Innovation: ಮಣ್ಣಿನಿಂದ ಮಾಡಿದ ಕೂಲರ್ ಗೆ ಇದೀಗ ಭಾರತದಲ್ಲಿ ಬೇಡಿಕೆ. ಕರೆಂಟ್ ಬಿಲ್ ಕೂಡ ಇಲ್ಲ, ವಾತಾವರಣ ಕೂಡ ಸುರಕ್ಷಿತ.

323

ವರ್ಷಗಳಿಂದ ಭಾರತದಲ್ಲಿ ಮನೆಯನ್ನು ತಂಪಾಗಿರಿಸಲು ಅನೇಕ ದೇಶಿಯ ಪರ್ಯಾಯ ವ್ಯವಸ್ಥೆ ಇತ್ತು. ಹಂಚಿನ ಮನೆಯಿಂದ ಹಿಡಿದು, ಮನೆ ಮೇಲೆ ಗಿಡಗಳನ್ನೂ ನೆಡುವ ಮೂಲಕ ತಂಪಾಗಿಸುವ ಕೆಲಸ ಮಾಡಲಾಗುತ್ತಿದ್ದು. ಇದೀಗ ಅಂತಹ ಯಾವುದು ಇರದೇ, ಹಳ್ಳಿಯ ಮನೆಯಲ್ಲೂ ಎಸಿ ಬಳಕೆ ಮಾಡಲಾಗುತ್ತಿದೆ.

ಆದರೆ ಮನೆಯೊಳಗೇ ಎಸಿ ಎಷ್ಟೇ ತಣ್ಣಗಾಗಿಸಿದರು, ಹೊರಗಡೆ ಹವಾಮಾನವನ್ನು ಬಿಸಿ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಈ ಕೃತಕ ಉಪಕರಣಗಳಿಂದ ವಿದ್ಯುತ್ ಬಿಲ್ ಕೂಡ ಹೆಚ್ಚಾಗಿ ಬರುವುದನ್ನು ನಾವು ನೋಡಿದ್ದೇವೆ. ಇದೆ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಮೋನಿಶ್ ಸಿರಿಪೇರಿಯ ಎನ್ನುವವರು ಅತ್ಯುತ್ತಮ ಕೂಲಿಂಗ್ ವ್ಯವಸ್ಥೆ ಕಂಡು ಹುಡುಕಿದ್ದಾರೆ. ಇದು ಯಾವುದೇ ಕಟ್ಟಡದ ಬಿಸಿ ಗಾಳಿ ತಂಪು ಮಾಡಲು ಸಹಕರಿಸುತ್ತದೆ.

ಟೆರಾಕೋಟಾ ಹಾಗು ನೀರನ್ನು ಬಳಸಿ ಕೂಲಂಟ್ ಎನ್ನುವ ಸಾಧನ ಕಂಡುಹಿಡಿದ್ದಾರೆ. ಭಾರತ, ಈಜಿಪ್ಟ್, ಇರಾನ್ ಹಾಗು ಸೌದಿ ಅರೇಬಿಯಾ ದಂತಹ ದೇಶಗಳಲ್ಲೂ ಕೂಡ ಇಂತಹ ಸಾಧನವನ್ನು ಬಳಸಲಾಗುತ್ತಿದೆ. ಅಂತಹ ಯಂತ್ರಕ್ಕೆ ಇವರು ಹೊಸ ರೂಪ ಕೊಟ್ಟಿದ್ದಾರೆ.

ಮೋನಿಶ್ ಅವರ ಪ್ರಕಾರ ಈ ಕೂಲಿಂಗ್ ಸಾಧನ, ತಂಪಾದ ಹಾಗು ಮಣ್ಣಿನ ಮಡಕೆಗಳ ಸಂಯೋಜನೆ ಆಗಿದೆ. ಇದು ಯಾವುದೇ ಕಟ್ಟಡಗಳ ಹವಾನಿಯಂತ್ರವನ್ನು ಶೇಕಡಾ 30 ರಷ್ಟು ಕಡಿಮೆ ಮಾಡುತ್ತದೆ. ಇದು ಎಸಿ ಗೆ ಸಂಪ್ಪೂರ್ಣವಾಗಿ ಪರ್ಯಾಯ ಆಗದಿದ್ದರೂ ಕೂಡ ನಾವು ವಾಸಿಸುವ ಮನೆ ಅಥವಾ ಕೆಫೆ ಗಳಲ್ಲಿ ಬಳಸಿದರೆ ವಿದ್ಯುತ್ ಬಳಕೆಯನ್ನು 30 ರಿಂದ 40 ಪ್ರತಿಷದಷ್ಟು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಈ ತಂತ್ರಜ್ಞಾನ ತುಂಬಾ ಕಷ್ಟದ ಕೆಲಸವಲ್ಲ. ನಾವು ಬಳಸಲು ಸುಲಭವಾಗುವಂತೆ ಹೊಸ ವಿನಾಯಸದಲ್ಲಿ ತಯಾರಿಸಿದ್ದೇವೆ. ಸಾಂಪ್ರದಾಯಿಕವಾಗಿ ಈ ನೀರನ್ನು ತಂಪಾಗಿರಿಸಲು ಮಡಕೆ ಬಳಸಲಾಗುತ್ತದೆ. ನಾವು ಅದೇ ತತ್ವವನ್ನು ಈ ಸಾಧನದಲ್ಲಿ ಬಳಸುತ್ತಿದ್ದೇವೆ. ನಾವು ಟೊಳ್ಳಾದ ಮಡಕೆಗಳ ಜೋಡಿಸಿ ಅವುಗಳಲ್ಲಿ ನೀರು ಹಾದು ಹೋಗುವಂತೆ ವಿನ್ಯಾಸ ಮಾಡಿದ್ದೇವೆ. ಇದು ಬಿಸಿ ಗಾಳಿಯನ್ನು ತಂಪಾಗಿಸುತ್ತದೆ.

ಇದರ ಉಪಯೋಗದಿಂದ ವಿದ್ಯುತ್ ಉಳಿತಾಯ ಮಾತ್ರವಲ್ಲದೆ, ಇದು ಸ್ಥಳೀಯವಾಗಿ ಮರುಬಳಕೆ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದು ಪರಿಸರ ಸ್ನೇಹಿ ಅಲ್ಲದೆ, ನಾವು ಬಳಸಿದ ನೀರು ಕೂಡ ಇದಕ್ಕೆ ಬಳಸಬಹುದು. ಮನೆ ಕಚೇರಿ ಹಾಗು ಕೆಫೆ ಗಳಲ್ಲಿ ಇದನ್ನು ಬಳಸಬಹುದು. ಇದಕ್ಕೆ ಜಾಸ್ತಿ ಖರ್ಚು ಕೂಡ ಇರಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಇನ್ನು ಬಹಳಷ್ಟು ಮಾಹಿತಿಗಾಗಿ ಅವರ ಅಧಿಕೃತ ವೆಬ್ಸೈಟ್ https://www.coolant.co/ ಮೂಲಕ ಸಂಪರ್ಕಿಸಬಹುದು.

Leave A Reply

Your email address will not be published.