KGF Chapter 2 ದಾಖಲೆ ಮೊತ್ತಕ್ಕೆ OTT ಗೆ ಮಾರಾಟವಾಗಿದೆ. ಆದರೆ ಅದಕ್ಕಿಂತ ಮುಂಚೆನೇ OTT ಗೆ ತಲೆನೋವಾಗಿ ಪರಿಣಮಿಸಿದೆ ಈ ಸಮಸ್ಯೆ.

345

ವಿಶ್ವದಾದ್ಯಂತ ಏಪ್ರಿಲ್ ೧೪ ೨೦೨೨ ರಂದು ಬಿಡುಗಡೆ ಆದ ಕನ್ನಡದ ಹೆಮ್ಮೆಯ KGF ಚಾಪ್ಟರ್ ೨ ಸಿನೆಮಾ ಇಂದಿಗೆ ೧೦೦೦ ಕೋಟಿ ಗು ಅಧಿಕ ಕಲೆಕ್ಷನ್ ಮಾಡಿ ಮಿಂಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಈ ಚಿತ್ರದಲ್ಲಿನ ಸಿನಿಮಾಟೋಗ್ರಫಿ, ಮ್ಯೂಸಿಕ್ ಹಾಗು ನಿರ್ದೇಶನ ಅದರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ರವರ ಅದ್ಬುತ ನಟನೆ. ಇದೆಲ್ಲ ಕನ್ನಡದ ಚಿತ್ರಕ್ಕೆ ಧನಾತ್ಮಕ ಅಂಶಗಳಾಗಿ ಹೊರಹೊಮ್ಮಿದೆ. ಇದೆ ಕಾರಣಕ್ಕೆ ಇಂದು ಕನ್ನಡದ ಸಿನೆಮಾ ಭಾರತೀಯ ಚಿತ್ರರಂಗದಲ್ಲಿ ಎತ್ತರದಲ್ಲಿ ನಿಂತಿದೆ. ಚಿತ್ರ ಬಿಡುಗಡೆ ಆಗಿ ೪ ವಾರವಾದರೂ ಕೂಡ ಇನ್ನು ಸಿನೆಮಾ ಹವಾ ನಿಂತಿಲ್ಲ.

ಕೆಜಿಎಫ್ ಒಂದನೇ ಭಾಗ ಬಂದಾಗ ಅಷ್ಟೊಂದು ಸದ್ದು ಮಾಡಿರಲಿಲ್ಲ ಕಾರಣ ಅಷ್ಟಾಗಿ ಜಾಹಿರಾತು ನೀಡಿರಲಿಲ್ಲ. ಆದರೆ ಎರಡನೇ ಚಿತ್ರದ ಎರಡನೇ ಭಾಗಕ್ಕೆ ಯಾವುದೇ ಜಾಹಿರಾತು ಕೂಡ ಬೇಕಿರಲಿಲ್ಲ, ಅಭಿಮಾನಿಗಳು ಹಾಗು ಚಿತ್ರ ಪ್ರೇಕ್ಷಕರು ತಮಗೆ ತಾವೇ ಈ ಚಿತ್ರದ ಬಗ್ಗೆ ಮಾತಾಡತೊಡಗಿದ್ದರು ಇದೆ ಈ ಚಿತ್ರ ೧೦೦೦ ಕೋಟಿಗೂ ಅಧಿಕ ಗಳಿಕೆ ಮಾಡಲು ಮುಖ್ಯ ಕಾರಣವಾಗಿದೆ. ಇನ್ನು ಈ ಸಿನೆಮಾದ ಮೊದಲ ಭಾಗ OTT ಮಾಧ್ಯಮವಾದ ಅಮೆಜಾನ್ ಪ್ರೈಮ್ ಅಲ್ಲಿ ಬಿಡುಗಡೆ ಗೊಂಡಿತ್ತು. ಇದೀಗ ಎರಡನೇ ಭಾಗ ಕೂಡ ಇದರಲ್ಲೇ ಬಿಡುಗಡೆ ಆಗಲಿದೆ ಎಂದು ವರದಿಗಳು ಹೇಳುತ್ತಿವೆ.

