KGF ಚಾಪ್ಟರ್2 ರಿಲೀಸ್ ಡೇಟ್ ಅನೌನ್ಸ್ ಆಗಿದ್ದೇ ತಡ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಬಿಚ್ಚಿಟ್ಟರೇ ಯಶ್ ಅವರು? ಯಾವುದು ಅವರ ಮುಂದಿನ ಚಿತ್ರ?

4,167

KGF ಚಾಪ್ಟರ್ 2 ಎಂಬ ಮಾಸ್ಟರ್ ಪೀಸ್ ಚಿತ್ರ ತೆರೆಗೆ ಬರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಚಿತ್ರದ ಟ್ರೇಲರ್ ಕೂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದು ದೇಶ ವಿದೇಶಗಳಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಎಲ್ಲಾ ಜನರು ಕಾತುರದಿಂದ ಕಾಯುತ್ತಿದ್ದ ಚಿತ್ರ ಇದೆ ಬರುವ 14ರಂದು ತೆರೆಗೆ ಬರಲಿದೆ. ಹೀಗೆ ಇರುವಾಗ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಕೊಟ್ಟರೆ ಯಶ್ ಎಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಶುರುವಾಗಿದೆ. ಹಾಗಾದರೆ ಯಾವುದು ಆ ಸಿನೆಮಾ ,ಏನು ಯಶ್ ಹೇಳಿದ್ದು?

ಯಶ್ ಅವರು ಬರೋಬ್ಬರಿ 5 ವರ್ಷಗಳಿಂದ KGF ಬಿಟ್ಟು ಬೇರೆ ಯಾವುದೇ ಸಿನೆಮಾ ಮಾಡಿಲ್ಲ. ಬದಲಾಗಿ ಅವರು ತಮ್ಮ ಸಂಪೂರ್ಣ ಸಮಯವನ್ನು ಇದೆ ಸಿನಿಮಾಗಾಗಿ ಮೀಸಲು ಇಟ್ಟಿದ್ದರು. ಅಷ್ಟೇ ಅಲ್ಲ ಅವರಿಗೆ ಅದು ಅಷ್ಟೇ ಮಟ್ಟಿಗೆ ಹೆಸರು ಕೂಡ ತಂದು ಕೊಟ್ಟಿದೆ. ತಮ್ಮ 200% ಈ ಸಿನೆಮಾಗೆ ಹಾಕಿದ್ದಾರೆ ಎನ್ನುತ್ತಾರೆ ಅವರು. ಹಾಗಾದರೆ ಮುಂದಿನ ಚಿತ್ರ ಯಾವುದು ಎಂಬ ಅಭಿಮಾನಿಗಳ ಪ್ರಶ್ನೆಗೆ ಯಶ್ ಅವರು ಇನ್ನು ಕೂಡ ಯಾವುದೇ ಉತ್ತರ ನೀಡಿಲ್ಲ. ಸದ್ಯಕ್ಕೆ kgf ಚಾಪ್ಟರ್ 2 ಪ್ರಮೋಶನ್ ಕೆಲಸ ನಡೆಯುತ್ತಿದ್ದು, ಮುಂದಿನ ಸಿನೆಮಾದ ಬಗೆಗೆ ಆ ನಂತರದಲ್ಲಿ ಹೇಳುವುದಾಗಿ ಹೇಳಿದ್ದಾರೆ.

ಆದರೆ ಕನ್ನಡದ ಖ್ಯಾತ ನಿರ್ದೇಶಕ ನರ್ತನ್ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ ಎಂದು ಸ್ಯಾಂಡಲ್ ವುಡ್ ನಿಂದಾ ಮಾಹಿತಿ ಬರುತ್ತಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಎಷ್ಟು ಸುಳ್ಳು ಎಂದು ನಾವು ಕಾದುನೋಡಬೇಕು. ಅದೇನೇ ಆಗಲಿ ಇದೀಗ ಮುಂಬರುವ KGF ಚಾಪ್ಟರ್ 2 ಚಿತ್ರ ಯಶಸ್ವಿ ಆಗಲಿ. ಇಷ್ಟರ ವರೆಗಿನ ಎಲ್ಲಾ ಸಿನೆಮಾ ದಾಖಲೆಗಳು ಮುರಿದು ಬೀಳಲಿ. ಕನ್ನಡದ ಸಿನೆಮಾ ಒಂದು ದೇಶ ಅಲ್ಲದೇ ವಿದೇಶದಲ್ಲೂ ಕೂಡ ಯಶಸ್ಸು ಕಾಣಲಿ ಎಂದು ಹಾರೈಸೋಣ.

Leave A Reply

Your email address will not be published.