Innovation: ಬಡ ರೈತರ ಸಹಾಯಕ್ಕೆ 10 ನೇ ತರಗತಿ ಪಾಸಾದ ವ್ಯಕ್ತಿ ತಯಾರಿಸಿದ್ದಾರೆ ಕೇವಲ 40 ಸಾವಿರದ ಅಗ್ಗದ ಟ್ರ್ಯಾಕ್ಟರ್.
ಗುವಾಹಟಿ ಮೂಲದ ವ್ಯಕ್ತಿ ಅನೇಕ ದಶಕಗಳಿಂದ ಸಾಮಾನ್ಯ ಜನರ ಜೀವನ ಸುಲಭಗೊಳಿಸುವ ಉದ್ದೇಶದಿಂದ ಅನೇಕ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತ ಇರುತ್ತಾರೆ ಇವರು. ಕನಕ್ ಗೊಗೋಯ್ ಎನ್ನುವುದು ಇವರ ಹೆಸರು. ಇವರು ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ. ಇದಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ.
ಕನಕ್ ಅವರ ತಂದೆಗೆ ತನ್ನ ಮಗ ಉತ್ತಮವಾಗಿ ಓದಿ ಒಂದು ಉತ್ತಮ ಕೆಲಸದಲ್ಲಿ ಇರಬೇಕು ಎನ್ನುವ ಇಚ್ಛೆ ಇತ್ತು. ಆದರೆ ಯಂತ್ರಗಳ ಬಗ್ಗೆ ಬಹಳ ಆಸಕ್ತಿ ಇದ್ದ ಇವರಿಗೆ ಪುಸ್ತಕ ತಲೆಗೆ ಹೆಚಿನು ಹತ್ತಲಿಲ್ಲ. ಜೋರ್ಹತ್ ಎನ್ನುವಲ್ಲಿ ಇವರು ಯಂತ್ರಗಳ ಬಗ್ಗೆ ಬಹಳಷ್ಟು ಕಲಿತರು. ಅಲ್ಲದೆ ಡೇರಿ ಅಲ್ಲಿ ಹಾಲನು ಕೂಡ ಮಾರಾಟ ಮಾಡುತ್ತಿದ್ದರು. ನಂತರ ಕಾಯಂ ಉದ್ಯೋಗದ ಹುಡುಕಾಟದಲ್ಲಿ ಜಲ ಮಂಡಳಿ ಗುತ್ತಿಗೆದಾರರಾಗಿಯೂ ಕೂಡ ಕೆಲಸ ಮಾಡಿದ್ದಾರೆ.
ಕಾಯಂ ಕೆಲಸ ಸಿಕ್ಕ ನಂತರ ಯಂತ್ರದ ಮೇಲಿದ್ದ ಇವರ ಪ್ರೀತಿಗೆ ಗೆ ಇವರು ಒಂದು ಗುವಾಹಟಿಯಲ್ಲಿ ಸಣ್ಣ ಫ್ಯಾಕ್ಟರಿ ಕೂಡ ತೆರೆದರು. ಇವರ ಆಲೋಚನೆ ಆದರದ ಮೇಲೆ ಒಂದೊಂದೇ ಆವಿಷ್ಕಾರಗಳನ್ನು ಮಾಡುತ್ತ ಹೋದರು. ಕಳೆದ 2 ದಶಕದಲ್ಲಿ ಇವರು 10 ಕ್ಕೂ ಹೆಚ್ಚು ಆವಿಷ್ಕಾರಗಳನ್ನು ಮಾಡಿದ್ದಾರೆ. ಇತ್ತೀಚಿಗೆ ಇವರು ಚಿಕ್ಕದಾಗಿ ವಿಭಿನ್ನ ಮಾದರಿಯ ಟ್ರ್ಯಾಕ್ಟರ್ ಕೂಡ ತಯಾರಿಸಿದ್ದಾರೆ.
ಲೊಕ್ಡೌನ್ ಸಮಯದಲ್ಲಿ ಇವರು ಹೊಸ ಮಾದರಿಯ ಟ್ರ್ಯಾಕ್ಟರ್ ತಯಾರು ಮಾಡಿದ್ದಾರೆ. ಗಾತ್ರದಲ್ಲಿ ಬಹಳ ಚಿಕದಾಗಿರುತ್ತದೆ. ಮತ್ತು ಸಣ್ಣ ಹಾಗು ಬಡ ರೈತರಿಗೆ ಸಹಾಯವಾಗುತ್ತದೆ. 40 ಸಾವಿರಕ್ಕಿಂತಲೂ ಕಡಿಮೆ ಬೆಳೆಗೆ ಸಿಕ್ಕುವ ಈ ಟ್ರ್ಯಾಕ್ಟರ್ ಗೆ ನೇಗಿಲು ಹಾಗು ಯಾವುದೇ ಟ್ರಾಲಿಯನ್ನು ಜೋಡಿಸಬಹುದಾಗಿದೆ. ಯಾವುದೇ ರೈತರು ಲಕ್ಷಗಟ್ಟಲೆ ಕೊಟ್ಟು ಟ್ರ್ಯಾಕ್ಟರ್ ಖರೀದಿ ಮಾಡಲು ಸಾಧ್ಯವಾಗದೆ ಇದ್ದರೆ, ಕನಕ್ ಗೊಗೋಯ್ ಅವರ ಈ ಹೊಸ ವಿನ್ಯಾಸದ ಕಡಿಮೆ ಬೆಳೆಯ ಟ್ರ್ಯಾಕ್ಟರ್ ಖರೀದಿ ಮಾಡಬಹುದು. Kanak Gogoi ಎನ್ನುವ ಹೆಸರಿನ ಫೇಸ್ಬುಕ್ ಅಕೌಂಟ್ ಮೂಲಕ ಇವರನ್ನು ಸಂಪರ್ಕಿಸಬಹುದು.