KGF ಚಾಪ್ಟರ್ ೨ ಸಿನೆಮಾ OTT ಪ್ಲಾಟಫಾರ್ಮ್ ಅಮೆಜಾನ್ ಗೆ ಭರ್ಜರಿ ಹಣಕ್ಕೆ ಮಾರಾಟವಾಗಿದೆ ಎಂದು ವರದಿಗಳು ಹೇಳುತ್ತಿದೆ. ಈ ಸಿನೆಮಾದ OTT ರೈಟ್ಸ್ ಬರೋಬ್ಬರಿ ೩೨೦ ಕೋಟಿಗೆ ಮಾರಾಟವಾಗಿದೆ ಅಂತೇ. ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾದ ಕನ್ನಡದ ಮೊದಲ ಸಿನೆಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ ಯಶ್ ರ ಕೆಜಿಎಫ್ ೨ ಸಿನೆಮಾ. ಇದರೊಂದಿಗೆ KGF ಚಾಪ್ಟರ್ ೩ ಗೆ ಕೂಡ ತಯಾರಿ ನಡೆಯುತ್ತಿದೆ ಹಾಗೇನೇ ಇದರಲ್ಲಿ ಅಂತಾರಾಷ್ಟ್ರೀಯ ನಟರು ಕೂಡ ಇರಲಿದ್ದಾರೆ ಎನ್ನುವ ಗುಸುಗುಸು ಕೇಳುತ್ತಿದೆ. ಇದು ಎಷ್ಟೊಂದು ನಿಜ ಎನ್ನುವುದು ಅಧಿಕೃತ ಮಾಹಿತಿ ಬಂದಾಗಲೇ ತಿಳಿಯುತ್ತದೆ.

ಇನ್ನು ಈ KGF ೨ ಅಮೆಜಾನ್ ಪ್ರೈಮ್ ಅಲ್ಲಿ ಬಿಡುಗಡೆ ಆಗಲಿದೆ ಎನ್ನುವ ವಿಷಯ ಎಲ್ಲರಿಗು ಸಿಹಿ ಸುದ್ದಿ ಆಗಿದೆ, ಆದರೆ ಅದಕ್ಕಿಂತ ಮುಂಚೆ ಈ OTT ಗಳಿಗೆ ಕೆಟ್ಟ ಸುದ್ದಿ ಕೂಡ ಇದೆ. ಅದೇ ಪೈ-ರಸಿ. ಸಿನಿಮಾ ಬಿಡುಗಡೆ ಅದ ದಿನವೇ ಈ ಸಿನೆಮಾ ಆನ್ಲೈನ್ ವೆಬ್ಸೈಟ್ ಗಳಲ್ಲಿ ಲೇಕ್ ಆಗಿತ್ತು. ಇನ್ನು ಈ ಸಿನೆಮಾ OTT ಮಾಧ್ಯಮಗಳು ೩೨೦ ಕೋಟಿ ಕೊಟ್ಟು ಪಡೆದ ಕೆಲವೇ ದಿನಗಳಲ್ಲಿ ವೆಬ್ಸೈಟ್ ಗಳಲ್ಲಿ ಉತ್ತಮ ಗುಣಮಟ್ಟದ HD ಕ್ವಾಲಿಟಿ ಸಿನೆಮಾ ಬಿಡುಗಡೆ ಆಗಿದೆ.ಇದರಿಂದ ಈ OTT ಗಳಿಗೆ ದೊಡ್ಡ ಸಮಸ್ಯೆ ಅಲ್ಲದೆ ಮತ್ತಷ್ಟು ನಷ್ಟ ಉಂಟಾಗಿದೆ.

Leave A Reply

Your email address will not be published.