Cricket News: ಅಂದು ಅಂಬಟಿ ರಾಯುಡು ಈಗ ಸಂಜು ಸ್ಯಾಮ್ಸನ್. ಈ ಆಟಗಾರರಿಗೆ ಆಯ್ಕೆ ಮಾಡದೇ ಇರುವುದಕ್ಕೆ ಪಾಕಿಸ್ತಾನ ಮಾಜಿ ಆಟಗಾರನ ಟಾಂಗ್.

120

ಭಾರತ (India) ಮತ್ತು ನ್ಯೂಜಿಲ್ಯಾಂಡ್ (New Zeland) ನಡುವಿನ ಏಕದಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್ (Sanju Samson) ಎರಡರಲ್ಲಿ ಆಡಲೇ ಇಲ್ಲ. ಪ್ಲೇಯಿಂಗ್ 11 ರಲ್ಲಿ ಕಾಣಿಸಿಕೊಳ್ಳದ ಆಟಗಾರ ಅಂದರೆ ಅದು ಸ್ಯಾಮ್ಸನ್. ಉತ್ತಮ ಫಾರಂ ನಲ್ಲಿದ್ದರು ಕೂಡ ಅವಕಾಶ ಸಿಗದೇ ಇರುವುದಕ್ಕೆ ದೇಶದೆಲ್ಲೆಡೆ ಇಂದ ಭಾರತ ಆಯ್ಕೆ ಸಮಿತಿ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ಟಿ-೨೦ ವಿಶ್ವಕಪ್ ಗು ಕೂಡ ಸ್ಯಾಮ್ಸನ್ ಗೆ ಅವಕಾಶ ಸಿಕ್ಕಿಲ್ಲ. ಒಟ್ಟಾಗಿ ಆಯ್ಕೆ ಆದರೂ ಕೂಡ ಕೇವಲ ಒಂದು ಪಂದ್ಯದಲ್ಲಿ ಆಡಿಸಿ ಉಳಿದ ಪಂದ್ಯಕ್ಕೆ ಆಯ್ಕೆ ಮಾಡದೇ ಅವರನ್ನು ಮ್ಯೂಲ್ ಗುಂಪು ಮಾಡಲಾಗುತ್ತಿದೆ.

ಪಾಕಿಸ್ತಾನದ ಮಾಜಿ ಆಟಗಾರ ಡ್ಯಾನಿಷ್ ಕೆನರಿಯ ಇದೀಗ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಒಂದು ಕಾಲದಲ್ಲಿ ಭಾರತ ತಂಡ ನಂಬರ್ 4 ಸ್ಥಾನಕ್ಕೆ ಉತ್ತಮ ಬ್ಯಾಟರ್ ಅನ್ನು ಹುಡುಕುತಿತ್ತು. ಆಗ ಆ ಸ್ಥಾನಕ್ಕೆ ಅಂಬಟಿ ರಾಯುಡು ಉತ್ತಮ ಆಯ್ಕೆ ಇದ್ದರು ಕೂಡ ಅವರನ್ನು ಸೇರಿಸಿಕೊಳ್ಳಲಿಲ್ಲ ಹಾಗೇನೇ ಅವರಿಗೆ ಅವಕಾಶಗಳನ್ನು ಕೊಡಲು ಇಲ್ಲ ಬಿಸಿಸಿಐ. ಈಗ ಸಂಜು ಸ್ಯಾಮ್ಸನ್ (Sanju Samson) ವಿಷಯದಲ್ಲೂ ಕೂಡ ಅದನ್ನೇ ಮಾಡಲಾಗುತ್ತಿದೆ.

ಡ್ಯಾನಿಷ್ ಕೆನರಿಯ ಮಾತಾಡುತ್ತ, ಒಬ್ಬ ಆಟಗಾರ ಎಷ್ಟು ದಿನ ಅಂತ ಸಹಿಸಿಕೊಳ್ಳಬಲ್ಲ? ಸಂಜು ಸಾಕಷ್ಟು ನೊಂದಿದ್ದಾರೆ. ಅವರಿಗೆ ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಸರಣಿಗೆ ಆಯ್ಕೆ ಆದರೂ ಕೂಡ ತಂಡದಲ್ಲಿ ಆಯ್ಕೆ ಆಗದೆ ನೋವನ್ನು ಅನುಭವಿಸುತ್ತಿದ್ದಾರೆ. ಭಾರತ ತಂಡ ಒಬ್ಬ ಶ್ರೇಷ್ಠ ಆಟಗಾರನನ್ನು ಕಳೆದುಕೊಳ್ಳುತ್ತಿದೆ. ಸಂಜು ಆಟ ನೋಡಲು ಎಲ್ಲರು ಬಯಸುತ್ತಿದ್ದಾರೆ. ಇವರಿಗೆ ಅವಕಾಶ ನೀಡಬೇಕು ಎಂದು ಡ್ಯಾನಿಷ್ ಹೇಳಿದ್ದಾರೆ.

Leave A Reply

Your email address will not be published.