Cricket News: ಸೂರ್ಯ ಕುಮಾರ್ ಯಾದವ್ ಸಲಹೆ ಮೇರೆಗೆ ಪಂದ್ಯಕ್ಕೂ ಮುನ್ನ ಈ ಕೆಲಸ ಮಾಡಿದ ಇಶಾನ್ ಕಿಶನ್. ಆಮೇಲೆ ಆಗಿದ್ದು ಇತಿಹಾಸ.

156

ಬಾಂಗ್ಲಾದೇಶದ ವಿರುದ್ದದ ಮೂರೂ ಏಕದಿನ ಪಂದ್ಯಗಳ ಕೊನೆಯ ಏಕದಿನ ಪಂದ್ಯ ನಿನ್ನೆ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ದೊಡ್ಡ ಅಂತರದಿಂದ ಗೆದ್ದಿದೆ ಆದರೂ ಸರಣಿ ಸೋತಿದೆ. ಈ ಪಂದ್ಯದಲ್ಲಿ ಇನ್ನು ಖುಷಿ ವಿಚಾರ ಎಂದರೆ ಇಶಾನ್ ಕಿಶನ್ ಅವರ ಆಕರ್ಷಕ ದ್ವಿಶತಕ ಹಾಗು ವಿರಾಟ್ ಕೊಹ್ಲಿ ಅವರ ಶತಕ. ಇದರ ಜೊತೆ ಭಾರತ 400 ರನ್ ಪೇರಿಸುವಲ್ಲಿ ಸಫಲವಾಗಿದೆ. ಇಶಾನ್ ಕಿಶನ್ ಅವರ ಪ್ರದರ್ಶನ ಎಲ್ಲರ ಮನೆ ಮಾತಾಗಿದೆ. ಇದೀಗ ಈ ಪ್ರದರ್ಶನ ಹಿಂದೆ ಸೂರ್ಯ ಕುಮಾರ್ ಅವರ ಸಲಹೆ ಇದೆ ಎನ್ನುವುದು ಗೊತ್ತಾಗುತ್ತಿದೆ.

ಕೇವಲ ೧೩೧ ಎಸೆತದಲ್ಲಿ ಬರೋಬ್ಬರಿ ೨೧೦ ರನ್ ಗಳಿಸಿದ ಇಶಾನ್ ಕಿಶನ್ ಪಂದ್ಯದ ನಂತರ ಪತ್ರಿಕಾಘೋಷ್ಠಿಯಲ್ಲಿ ಹಲವು ವಿಷಯಗಳನ್ನು ಹೇಳಿದ್ದಾರೆ. ವಿರಾಟ್ ಕೊಹ್ಲಿ ಹಾಗು ಸೂರ್ಯ ಕುಮಾರ್ ಯಾದವ್ ಅವರು ನೀಡಿದ ಅಮೂಲ್ಯ ಸಲಹೆ ಗಳನ್ನೂ ಕೂಡ ಹೇಳಿದ್ದಾರೆ. ಇಶಾನ್ ಕಿಶನ್ 15 ಓವರ್ ಮೊದಲೇ ಔಟ್ ಆದರು, ಇಲ್ಲದೆ ಹೋದರೆ 300 ರನ್ ಗಾಳಿಸುತ್ತಿದ್ದೆ ಎಂದು ಕಿಶನ್ ಹೇಳಿಕೊಂಡಿದ್ದಾರೆ. ರೋಹಿತ್ ಶರ್ಮ ಅವರ 264 ರನ್ ದಾಖಲೆ ಸರಿದೂಗಿಸುತ್ತಾರೆ ಎಂದು ಕಾಣುತ್ತಿತ್ತಾದರೂ ಕೂಡ ಲಿಟ್ಟೊನ್ ದಾಸ್ ಗೆ ಕ್ಯಾಚ್ ನೀಡುವ ಮೂಲಕ ಔಟ್ ಆದರು.

hindustan times

ಆಡುವ ಸಮಯದಲ್ಲಿ ವಿರಾಟ್ ಕೊಹ್ಲಿ ಸಲಹೆ ಪಡೆಯುತ್ತಿದ್ದೆ. ಯಾವ ಬೌಲರ್ ನ ಬೌಲಿಂಗ್ ಗೆ ರನ್ ಗಳಿಸಬೇಕು ಎಂದು ಸಲಹೆ ನೀಡಿದ್ದರು. ಇದರಿಂದ ಗರಿಷ್ಠ ರನ್ ಗಳಿಸಲು ಸಾಧ್ಯವಾಯಿತು. ಅದೇ ರೀತಿ 95 ರನ್ ಗಳಿಸಿದ್ದಾಗ ದೊಡ್ಡ ಹೊಡೆತ ಮೂಲಕ ಶತಕ ಬಾರಿಸಬೇಕೆಂದು ಅಂದುಕೊಂಡಿದ್ದೆ. ಆದರೆ ವಿರಾಟ್ ಕೊಹ್ಲಿ ಬಂದು ಸಮಾಧಾನ ಮಾಡಿದರು. ದೊಡ್ಡ ಹೊಡೆತಗಳಿಗೆ ಕೈ ಹಾಕದಂತೆ ನೋಡಿಕೊಂಡರು. ಇದು ಮೊದಲ ಶತಕ ನಿಧಾನವಾಗಿ ಆಡು ಎಂದು ಹೇಳಿದ್ದರು. ಎಂದು ಇಶಾನ್ ಕಿಶನ್ ಹೇಳಿದ್ದಾರೆ.

ಸದ್ಯ ಉತ್ತಮ ಫಾರ್ಮ್ ಅಲ್ಲಿ ಸೂರ್ಯ ಕುಮಾರ್ ಯಾದವ್ ಅವರು ಇದ್ದಾರೆ. ಅವರ ಸಲಹೆ ಇಶಾನ್ ಕಿಶನ್ ಅವರು ದ್ವಿಶತಕ ಮಾಡಲು ಬಹಳ ಮುಖ್ಯ ಕಾರಣವಾಗಿದೆ. ಇಶಾನ್ ಕಿಶನ್ ಗೆ ಪಂದ್ಯ ಆರಂಭಕ್ಕೂ ಮೊದಲು ಬಂದು ಅಭ್ಯಾಸ ಮಾಡಲು ಹೇಳಿದ್ದರು. ಇದರಿಂದ ಚೆಂಡಿನ ಮೇಲೆ ಗಮನ ಹರಿಸಲು ಹಾಗು ಏಕಾಗ್ರತೆ ಮಾಡಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದ್ದರು. ಇದರಂತೆಯೇ ಮಾಡಿದ ಇಶಾನ್ ಕಿಶನ್ ದ್ವಿಶತಕ ಮಾಡುವ ಮೂಲಕ ಇತಿಹಾಸ ರಚನೆ ಮಾಡಿದ್ದಾರೆ. ಅತ್ಯಂತ ವೇಗದ ದ್ವಿಶತಕ ಮಾಡಿದವರಲ್ಲಿ ಇಶಾನ್ ಕಿಶನ್ ಮೊದಲನೇ ಸ್ಥಾನ ದಲ್ಲಿದ್ದಾರೆ.

Leave A Reply

Your email address will not be published.