ಸೂರ್ಯ ಕುಮಾರ್ ಯಾದವ್ ಪ್ರದರ್ಶನಕ್ಕೆ ಬೆರಗಾದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್. SKY ಬಗ್ಗೆ ಹೇಳಿದ್ದೇನು?
ಟಿ-೨೦ ವಿಶ್ವಕಪ್ ಮುಗಿದ ಬಳಿಕ ಭಾರತ ಪಾಲ್ಗೊಳ್ಳುತ್ತಿರುವ ಮೊದಲ ಸರಣಿ ನ್ಯೂಜಿಲ್ಯಾಂಡ್ ವಿರುದ್ಧದಾಗಿದೆ. ಮೂರೂ ಟಿ-೨೦ ಪಂದ್ಯದಲ್ಲಿ ಮೊದಲನೇ ಪಂದ್ಯ ಮಳೆಗೆ ನಿಂತು ಹೋದರೆ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ರನ್ ಮಳೆಗೆ ನ್ಯೂಜಿಲ್ಯಾಂಡ್ ತಂಡ ಕೊಚ್ಚಿ ಹೋಗಿದೆ. ಎರಡನೇ ಟಿ-೨೦ ಪಂದ್ಯ sky ಅವರ ಉತ್ತಮ ಆಟಗಳಲ್ಲಿ ಒಂದಾಗಿದೆ. ಅಲ್ಲದೆ ಒಂದೇ ವರ್ಷದಲ್ಲಿ ಎರಡು ಟಿ-೨೦ ಶತಕ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ ಸ್ಕೈ. ರೋಹಿತ್ ಶರ್ಮ ಮೊದಲ ಆಟಗಾರರಾಗಿದ್ದರು.
ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿದರು ಸೂರ್ಯಕುಮಾರ್ ಯಾದವ್. ಒಟ್ಟಾರೆ 51 ಎಸೆತಗಳಲ್ಲಿ ಇವರು ಬರೋಬ್ಬರಿ 111 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಈ ಇನ್ನಿಂಗ್ಸ್ ಅಲ್ಲಿ ಒಟ್ಟಾರೆ 11 ಬೌಂಡರಿ ಹಾಗು 7 ಸಿಕ್ಸರ್ ಕೂಡಿತ್ತು. ಹಾಗೇನೇ ಇವರ ಸ್ಟ್ರೈಕ್ ರೇಟ್ ೨೧೭.೬೫ ರಲ್ಲಿತ್ತು. ಇದರಿಂದ ಗೊತ್ತಾಗುತ್ತೆ ನ್ಯೂಜಿಲ್ಯಾಂಡ್ ಬೌಲರ್ ಗಳನ್ನೂ ಎಷ್ಟು ಬೆಂಡೆತ್ತಿದ್ದಾರೆ ಸೂರ್ಯಕುಮಾರ್ ಯಾದವ್. ಅಲ್ಲದೆ ಇವರ ಆಟದ ಬಗ್ಗೆ ಹಿರಿಯ ಆಟಗಾರರು ಅಲ್ಲದೆ ಪ್ರಸ್ತುತತ ಆಟಗಾರರು ಕೂಡ ಪ್ರಶಂಸೆ ನೀಡಿದ್ದಾರೆ. ಇವರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರಾಗಿದ್ದರು.
ಇದಲ್ಲದೆ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಸ್ಕೈ ಬಗ್ಗೆ ಪ್ರಶಂಸೆ ಮಾತನ್ನು ಆಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಅವರ ಈ ಇನ್ನಿಂಗ್ ನೋಡಿ ವಿಸ್ಮಿತರಾಗಿದ್ದಾರೆ. ಅಲ್ಲದೆ, ಮಾತಾಡುತ್ತ ನಮ್ಮ ಈ ಪಂದ್ಯದಲ್ಲಿ ಪ್ರದರ್ಶನ ಉತ್ತಮವಾಗಿರಲಿಲ್ಲ. ಸ್ಕೈ ಅವರ ಇನ್ನಿಂಗ್ಸ್ ಆಟ ಬೇರೇನೇ ಜಗತ್ತಿನದಾಗಿತ್ತು. ಹಾಗೇನೇ ನಾನು ನೋಡಿದ ಆಟಗಳಲ್ಲಿ ಇದು ಒಂದು ಬೆಸ್ಟ್ ಆಟವಾಗಿದೆ. ಅವರು ಆಡಿದ ಶಾಟ್ ಗಳನ್ನೂ ನಾನು ಮೊದಲು ನೋಡಿರಲಿಲ್ಲ. ಜಗತ್ತಿನ ಬೆಸ್ಟ್ ಕ್ರಿಕೆಟರ್ ಗಳಲ್ಲಿ ಸೂರ್ಯ ಕೂಡ ಒಬ್ಬರಾಗಿದ್ದಾರೆ ಎಂದು ಪ್ರಶಂಸಿದ್ದಾರೆ.