ಮುಖ್ಯ ಆಯ್ಕೆಗಾರರಾಗಲಿದ್ದಾರಾ ಮಹೇಂದ್ರ ಸಿಂಗ್ ಧೋನಿ? ಬಿಸಿಸಿಐ ನಿಂದ MSD ಗೆ ಬುಲಾವ್.

319

ಆಸ್ಟ್ರೇಲಿಯಾದಲ್ಲಿ ನಡೆದ ICC T20 Worldcup 2022 ರ ಸೆಮಿಫೈನಲ್ ನಲ್ಲಿ ಹೀನಾಯ ಸೋಲಿನ ಕಂಡಿತ್ತು. ಇನ್ನೊಮ್ಮೆ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತು. ಈ ಬಾರಿಯ ಭಾರತ ತಂಡದ ಸೋಲು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಭಾರತ ಒಂದು ವಿಕೆಟ್ ಕೂಡ ಪಡೆಯುವಲ್ಲಿ ಯಶಸ್ವಿ ಆಗಿರಲಿಲ್ಲ. ಹಾಗೇನೇ ಭಾರತದ ಆರಂಭಿಕ ಬ್ಯಾಟ್ಸಮನ್ ಗಳು ಯಾವುದೇ ಪ್ರದರ್ಶನ ಕೂಡ ನೀಡಲಿಲ್ಲ. ಇದಕ್ಕಾಗಿ ಭಾರತ ತಂಡವನ್ನು ಸಂಪೂರ್ಣವಾಗಿ ಬದಲಾಯಿಸುವ ಮಾತು ಕೇಳಿ ಬರುತ್ತಿದೆ.

ಖಾಸಗಿ ಮಾಧ್ಯಮ ಪ್ರಕಾರ T20 ತಂಡವನ್ನು ಬದಲಾಯಿಸಲು BCCI ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಇದರಲ್ಲಿ ಟಿ ೨೦ ತಂಡಕ್ಕೆ ಹಾರ್ದಿಕ್ ಪಂದ್ಯ ನಾಯಕರನ್ನಾಗಿ ಮಾಡಬೇಕೆ? ಏಕದಿನ ಹಾಗು ಟೆಸ್ಟ್ ಕ್ರಿಕೆಟ್ ಗೆ ಬೇರೆ ಬೇರೆ ನಾಯಕರುಗಳನ್ನು ಆಯ್ಕೆ ಮಾಡಬೇಕೆ ಎನ್ನುವ ಹೊಸ ಚರ್ಚೆ ಶುರುವಾಗಿದೆ.

ಇದೀಗ ಭಾರತದ ಮಾಜಿ ನಾಯಕ ಹಾಗು ಮಿಸ್ಟರ್ ಕೂಲ್ ಎಂದೆನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ (Mahendra Sing Dhoni ) ಅವರನ್ನು ಮತ್ತೊಮ್ಮೆ ಬಿಸಿಸಿಐ ಕರೆಸಿಕೊಂಡಿದೆ. ಭಾರತ ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಆಲೋಚಿಸುತ್ತಿದೆ ಎನ್ನುವುದು ಅನೇಕ ವರದಿಗಳ ಪ್ರಕಾರ ಬೆಳಕಿಗೆ ಬರುತ್ತಿದೆ. ಆದರೆ ಆಟಗಾರನಾಗಲ್ಲ ಬದಲಾಗಿ ಬಿಸಿಸಿಐ ಡೈರೆಕ್ಟರ್ ಆಗಿ ಅಥವಾ ಮುಖ್ಯ ಆಯ್ಕೆ ಗಾರನಾಗಿ ಕೂಡ ನೇಮಕ ಮಾಡಬಹುದು. ಇದು ಎಷ್ಟು ಖಚಿತ ಎನ್ನುವುದು ಮುಂದೆ ತಿಳಿದು ಬರಬೇಕಷ್ಟೆ.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಧೋನಿ ಈಗಲೂ ಕೂಡ ಐಪಿಎಲ್ ಅಲ್ಲಿ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ನಾಯಕತ್ವ ಬಿಟ್ಟಿದ್ದ ಧೋನಿ ಕೊನೆಗೆ ಜಡೇಜಾ ಗಾಯಾಳುವಾಗಿ ಹೊರಗಡೆ ಹೋದಾಗ ಮತ್ತೊಮ್ಮೆ ನಾಯಕನಾಗಿ ತಂಡವನ್ನು ಮುಂದುವರೆಸಿದ್ದರು. ಈ ಬಾರಿ ಐಪಿಎಲ್ ಆವೃತ್ತಿ ಧೋನಿ ಅವರದ್ದು ಕೊನೆಯದು ಎಂದು ಹೇಳಲಾಗುತ್ತಿದ್ದು, ಮುಂದಿನ ಬಾರಿ ಬಿಸಿಸಿಐ ಹೊಸ ಜವಾಬ್ದಾರಿ ಕೂಡ ನೀಡಬಹುದು ಎಂದು ಹೇಳಲಾಗುತ್ತಿದೆ. ಹೀಗೇನಾದರೂ ಆದರೆ ಭಾರತಕ್ಕೆ ದೀರ್ಘಕಾಲದ ಲಾಭ ಉಂಟಾಗಲಿದೆ.

Leave A Reply

Your email address will not be published.