕ್ತಿ ಇದ್ದೆ ಇರುತ್ತದೆ. ಆದರೆ ತನಿಷ್ ಮಾತ್ರ ಓದಿನ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಬದಲಾಗಿ ಆತನಿಗೆ ಕಂಪ್ಯೂಟರ್ ಎಂದರೆ ಚಿಕ್ಕಂದಿನಿಂದಲೇ ಇಷ್ಟ. ಬಾರಿ 5 ನೆಯ ತರಗತಿ ಓದುತ್ತಿರುವಾಗಲೇ ತನ್ನ ವಿಧ್ಯಾಭ್ಯಾಸ ಮೊಟಕುಗೊಳಿಸಿ ಕಂಪ್ಯೂಟರ್ ಕಲಿಯಲು ಶುರು ಮಾಡಿದ ಹೀಗೆ ಕಲಿಯುತ್ತಾ ವೆಬ್ ಡಿಸೈನ್ ಮತ್ತು ಫೋಟೋ ಶಾಪ್ ಕಲಿತು ಅದರಲ್ಲೇ ಮುಂದುವರಿದ. ಹಾಗೆ ಮುಂದಕ್ಕೆ “adavanced pg diploma in animation and cyber security” ಕೋರ್ಸ್ ಕೂಡ ಮುಗಿಸಿದರು.

ಆ ನಿಷ್ಠೆಯ ಪ್ರಮಾಣವೇ ಎಂಬಂತೆ ಆತ ಒಂದು ಕಂಪನಿಯನ್ನು ಶುರು ಮಾಡಿದ ಅದುವೇ “INNOWEBS TECH”. ಹೌದು ಇದು ಆರಂಭಗೊಂಡು 5 ವರ್ಷಗಳು ಕಳೆದಿವೆ ಉತ್ತಮ ರೀತಿಯಲ್ಲಿ ನಡೆಯುತ್ತಾ ಇದೆ. ಹಾಗೆ 5 ವರ್ಷದಿಂದ ಈತ ಕಂಪನಿಯ CEO ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೆತ್ತವರು ಕೂಡ ಉತ್ತಮವಾಗಿ ಸ್ಪಂದಿಸಿದ್ದು ಮಗ ಈ ಮಟ್ಟಕ್ಕೆ ಬೆಳೆಯಲು ಸಹಕಾರಿ ಆಗಿದೆ. ಈ ಒಂದು ಹುಡುಗನ ಉದಾಹರಣೆ ಆಗಿ ಎಲ್ಲಾ ಹೆತ್ತವರು ಪಾಠ ಕಲಿಯಬೇಕು . ವಿದ್ಯೆ ಒಂದೇ ಬದುಕಿನ ದಾರಿ ಅಲ್ಲ ಮಕ್ಕಳನ್ನು ಒತ್ತಾಯ ಮಾಡದೆ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಅವರನ್ನು ಬೆಳೆಯಲು ಬಿಡಬೇಕು. ಆಗಲೇ ಯಶಸ್ಸು ಎಂಬುದು ಸುಲಭವಾಗಿ ಸಿಗುತ್ತದೆ

Leave A Reply

Your email address will not be published.