ವಿವಾದದ ಬಳಿಕ 5 ದಿನಗಳಲ್ಲಿ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳ ಸಂಖ್ಯೆ ಎಷ್ಟು? ನಿಮಗೂ ಅಚ್ಚರಿ ಆಗುವುದು ಸತ್ಯ.

300

ಜಗನ್ ಮೋಹನ್ ರೆಡ್ದಿ ನೇತೃತ್ವದ ಸರ್ಕಾರದ ಅಧರ್ಮಿಯ ಕೆಲಸದಿಂದ ತಿರುಪತಿ ದೇವಸ್ಥಾನದಲ್ಲಿ ಅಚಾತುರ್ಯ ಘಟನೆ ನಡೆದದ್ದು ಎಲ್ಲರಿಗೂ ಗೊತ್ತು. ಚಂದ್ರಬಾಬು ನಾಯ್ಡು ಅವರು ಈ ವಿಚಾರವಾಗಿ ಪತ್ರಿಕಾ ಗೋಷ್ಟಿ ಕೂಡ ನಡೆಸಿದ್ದರು. ಇದಾದ ಬಳಿಕ ಎಲ್ಲಾ ಭಕ್ತರಲ್ಲಿ ಅಸಮಾಧಾನ ಬಂದಿದ್ದು ಸುಳ್ಳಲ್ಲ. ಜಗನ್ ವಿರುದ್ಧ ದೇಶ ವ್ಯಾಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆ ಬಳಿಕ ಈ ಒಂದು ಲಡ್ಡು ಪ್ರಸಾದ ಮಾರಾಟ ಕಡಿಮೆ ಆಗುತ್ತದೆ ಎಂಬ ಮಾತುಗಳು ಎಲ್ಲಾ ಕಡೆ ಇತ್ತು. ಆದರೆ ಅದು ಹಾಗಲಿಲ್ಲ್ಲ . ದೇವಸ್ಥಾನ ಲಡ್ಡು ತಯಾರಿಕಾ ಕೊಠಡಿ ಶುದ್ಧೀಕರಣ ನಂತರ ಇದು ಮತ್ತಷ್ಟು ಹೆಚ್ಚಾಗಿದೆ. ಹೌದು ಅಚ್ಚರಿ ಎನಿಸಿದರೂ ಸತ್ಯ. ಇದೆಲ್ಲ ಆ ತಿಮ್ಮಪ್ಪನ ಲೀಲೆ ಎಂದರು ತಪ್ಪಾಗಲಿಕ್ಕಿಲ್ಲ.

ಸೆಪ್ಟೆಂಬರ್ 19 ರಂದು 3.59 ಲಕ್ಷ ಲಡ್ಡುಗಳು ಮಾರಾಟ ಆಗಿದೆ. ಇನ್ನುಳಿದಂತೆ ಸೆಪ್ಟೆಂಬರ್ 20 ರಂದು 3.17ಲಕ್ಷ, 21 ರಂದು 3.67 ಲಕ್ಷ, 22 ರಂದು 3.60ಲಕ್ಷ, ಅಂದರೆ ಪ್ರತಿ ದಿನ ಅಂದಾಜು 3 ಲಕ್ಷ ಲಾಡುಗಳು ಮಾರಾಟವಾಗಿದೆ. ಒಟ್ಟಾರೆಯಾಗಿ 5 ದಿನಗಳ ಕಾಲದಲ್ಲಿ ಬರೋಬ್ಬರಿ 16 ಲಕ್ಷಕ್ಕೂ ಹೆಚ್ಚು ಲಾಡುಗಳ ಮಾರಾಟವಾಗಿದೆ. ಇಲ್ಲಿನ ಲಡ್ಡು ಪ್ರಸಾದ ಬಹಳ ಫೇಮಸ್ . ಇದರ ಸುವಾಸನೆ ರುಚಿ ಮತ್ತೆಲ್ಲೂ ಸಿಗುವುದಿಲ್ಲ. ಆದರೆ ಆ ಒಂದು ಘಟನೆ ಇಂದ ಎಲ್ಲವೂ ಮೇಲೆಕೆಳಗೆ ಆಗುವುದು ಎಂಬ ಲೆಕ್ಕಾಚಾರ ಹಾಕಿದ್ದರು ಕೂಡ ಭಗವಂತ ಹಾಗಾಗಲು ಬಿಡಲಿಲ್ಲ ಎನ್ನುತ್ತಾರೆ ದೇವಸ್ಥಾನದ ಭಕ್ತರು.

ಈಗಲೂ ಶುದ್ಧಿ ಕಾರ್ಯಕ್ರಮ ಹೋಮ ಹವನ ವ್ರತಾಚರಣೆ ಇತ್ಯಾದಿ ಗಳು ನಡೆಯುತ್ತಲೇ ಇದೆ . ದೇವಸ್ಥಾನದ ಲಡ್ಡು ತಯಾರಿಗೆ ಬೇಕಾದ ಕಡಲೆಬೇಳೆ, ಸಕ್ಕರೆ, ಗೋಡಂಬಿ, ಸುಮಾರು 15,000 ಕೆಜಿ ತುಪ್ಪವನ್ನು ಹೊಸತಾಗಿ ತರಿಸಿ ಮಾಡಲಾಗುತ್ತಿದ್ದು. ಹಿಂದೆ ಉಳಿದಿದ್ದ ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳಲಿಲ್ಲ . ಇದೆ ರೀತಿ ಇನ್ನಷ್ಟು ಭಕ್ತರ ಸಂಖ್ಯೆ ಹೆಚ್ಚಿದ್ದು ಈ ಸಂಖ್ಯೆ ಇನ್ನಷ್ಟು ಹೆಚ್ಚಾದರೂ ಅಚ್ಚರಿ ಇಲ್ಲ. ದೇವರ ಅಪವಿತ್ರ ಗೊಳಿಸಿ ಭಕ್ತರ ಭಾವನೆ ಜೊತೆ ಆಟ ಆಡಿದ ಜಗನ್ ಗೆ ದೇವರೇ ಒಂದು ಗತಿ ಕಾಣಿಸುತ್ತಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

Leave A Reply

Your email address will not be published.