KGF Chapter -2 ಸೂಪರ್ ಸ್ಟಾರ್ ರಾಕಿ ಭಾಯ್ (ಯಶ್) ಅವರು ಧರಿಸಿರುವ ವಾಚ್ ನ ಬೆಲೆ ಎಷ್ಟು ಗೊತ್ತೆ?

576

ರಾಕಿ ಭಾಯ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ, ಭಾರತದ ಸಿನೆಮಾ ರಂಗವನ್ನು ಮೇಲ್ಸ್ತರಕ್ಕೆ ಕೊಂಡೊಯ್ದ ವ್ಯಕ್ತಿ. ಕನ್ನಡ ಸಿನೆಮಾ ರಂಗವನ್ನು ವಿಶ್ವದಾದ್ಯಂತ ಪರಿಚಯ ಮಾಡಿದ ನಟ ಎಂದರೂ ತಪ್ಪಾಗಲಿಕ್ಕಿಲ್ಲ. ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದಾರೆ. ಹೌದು KGF ಚಾಪ್ಟರ್ 1 ರ ಯಶಸ್ಸಿನ ನಂತರ ಇದೀಗ ಚಾಪ್ಟರ್ 2 ರಿಲೀಸ್ ಗೆ ತಂಡ ಸಜ್ಜಾಗಿದೆ. ಇದೆ ಬರುವ 14ರಂದು ಮತ್ತೊಮ್ಮೆ ಧೂಳೆಬ್ಬಿಸಲು ತಯಾರಾಗಿದೆ. ಹಾಗಾದರೆ ಇಂದು ನಾವು ಸಿನೆಮಾ ಬಗ್ಗೆ ಯಾವುದೇ ವಿಚಾರ ಮಾತನಾಡುತ್ತಿಲ್ಲ ಬದಲಾಗಿ ಯಶ್ ಅವರು ಧರಿಸುವ ಕೈಗಡಿಯಾರ ಬಗ್ಗೆ ತಿಳಿಯಲಿದ್ದೇವೆ.

ಹೌದು ಇದೀಗ ಯಶ್ ಅವರು ಮತ್ತೊಮ್ಮೆ ಸುದ್ದಿಯಲ್ಲಿ ಇದ್ದಾರೆ, ಆದರೆ ಅವರು ಸುದ್ದಿಯಲ್ಲಿ ಇರುವುದು ಈಗ ಅವರ ಸಿನೆಮಾದ ವಿಚಾರದಲ್ಲಿ ಅಲ್ಲ ಬದಲಾಗಿ ಅವರು ಧರಿಸುವ ಕೈ ಗಡಿಯಾರದ ಬಗ್ಗೆ. ಹೌದು ಯಶ್ ಅವರು ಧರಿಸುವ ವಾಚ್ ಈಗ ಸುದ್ದಿಯಲ್ಲಿ ಇದೆ. ಅದರ ಬೆಲೆಯ ಬಗೆಗೆ ಈಗ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಶುರುವಾಗಿದೆ. ಹೌದು ಯಶ್ ಅಭಿಮಾನಿಗಳು ಕೂಡ ಇದರದ್ದೇ ಚರ್ಚೆ ನಡೆಸುತ್ತಿದ್ದಾರೆ.

ಮಾಹಿತಿ ಪ್ರಕಾರ ಅವರು ಧರಿಸುವ ವಾಚ್ ಬೆಲೆ 3.5ಕೋಟಿ ಎಂದು ಅಂದಾಜಿಸಾಗಿದೆ. ಹೌದು ಬರೋಬ್ಬರಿ 3.5 ಕೋಟಿ ಬೆಲೆಯ watch ಎಂದು ಹೇಳಲಾಗಿದೆ. ಆದರೆ ಯಶ್ ಅವರ ನಿಕಟವರ್ತಿಗಳು ಹೇಳುವ ಪ್ರಕಾರ ಅದು ಬೆಲೆ ಬಾಳುವ ವಾಚ್ ಹೌದು ಆದರೆ ಅದಕ್ಕೆ 3.5ಕೋಟಿ ಇಲ್ಲ, ಅದು ಯಾರೋ ಹಬ್ಬಿರುವ ಸುಳ್ಳು ವಿಚಾರ ಎಂಬ ಮಾತುಗಳನ್ನು ಕೂಡ ಹೇಳಿದ್ದಾರೆ. ಆದರೆ ಬೆಲೆಬಾಳುವ ವಾಚ್ ಅಂತೂ ಹೌದು ಎಂದು ಹೇಳಿದ್ದಾರೆ.

Leave A Reply

Your email address will not be published.