ಕೊರೊನಾ ನಂತರ ಮತ್ತೊಂದು ಮಹಾಮಾರಿ! ಚೈನಾದಲ್ಲಿ ಪತ್ತೆ ಆಯ್ತು ಮತ್ತೊಂದು ಹೊಸ ವೈರಸ್! ಪ್ರಾಣಿಗಳ ಮೈಮೇಲಿನ ಉಣ್ಣೆ ಹುಳುವಿನಿಂದ ಬರುವ ರೋಗ ಏನಿದು? Tick bite.

127

ಉಣ್ಣೆ ಹುಳಗಳ ಕಚ್ಚುವಿಕೆಯ ಮೂಲಕ ಹರಡುವ ಹೊಸ ವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ವೈರಸ್, ಈ ವೈರಸ್ ಅನ್ನು ವೆಟ್ಲ್ಯಾಂಡ್ ವೈರಸ್ (WELV) ಎಂದು ಕರೆಯಲಾಗುತ್ತದೆ. ಪ್ರಾಣಿಗಳ ಮೈಮೇಲೆ ಕೂತು ರಕ್ತ ಹೀರುವ ಈ ಹುಳಗಳು ಮನುಷ್ಯನಿಗೆ ಕಚ್ಚಿದಾಗ ಇದು ತೀವ್ರ ಅನಾರೋಗ್ಯಕ್ಕೇ ಕಾರಣ ಆಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ವೈರಸ್ ನರ ಸಂಬಂಧಿತ ಕಾಯಿಲೆಗೆ ಕಾರಣವಾಗಬಹುದು. ಇದು ತೀವ್ರವಾಗಿ ಮೆದುಳಿನ ಕಾರ್ಯ ಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾಕ್ಟರ್ ಕೂಡ ಹೇಳುತ್ತಾರೆ. ಪ್ರಕರಣದ ಸಂಶೋಧನೆಗಳು ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿವೆ. ಉತ್ತರ ಚೀನಾದ ಪ್ರದೇಶವಾದ ಇನ್ನರ್ ಮಂಗೋಲಿಯಾದ ದೊಡ್ಡ ಜೌಗು ಪ್ರದೇಶದಲ್ಲಿರುವ ಉದ್ಯಾನವನಕ್ಕೆ ಭೇಟಿ ನೀಡಿದ ಸುಮಾರು ಐದು ದಿನಗಳ ನಂತರ 61 ವರ್ಷದ ವೃದ್ದರೂರ್ವರಿಗೆ ಜ್ವರ, ತಲೆನೋವು ಮತ್ತು ವಾಂತಿ ಎಂದು ಲೈವ್ ಸೈನ್ಸ್‌ನ ವರದಿಯು ಬಹಿರಂಗಪಡಿಸುತ್ತದೆ. ಉದ್ಯಾನದಲ್ಲಿ ಉಣ್ಣಿಗಳು ಕಚ್ಚಿದೆ ಎಂದು ಅವರು ವೈದ್ಯರಿಗೆ ತಿಳಿಸಿದರು.

ಆ ವ್ಯಕ್ತಿಯ ರಕ್ತದ ಮಾದರಿಗಳನ್ನು ಪರೀಕ್ಷಿಸಿದಾಗ ವೈದ್ಯರು ಹಿಂದೆಂದೂ ನೋಡಿರದ ವೈರಸ್ ಅನ್ನು ನೋಡಿ ಆಘಾತಕ್ಕೊಳಗಾದರು – ಇದು ಉಣ್ಣಿಗಳಿಂದ ಹರಡಿದ ವೈರಸ್ ಎಂದು ದೃಢ ಪಟ್ಟಿದೆ. ವಿಜ್ಞಾನಿಗಳು ಹೇಳುವ ಪ್ರಕಾರ WELV ಹಿಂದೆ ಪ್ರಾಣಿಗಳು ಅಥವಾ ಮನುಷ್ಯರಲ್ಲಿ ಕಂಡುಬಂದಿಲ್ಲ . ವೈರಸ್ ಅನ್ನು ಗುರುತಿಸಿದ ನಂತರ, ಸಂಶೋಧಕರು ಉತ್ತರ ಚೀನಾದಲ್ಲಿ ಉಣ್ಣಿ ಮತ್ತು ಪ್ರಾಣಿಗಳಲ್ಲಿ ಅದನ್ನು ಪರೀಕ್ಷಿಸಲು ಪ್ರಾರಂಭಿಸಿದರು, ಮನುಷ್ಯ ಭೇಟಿ ನೀಡಿದ ವೆಟ್ಲ್ಯಾಂಡ್ ಪಾರ್ಕ್ ನಲ್ಲಿ ಕೂಡ ವಿಜ್ಞಾನಿಗಳ ತಂಡ ಕೆಲಸ ಮಾಡುತ್ತಿದೆ.

ಸಂಶೋಧಕರ ತಂಡವು ಸುಮಾರು 14,600 ಪ್ರಕಾರಗಳ ಉಣ್ಣಿಗಳನ್ನು ಅವುಗಳ ಸ್ಥಳ ಮತ್ತು ಜಾತಿಗಳ ಮೂಲಕ ಗುಂಪು ಮಾಡಿತು ಮತ್ತು ಅವುಗಳನ್ನು ಬ್ಯಾಚ್‌ಗಳಲ್ಲಿ ಪರೀಕ್ಷೆ ನಡೆಸಿತ್ತು. ಕುತೂಹಲಕಾರಿಯಾಗಿ, ಆ ಬ್ಯಾಚ್‌ಗಳಲ್ಲಿ ಸುಮಾರು 2 ಪ್ರತಿಶತವು WELV ಜೆನೆಟಿಕ್ ವೈರಸ್ ಗಳಿಗೆ ಪಾಸಿಟಿವ್ ಎಂದು ತೋರಿಸಿದೆ.ಸಂಶೋಧಕರು ನಡೆಸಿದ ಪರೀಕ್ಷೆಯಲ್ಲಿ ಈ ವೈರಸ್ ಗಳು ಕುರಿಗಳು, ಕುದುರೆಗಳು ಮತ್ತು ಹಂದಿಗಳಲ್ಲಿ ಪತ್ತೆಯಾಗಿದೆ.

Leave A Reply

Your email address will not be published.