KGF -2 ಕುರಿತ ಮಾಹಿತಿ ಬೈಚಿಟ್ಟ ಚಿತ್ರತಂಡ. ಯಾವಾಗ ಬಿಡುಗಡೆ ಗೊಳ್ಳಲಿದೆ ಟ್ರೈಲರ್ ಹಾಗು ಹಾಡುಗಳು?
KGF ಸಿನೆಮಾ ಇಡೀ ಭಾರತೀಯ ಸಿನೆಮಾ ರಂಗದಲ್ಲಿ ಒಂದು ಹೊಸ ಮೈಲಿಗಲ್ಲು ಸತಾಪಿಸಿದ್ದ ಸಿನೆಮಾ. ಪಾನ್ ಇಂಡಿಯಾ movie ಆಗಿ ಬಿಡುಗಡೆ ಆಗಿದ್ದ ಸಿನೆಮಾ ಭಾರತ ಅಲ್ಲದೇ ವಿದೇಶದಲ್ಲೂ ಕೂಡ ಬಹಳ ಸದ್ದು ಮಾಡಿತ್ತು. ಯಶ್ ಎಂಬ ನಟ ಇಂಟ್ನ್ಯಾಶನಲ್ ಹೀರೋ ಆಗಿದ್ದು ಇದೆ ಸಿನೆಮಾ ದಿಂದ. ಯಶ್ ಅವರು ಕೂಡ ಈ ಸಿನೆಮಾ ಕೈಗೆತ್ತಿ ಕೊಂಡ ನಂತರ ಮತ್ಯಾವ ಸಿನೆಮಾ ಕೂಡ ಮಾಡಲಿಲ್ಲ. ಬದಲಾಗಿ ಒಂದೇ ಸಿನೆಮಾದ ಕಡೆಗೆ ತಮ್ಮ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಯಾಕೆಂದರೆ ಆ ಮಟ್ಟಿಗೆ ಜನರಲ್ಲಿ ನಿರೀಕ್ಷೆ ಇದೆ.
KGF ಮೊದಲ ಅಧ್ಯಾಯ ತೆರೆಕಂಡು 3 ವರ್ಷಗಳು ಕಳೆದರೂ ಅದರ ಹವಾ ಇನ್ನು ಮುಗಿದಿಲ್ಲ ಹಾಗಾದರೆ KGF 2 ಸಿನೆಮಾದ ಮೇಲೆ ಯಾವ ರೀತಿಯ ನಿರೀಕ್ಷೆ ಇರಬಹುದು ಎಂದು ನೀವೇ ಊಹಿಸಿಕೊಳ್ಳಬಹುದು. ಇದೀಗ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಜ್ಜು ಗೊಳ್ಳುತ್ತಿದೆ ಸಿನೆಮಾ ಎಂದು ಸಿನಿ ರಂಗದಿಂದ ಕೇಳಿ ಬರುತ್ತಿದೆ ಬಿಸಿ ಬಿಸಿ ಸುದ್ದಿ. ಹೌದು ಹಾಗೆಯೇ ಅದಕ್ಕೆ ತಕ್ಕಂತೆ ಹೊಂಬಾಳೆ ಫಿಲ್ಮ್ಸ್ ಕೂಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಹೌದು ಹಾಗಾದರೆ ಏನು ಯಾವ ದಿನದಂದು ತೆರೆ ಕಾಣಲಿದೆ KGF 2 ಟ್ರೇಲರ್?
ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು , ಪ್ರೇಕ್ಷಕರಲ್ಲಿ ಪ್ರಶ್ನೆ ಒಂದನ್ನು ಇಟ್ಟಿದೆ. ನೀವು KGF2 ನ ಯಾವುದನ್ನು ಮೊದಲು ನೀಡಲು ಇಷ್ಟ ಪಡುತ್ತಿರಿ ? ಮತ್ತು ಅದಕ್ಕೆ ಆಯ್ಕೆ ಕೂಡ ಕೊಟ್ಟಿದೆ. 1. ಸಾಂಗ್ 2.ಟ್ರೇಲರ್ 3. ಸರ್ಪ್ರೈಸ್ ಎಂದು. ಆದರೆ 85% ಕ್ಕಿಂತಲೂ ಹೆಚ್ಚು ಜನರು ಟ್ರೇಲರ್ ನೋಡಬೇಕು ಎಂದು ಕೇಳಿಕೊಂಡಿದ್ದಾರೆ. Official Twitter ಖಾತೆಯಿಂದ ಈ ಮಾಹಿತಿ ಬಂದಿದೆ ಎಂದಾದರೆ ಸದ್ಯದಲ್ಲೇ KGF 2 ಟ್ರೇಲರ್ ತೆರೆ ಕಾಣಲಿದೆ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಇಡೀ ವಿಶ್ವದಲ್ಲೇ ಇದರ ನಿರೀಕ್ಷೆಯಲ್ಲಿ ಕೋಟ್ಯಾಂತರ ಜನರು ಇದ್ದಾರೆ ಆದಷ್ಟು ಬೇಗ ಸಿನೆಮಾ ತೆರೆ ಕಾಣಲಿ ಇದುವರೆಗೂ ಎಲ್ಲಾ ದಾಖಲೆ ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಲಿ ಎಂದು ನಾವು ಆಶಿಸೋಣ.