KGF CHAPTER -2 ಟ್ರೈಲರ್ ಬಿಡುಗಡೆಗೆ ಸ್ಟಾರ್ಗಳನ್ನೇ ಕರೆ ತಂದ ಪ್ರಶಾಂತ್ ನೀಲ್ ಹಾಗು ರಾಕಿಂಗ್ ಸ್ಟಾರ್ ಯಶ್. ಯಾವ ಭಾಷೆಯ ಟ್ರೈಲರ್ ಯಾರು ಬಿಡುಗಡೆ ಮಾಡಲಿದ್ದಾರೆ ಗೊತ್ತೇ?

728

ಸ್ಯಾಂಡಲ್ ವುಡ್ ಅಲ್ಲಿ ಸೆನ್ಸೇಷನಲ್ ಚಿತ್ರ ಅಂದರೆ KGF, ಕನ್ನಡ ಸಿನಿಮಾ ಯಾವ ಎತ್ತರಕ್ಕೆ ಹೋಗಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್ ಹಾಗು ನಟ ರಾಕಿಂಗ್ ಸ್ಟಾರ್ ಯಶ್. ಚಿತ್ರ ಬಿಡುಗಡೆಯಾಗಿ ಸ್ಯಾಂಡಲ್ ವುಡ್ ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿ ಎಲ್ಲ ಭಾಷೆಯಲ್ಲೂ ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಹುಬ್ಬೇರಿಸುವಂತೆ ಮಾಡಿದೆ. ಅಲ್ಲದೆ ಟ್ರೈಲರ್ ಕೂಡ ದಾಖಲೆ ಮಾಡಿದೆ. ಅತಿ ಹೆಚ್ಚು ವೀಕ್ಷಣೆ ಹಾಗು ಅತಿ ಹೆಚ್ಚು ಲೈಕ್ಸ್ ಪಡೆದ ಟ್ರೈಲರ್ ಆಗಿ ಹೊರಹೊಮ್ಮಿದೆ.

ಮೊದಲ ಭಾಗ ಬಂದು ಎರಡು ವರ್ಷ ಕಳೆದರು ಕೂಡ KGF ಹವಾ ಇನ್ನು ನಿಂತಿಲ್ಲ. ಎಲ್ಲ ಭಾಷಾ ಸಿನಿಮಾ ಅಭಿಮಾನಿಗಳಿಗೂ KGF ಕ್ರೇಜ್ ಹಾಗೇನೇ ಇದೆ. ಇನ್ನು ಬರುವ ತಿಂಗಳು KGF CHAPTER – 2 ವಿಶ್ವದಾದ್ಯಂತ ಬಿಡುಗಡೆ ಅಗಲಿದ್ದು ನೋಡಲು ಪ್ರತಿಯೊಬ್ಬರೂ ಕಾಯುತ್ತ ಇದ್ದಾರೆ. ಈಗಾಗಲೇ ಲಿರಿಕಲ್ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ತೂಫಾನ್ ಎನ್ನುವ ಹಾಗು ಎಲ್ಲ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪ್ರತಿಯೊಬ್ಬರೂ ಕೂಡ ನೋಡಿ ಸಂತಸ ಪಟ್ಟಿದ್ದಾರೆ. ಇಂದು ಅಂದರೆ ಮಾರ್ಚ್ ೨೭, ೨೦೨೨ ರಂದು ಸಂಜೆ KGF CHAPTER 2 ಟ್ರೈಲರ್ ಬಿಡುಗಡೆಯಾಗಲಿದೆ.

ಈ ಟ್ರೈಲರ್ ಬಿಡುಗಡೆಗೆ ದೊಡ್ಡ ಸ್ಟಾರ್ ಗಳನ್ನೇ ಕರೆತರಲಿದ್ದಾರೆ KGF ತಂಡ. ಈ ಚಿತ್ರದ ನಿರೂಪಣೆ ಮಾಡಲು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಸ್ವತಃ ಮಾಡಲಿದ್ದಾರೆ. ಅಲ್ಲದೆ ಕರಣ್ ಹಿಂದಿ ಡಬ್ಬಿಂಗ್ ರೈಟ್ ಕೂಡ ಪಡೆದಿದ್ದಾರೆ. ಕನ್ನಡದ KGF CHAPTER 2 ಟ್ರೈಲರ್ ಕರುನಾಡಿನ ಶಿವರಾಜ್ ಕುಮಾರ್ ಮಾಡಲಿದ್ದಾರೆ. ಇನ್ನು ತಮಿಳಿನಲ್ಲಿ ಟ್ರೈಲರ್ ಲಾಂಚ್ ತಮಿಳ್ ಸ್ಟಾರ್ ಸೂರ್ಯ ಮಾಡಲಿದ್ದಾರೆ. ಹಾಗೇನೇ ತೆಲುಗಿನಲ್ಲಿ ತೆಲುಗು ಸೂಪರ್ ಸ್ಟಾರ್ ರಾಮ್ ಚರಣ್ ಮಾಡಲಿದ್ದಾರೆ.

Leave A Reply

Your email address will not be published.