KGF ಚಾಪ್ಟರ್ ೨ ಗೆ ನಲುಗಿದ ಬಾಲಿವುಡ್ ನ ಜೆರ್ಸಿ ಸಿನೆಮಾ. ಸೋಮವಾರಕ್ಕೆ ಕೇವಲ ಹಿಂದಿ ಭಾಷೆಯಲ್ಲಿ ಯಶ್ ಸಿನೆಮಾ ಗಳಿಸಿದ ಹಣವೆಷ್ಟು?
ಎರಡು ವರ್ಷಗಳ ನಂತರ ಬಂದ ಸಿನೆಮಾಗಳು ಜನರನ್ನು ಸಿನಿ ಮಂದಿರ ಕಡೆ ಕರೆದುಕೊಂಡು ಬರಲು ಪರದಾಡುತ್ತಿತ್ತು. ಅದೆಷ್ಟೋ ದೊಡ್ಡ ಸುದ್ದಿ ಮಾಡಿ ಬಂದ ಚಿತ್ರಗಳು ಹೇಳ ಹೆಸರಿಲ್ಲದೆ ಹೋದವು. ಆದರೆ ದಕ್ಷಿಣದ ಸಿನೆಮಾಗಳಾದ ಪುಷ್ಪ, RRR ಹಾಗು ಕನ್ನಡದ KGF Chapter 2 ದೇಶದಲ್ಲಿ ಅತಿ ದೊಡ್ಡ ಸುದ್ದಿ ಮಾಡಿದೆ. ಅದು ಕಲೆಕ್ಷನ್ ವಿಚಾರದಲ್ಲಿ ಆಗಿರಬಹುದು ಹಾಗೇನೇ ಕಥೆಯ ವಿಚಾರದಲ್ಲಿ ಆಗಿರಬಹುದು. ಬಾಲಿವುಡ್ ನ ಯಾವುದೇ ಇತ್ತೀಚಿಗೆ ಬಂದ ಸಿನಿಮಾ ದಿ ಕಾಶ್ಮೀರ ಫೈಲ್ಸ್ ಬಿಟ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲಿಲ್ಲ.
ಯಶ ರ ಸಿನೆಮಾ KGF ೨ ಬಂದು ಎರಡು ವಾರ ಆದರೂ ಕೂಡ ಕಲೆಕ್ಷನ್ ಅಬ್ಬರ ನಿಂತಿಲ್ಲ. ಎರಡನೇ ಸೋಮವಾರದಲ್ಲಿ ಕೂಡ ಯಶ್ ಸಿನೆಮಾ ಉತ್ತಮ ಕಲೆಕ್ಷನ್ ಮಾಡಿದೆ. ಈ ಸಿನೆಮಾ ನಿನ್ನೆ ಒಂದೇ ದಿನ ಸುಮಾರು ೮ ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರ ಒಟ್ಟಾರೆ ೩೨೯ ಕೋಟಿ ಹಣ ಗಳಿಸಿದೆ. ಇದಲ್ಲದೆ ಹಲವು ದಾಖಲೆಗಳೇ kgf ಎದುರು ಸರಿಸಮವಾಗಿದೆ. ಬಾಲಿವುಡ್ ನ ಭಜರಂಗಿ ಭಾಯಿಜಾನ್ ೩೨೦ ಕೋಟಿ, ಸುಲ್ತಾನ್ ೩೦೦ ಕೋಟಿ ಹಾಗು ಪದ್ಮವತ್ ೩೦೦ ಕೋಟಿ ಗಳಿಸಿತ್ತು.
