KGF Chapter 2 ನಂತರ ದೊಡ್ಡ ಸುದ್ದಿ ಮಾಡಿದೆ ಕನ್ನಡ ಇನೊಂದು ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ. ದಾಖಲೆ ಬರೆದ ಕಿಚ್ಚನ ಸಿನೆಮಾ.

879

KGF ಚಾಪ್ಟರ್ ೨ ವಿಶ್ವದಾದ್ಯಂತ ಸುದ್ದಿ ಮಾಡಿ ಇಂದು ಕೂಡ ದೇಶದ ಹಲವು ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಒಟ್ಟಾರೆ ಹೇಳುವುದಾದರೆ ಇದುವರೆಗೆ ೧,೧೦೦ ಕೋಟಿ ಗು ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ನಮ್ಮ ಸಿನೆಮಾ ಇಂಡಸ್ಟ್ರಿ ಬೇರೆ ಇಂಡಸ್ಟ್ರಿ ಗಿಂತ ಕಡಿಮೆ ಇಲ್ಲ ಎಂದು ಹೇಳಿದೆ. ತೆಲುಗಿನ RRR ಸಿನೆಮಾ ಕೂಡ ಇದೀಗ KGF ಎದುರು ಮಂಕಾಗಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕದಲ್ಲಿ ಇದೀಗ ಯಶ್ ನಟನೆಯ ಕನ್ನಡದ KGF ಮೂರನೇ ಸ್ಥಾನದಲ್ಲಿದೆ. ಇದಕ್ಕಿಂತ ಮೊದಲು ದಂಗಾಲ್ ಹಾಗು ಬಾಹುಬಲಿ ೨ ಇದೆ. ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಗಳಿಸಿದ ಎರಡನೇ ಸಿನೆಮಾ ಆಗಿ KGF ಹೊರಹೊಮ್ಮಿದೆ.

ಇದೀಗ ಇನೊಂದು ಕನ್ನಡ ಸಿನೆಮಾ ಇದೆ ರೀತಿಯಲ್ಲಿ ಮಿಂಚಲು ತಯಾರಾಗಿ ನಿಂತಿದೆ. ಅದು ಬೇರೆಯಾವುದಲ್ಲ ನಮ್ಮ ಕನ್ನಡದ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನೆಮಾ. ಇದು ಕನ್ನಡಿಗರಲ್ಲಿ ಅಲ್ಲದೆ ಅನೇಕ ಭಾಷಿಗರಲ್ಲೂ ಕುತೂಹಲ ಹೆಚ್ಚಿಸಿದೆ. ಯಾಕೆಂದರೆ ಈ ಸಿನೆಮಾ ದ ಟೀಸರ್ ಇತ್ತೀಚಿಗೆ ಬಿಡುಗಡೆ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಸಿನೆಮಾ ನಿರೀಕ್ಷೆ ಹೆಚ್ಚಿಸಲು ಇನೊಂದು ಕಾರಣ ನಿರುಪ್ ಬಂಡಾರಿ. ರಂಗಿ ತರಂಗ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ಇದೀಗ ಕನ್ನಡದ ದೊಡ್ಡ ನಟ ಕಿಚ್ಚ ಸುದೀಪ್ ಅವರೊಂದಿಗೆ ವಿಕ್ರಾಂತ್ ರೋಣ ಸಿನೆಮಾ ಮಾಡುತ್ತಿದ್ದಾರೆ.

ಈ ವಿಕ್ರಾಂತ್ ರೋಣ ಸಿನೆಮಾ ಇದೆ ವರ್ಷ ೨೮ ಜೂಲೈ ೨೦೨೨ ರಲ್ಲಿ ಬಿಡುಗಡೆ ಆಗಲಿದೆ. ಈ ಬಿಡುಗಡೆಗೂ ಮುನ್ನ ಹೊಸ ರೆಕಾರ್ಡ್ ಸೃಷ್ಟಿಸಿದೆ. ಅದೇನು ಅಂತೀರಾ ಇಲ್ಲಿದೆ ನೋಡಿ. ಈ ಸಿನೆಮಾ ಭಾರತದಲ್ಲಿ ಮಾತ್ರ ಅಲ್ಲದೆ ವಿದೇಶಗಳಲ್ಲಿ ಕೂಡ ಬಿಡುಗಡೆ ಆಗಲಿದೆ. ಈ ಓವರ್ಸೀಸ್ ರೈಟ್ಸ್ ಈಗ ಮಾರಾಟವಾಗಿರುವ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆನ್ ಟ್ವೆಂಟಿ 8 ಮೀಡಿಯಾ ಸಂಸ್ಥೆ ವಿಕ್ರಾಂತ್ ರೋಣ ಸಿನೆಮಾದ ಓವರ್ಸೀಸ್ ಡಿಸ್ತ್ರೀಭೂಷಣ್ ರೈಟ್ಸ್ ಕಂಡುಕೊಂಡಿದೆ.

ಈ ಸಂಸ್ಥೆ ಕಂಡುಕೊಂಡ ಈ ರೈಟ್ಸ್ ಎಷ್ಟು ಮೊಟ್ಟದಾಗಿದೆ ಗೊತ್ತೇ? ಬರೋಬ್ಬರಿ ೧.೩ ಮಿಲಿಯನ್ ಡಾಲರ್ ಅಂದರೆ ಭಾರತದ ಸುಮಾರು ೧೦ ಕೋಟಿಗೂ ಅಧಿಕವಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೆ ಮೊದಲಬಾರಿಗೆ ಈ ದೊಡ್ಡ ಮೊತ್ತದಲ್ಲಿ ಒಂದು ಕನ್ನಡ ಸಿನೆಮಾದ ಓವರ್ ಸೀಸ್ ಡಿಸ್ತ್ರೀಭೂಷಣ್ ರೈಟ್ಸ್ ಮಾರಾಟವಾಗಿದೆ ಅಂತೇ. ಈ ಸುದ್ದಿ ಕೇಳುತ್ತಿದ್ದಂತೆಯೇ ಈ ಸಿನೆಮಾದ ಕುತೂಹಲ ಹಾಗು ನೀರಿಕ್ಷೆ ಇನ್ನು ಹೆಚ್ಚಾಗಿದೆ. ಈ ಸಿನೆಮಾದಲ್ಲಿ ಕಿಚ್ಚ ಸುದೀಪ್, ನಿರುಪ್ ಬಂಡಾರಿ, ನೀತಾ ಅಶೋಕ್, ಜಾಕ್ಯೂಲಿನ್ ಫೆರ್ನಾಂಡಿಸ್, ರವಿಶಂಕರ್ ಗೌಡ ಮುಂತಾದವರು ಅಭಿನಯಿಸಿದ್ದಾರೆ.

Leave A Reply

Your email address will not be published.