Avatar 2: ಕೇರಳದಲ್ಲಿ ಅವತಾರ 2 ಬಿಡುಗಡೆ ಮಾಡಲ್ಲ ಎಂದ ಚಿತ್ರಮಂದಿರಗಳು. ಅದ್ಯಾಕೆ ಬಿಡುಗಡೆ ಸಮಯದಲ್ಲಿ ಈ ರೀತಿ ಬಿಸಿ?

248

ಅವತಾರ ೨ (Avatar 2) ದೊಡ್ಡ ಮಟ್ಟದಲ್ಲಿ ಮೊದಲ ಭಾಗ ಯಶಸ್ಸು ಕಂಡಿತ್ತು. ಇದಾಗಿ ವರ್ಷಗಳೇ ಕಳೆದರು ಕೂಡ ಎರಡನೇ ಭಾಗ ಯಾವಾಗ ಬರುತ್ತದೆ ಎನ್ನುವುದು ಯಾರಿಗೂ ಮಾಹಿತಿ ಇರಲಿಲ್ಲ. ಇದೀಗ ಇದೆ ತಿಂಗಳು ಡಿಸೆಂಬರ್ 2022 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಯಾವುದೇ ದೊಡ್ಡ ಬಜೆಟ್ ಹಾಗು ಹೈಪ್ ಹುಟ್ಟಿ ಹಾಕಿದ ಸಿನೆಮಾಗಳು ಬಿಡುಗಡೆ ಆಗುವ ಸಮಯದಲ್ಲಿ ಈ ವಿವಾದಗಳು ನಡೆಯುವುದು ಸಾಮಾನ್ಯ ಅಂತಹದೇ ವಿವಾದ ಇದೀಗ ಈ ಸಿನೆಮಾಗೂ ತಟ್ಟಿದೆ.

ಡಿಸೆಂಬರ್ 16 ರಂದು ಸಿನೆಮಾ ಭಾರತದಲ್ಲಿ ಬಿಡುಗಡೆ ಅಗಲಿದ್ದು. ಮೊದಲ ದಿನವೇ ಬಾಕ್ಸ್ ಆಫೀಸ್ ಅಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲಿದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಇದೆ ಕಾರಣಕ್ಕೆ ಕೇರಳ ಚಿತ್ರ ಮಂದಿರ ಹಾಗು ಸಿನೆಮಾ ನಿರ್ಮಾಪಕ ನಡುವೆ ಅಸಮಾಧಾನ ಎದ್ದಿದೆ. ಈ ಅಸಮಾಧಾನಕ್ಕೆ ಕಾರಣ ಕಾಂಟ್ರಾಕ್ಟ್ ನಲ್ಲಿ ಸೇರಿಸಲಾದ ಹೊಸ ನಿಯಮ ಎನ್ನುವುದು ಗೊತ್ತಾಗಿದೆ. ಸಿನೆಮಾದಿಂದ ಬಂದ ಹಣದಲ್ಲಿ ಯಾರಿಗೆ ಎಷ್ಟು ಸಿಗಬೇಕು ಎನ್ನುವುದರಲ್ಲಿ ಗೊಂದಲ ಉಂಟಾಗಿದೆ.

ಚಿತ್ರ ಮಂದಿರಗಳ ಅಧ್ಯಕ್ಷ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮಾತಾಡುತ್ತ, ಜೇಮ್ಸ್ ಕ್ಯಾಮೆರೋನ್ (James Cameron) ಅವತಾರ ಸಿನೆಮಾದ ನಿರ್ಮಾಪಕರು ಸಿನೆಮಾದಿಂದ ಬಂದ ಹಣದಲ್ಲಿ ೬೦% ಬೇಕು ಎಂದು ಹೇಳಿದ್ದಾರೆ. ಆದರೆ ಇದಕ್ಕಿಂತ ಮೊದಲು ಇದಿದ್ದು ಸಾಮಾನ್ಯವಾಗಿ ೫೦-೫೫% ಅಷ್ಟೇ. ಇದಕ್ಕೆ ಒಪ್ಪದ ಚಿತ್ರ ಮಂದಿರಗಳು ಸುಮಾರು ೪೦೦ ಸಿನೆಮಾ ಮಂದಿರಗಳಲ್ಲಿ ಈ ಅವತಾರ ೨ ಸಿನೆಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಇನ್ನು ಈ ಫೆಡರೇಶನ್ ಗೆ ಸೇರದ ಸುಮಾರು ೨೦೦ ಚಿತ್ರ ಮಂದಿರಗಳಿದ್ದು ಅಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

Leave A Reply

Your email address will not be published.