Kannada BigBoss Season – 9: ದೀಪಿಕಾ ದಾಸ್ ಬಿಗ್ ಬಾಸ್ ಮನೆಯಿಂದ ಔಟ್. ಸಡನ್ ತಿರುವು ಪಡೆದ ಬಿಗ್ ಬಾಸ್ ಮನೆ.
ಬಿಗ್ ಬಾಸ್ ಕನ್ನಡ (Kannada BigBoss Season – 9) ರಿಯಾಲಿಟಿ ಶೋ. ಉತ್ತಮ ಪ್ರತಿಕ್ರಿಯೆ ಒಂದಿಗೆ ಮನೆ ಮಾತಾಗಿರುವ ಶೋ ಕಿಚ್ಚ ಸುದೀಪ್ ಅವರ ಯಶಸ್ವೀ 9 ನೇ ಸೀಸನ್ ವರೆಗೂ ಬಂದಿದೆ. ಇದೀಗ ಬಿಗ್ ಬಾಸ್ 9 ನೇ ಸೀಸನ್ ಅರ್ಧ ಭಾಗ ಮುಗಿದಿದೆ. ಇನ್ನು ಅರ್ಧ ದಾರಿ ಸಾಗಬೇಕಿದೆ. ಇಲ್ಲಿಯವರೆಗೆ ಕುತೂಹಲ ದಿಂದ ಸಾಗಿದ ಬಿಗ್ ಬಾಸ್ ಮನೆಯಲ್ಲಿ ನಾವು ಸ್ಪರ್ದಿಗಳ ಅನೇಕ ನಾಟಕಗಳನ್ನು ನೋಡಿ ಮನೋರಂಜನೆ ಪಡೆದಿದ್ದೇವೆ. ಇದೀಗ ಬಿಗ್ ಬಾಸ್ ಸೀಸನ್ 8 ರಲ್ಲಿ ಫೈನಲ್ ವರೆಗೆ ಬಂದಿದ್ದ ದೀಪಿಕಾ ದಾಸ್ ಈ ಬಾರಿ ಮನೆಯಿಂದ ಹೊರಗೆ ನಡೆಯುತ್ತಿದ್ದಾರೆ.
ಪ್ರವೀಣರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ದೀಪಿಕಾ ದಾಸ್ ಮನೆಯಿಂದ ಔಟ್ ಆಗಿದ್ದಾರೆ. ಕಿರುತೆರೆಯಲ್ಲಿ ಅಪಾರ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಇವರ ಜನಪ್ರಿಯತೆ ಬಿಗ್ ಬಾಸ್ ಸೀಸನ್ ೮ ರಲ್ಲೂ ಕೂಡ ಹೆಚ್ಚಾಯಿತು. ಶೈನ್ ಶೆಟ್ಟಿ ಜೊತೆಗಿನ ಕೆಮಿಸ್ಟ್ರಿ ಇವರನ್ನು ಇನ್ನು ಎತ್ತರಕ್ಕೆ ಕೊಂಡು ಹೋಗಿತ್ತು ಅದಕ್ಕೆ ಸಾಕ್ಷಿ ಈ ಬಾರಿಯ ಬಿಗ್ ಬಾಸ್ ಗು ಆಯ್ಕೆ ಆಗಿದ್ದು. ಈ ಬಾರಿಯ ಆವೃತ್ತಿಯಲ್ಲಿ ಯಾವ ಗುಂಪಿಗೂ ಹೋಗದೆ ಗಾಸಿಪ್ ಗು ಬೀಳದೆ ಸಿಂಗಲ್ಲಾಗಿ ಎಲ್ಲರ ಜೊತೆ ಆಟ ಆಡಿದ್ದರು.
ಸಾನ್ಯಾ ಅಯ್ಯರ್ ಅವರ ಎಲಿಮಿನೇಷನ್ ನಂತರ ಇದೀಗ ದೀಪಿಕಾ ದಾಸ್ ಅವರ ಔಟ್ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ತಿರುವು ತಂದಿದೆ. ಯಾಕೆಂದರೆ ಇವರನ್ನು ಈ ಬಾರಿ ಗೆಲ್ಲಬಹುದಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲಿಗರು ಎಂದರೆ ತಪ್ಪಾಗಲಾರದು. ಕಾರಣ ಕಳೆದ ಆವೃತ್ತಿಯಲ್ಲಿ ಫೈನಲ್ ವರೆಗೂ ಬಂದಿದ್ದು. ಟಾಸ್ಕ್ ಆಗಲಿ, ಮನರಂಜನೆ ಆಗಲಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು ದೀಪಿಕಾ. ಈಗಾಗಲೇ 50 ದಿನ ಪೂರೈಸಿದ ಬಿಗ್ ಬಾಸ್, ದೀಪಿಕಾ ದಾಸ್ ಅವರನ್ನು ಔಟ್ ಮಾಡುವ ಮೂಲಕ ತಿರುವು ನೀಡಿ ಜನರ ಮನರಂಜನೆಗೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.