ಇದೀಗ ದಂಗಾಲ್ ದಾಖಲೆ ಸರಿ ಗಟ್ಟಿಸಲು ಎಗ್ಗಿಲಲ್ಲದೆ ಮುಂದೆ ಹೋಗುತ್ತಿದೆ ಕನ್ನಡ ಸಿನೆಮಾ. ಇದಲ್ಲದೆ ಕೆಜಿಎಫ್ ಹಿಂದಿಯ ಸಂಜು, ಟೈಗರ್ ಜಿಂದ ಹೈ, ಹಾಗು ಪಿಕೆ ಸಿನೆಮಾ ಈ ವಾರದಲ್ಲೇ ಹಿಂದೆ ಹಾಕಬಹುದು ಎಂದು ಕೂಡ ಸಿನೆಮಾ ವಿಶ್ಲೇಷಕರು ಹೇಳುತ್ತಿದ್ದಾರೆ. ದಂಗಾಲ್ ಒಟ್ಟಾರೆ ೩೮೭ ಕೋಟಿ ಕಲೆ ಹಾಕಿ ಎರಡನೇ ಸ್ಥಾನದಲ್ಲಿ ಇದೆ. ಅದು ಬಿಟ್ಟರೆ ಬಾಹುಬಲಿ ೨ ೫೧೦ ಕೋಟಿ ಕಲೆಕ್ಷನ್ ಮಾಡಿ ಮೊದಲ ಸ್ಥಾನದಲ್ಲಿದೆ. ಇದಲ್ಲದೆ ಕೆಜಿಎಫ್ ಗೆ ಪೈಪೋಟಿ ಎಂಬಂತೆ ಬಂದ ತಮಿಳಿನ ವಿಜಯ ನಟಿಸಿದ ಬೀಸ್ಟ್ ಸಿನೆಮಾ ಮಕಾಡೆ ಮಲಗಿದೆ.
ಹಾಗೇನೇ ಹೆದರಿ ದಿನಾಂಕ ಮುಂದೂಡಿದ ಬಾಲಿವುಡ್ ನ ಸಿನೆಮಾ ಜೆರ್ಸಿ ಕೂಡ ೨೨ ಏಪ್ರಿಲ್ ಗೆ ರಿಲೀಸ್ ಆದರೂ ಕೂಡ ಕೆಜಿಎಫ್ ಮುಂದೆ ಸ್ಪರ್ದಿಸಲು ಸಾಧ್ಯವಾಗಲಿಲ್ಲ. ಶಾಹಿದ್ ಕಪೂರ್ ಸಿನೆಮಾ ಜೆರ್ಸಿ ತೆಲುಗಿನ ನಾಣಿ ಅವರ ರಿಮೇಕ್ ಆಗಿದ್ದು ಬಾಕ್ಸ್ ಆಫೀಸ್ ಅಲ್ಲಿ ಉತ್ತಮ ಪ್ರದರ್ಶನ ಕಾಣುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಜನರ ಮೊದಲ ಆಯ್ಕೆ ಇಂದು ಕೂಡ ಕನ್ನಡ ಕೆಜಿಎಫ್ ಆಗಿದೆ ಎನ್ನುವುದು ಕಂಡುಬರುತ್ತದೆ. ಜೆರ್ಸಿ ಮೊದಲ ದಿನ ಗಳಿಸಿದ್ದು ಕೇವಲ ೩.೭೫ ಕೋಟಿ, ಹಾಗೇನೇ ಮೊದಲ ವಾರಕ್ಕೆ ಒತ್ತಿ ಗಳಿಕೆ ೧೪-೧೫ ಕೋಟಿ ಅಷ್ಟೇ ಎನ್ನುವುದು ವರದಿ. ಇದಲ್ಲದೆ ಈ ಚಿತ್ರಕ್ಕೆ ಅತ್ಯಂತ ಹೆಚ್ಚು ನೆಗೆಟಿವ್ ವಿಮರ್ಶೆಗಳು ಬಂದಿದೆ ಅದೇ ಕಾರಣಕ್ಕೆ ಸಿನೆಮಾ ಓದಲಿಲ್ಲ ಎನ್ನುವ ಮಾತು ಕೂಡ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.