ಟೀಮ್ ಇಂಡಿಯಾ ಪರಿಸ್ಥಿತಿ ಸುಧಾರಿಸಲು ಎರಡು ಸಲಹೆ ನೀಡಿದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ(Anil Kumble).

268

2022 ICC T20 ವಿಶ್ವಕಪ್ (WorldCup) ನಲ್ಲಿ ರೋಹಿತ್ ಶರ್ಮ (Rohit Sharma) ನಾಯಕತ್ವದಲ್ಲಿ ಭಾರತ ತಂಡವು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಸೋಲನ್ನು ಅನುಭವಿಸಿತು. ಇದರೊಂದಿಗೆ ಭಾರತದ ವಿಶ್ವಕಪ್ ಗೆಲ್ಲುವ ಕನಸು ಕೂಡ ಕೊನೆಗೊಂಡಿತ್ತು. ಈ ಹೀನಾಯ ಸೋಲಿನ ಬಳಿಕ ಭಾರತದ ಕ್ರಿಕೆಟ್ ಅಭಿಮಾನಿಗಳು ಹಾಗು ಹಿರಿಯ ಆಟಗಾರರಲ್ಲಿ ತಂಡದ ಬದಲಾವಣೆ ಬಗ್ಗೆ ಕೂಗು ಹೆಚ್ಚಾಗ ತೊಡಗಿದ್ದು ನಿಜಾನೆ. ಇದಕ್ಕೆ ಅನೇಕ ಹಿರಿಯ ಆಟಗಾರರು ಸಲಹೆ ಕೂಡ ನೀಡಿದ್ದಾರೆ. ಭಾರತದ ಮಾಜಿ ಆಟಗಾರ ಶ್ರೇಷ್ಠ ಬೌಲರ್ ಅನಿಲ್ ಕುಂಬ್ಳೆ (Anil Kumble) ಕೆಂಪು ಮತ್ತು ಬಿಳಿ ಬಾಲ್ ಗೇಮ್ ಗೆ ಪ್ರತ್ಯೇಕ ತಂಡಗಳನ್ನು ರಚಿಸಬೇಕು ಎನ್ನುವ ಸಲಹೆ ನೀಡಿದ್ದಾರೆ.

ಟೆಸ್ಟ್ ಮತ್ತು ಸೀಮಿತ ಓವರ್ ಗಳ ಅಂತಾರಾಷ್ಟ್ರೀಯ ಆಟಕ್ಕೆ ಪ್ರತ್ಯೇಕ ಎರಡು ತಂಡಗಳನ್ನು ಮಾಡಲು ಅನಿಲ್ ಕುಂಬ್ಳೆ ಒತ್ತಾಯ ಮಾಡಿದ್ದಾರೆ. ತಂಡಕ್ಕೆ ಇದರ ಅವಶ್ಯಕತೆ ಇದೆ ಎಂದು ಒತ್ತಾಯ ಕೂಡ ಮಾಡಿದ್ದಾರೆ. ಸಂಧರ್ಶನವೊಂದರಲ್ಲಿ ಮಾತಾಡುತ್ತ ಅನಿಲ್ ಕುಂಬ್ಳೆ ಮಾತಾಡುತ್ತ ಟಿ೨೦ ಗೆ ಸ್ಪೆಷಲಿಸ್ಟ್ ಆಟಗಾರರು ಖಂಡಿತ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ಹೇಳುತ್ತಾ ಇಂಗ್ಲೆಂಡ್ ತಂಡವನ್ನು ನೋಡಿದರೆ ಅಲ್ಲಿ ಆಲ್ರೌಂಡರ್ ಬಹಳಷ್ಟು ಜನ ಇದ್ದಾರೆ. ಅದಲ್ಲದೆ ಕೊನೆಯ ಚಾಂಪಿಯನ್ ಆಸ್ಟ್ರೇಲಿಯಾ ಕೂಡ ನೋಡಿದರೆ ಅವರಲ್ಲಿ ಅದೇ ತರಹದ ಟೀಮ್ ಹೊಂದಾಣಿಕೆ ಇದೆ. ಇಂಗ್ಲೆಂಡ್ ಬ್ಯಾಟಿಂಗ್ ಕ್ರಮಾಂಕ ನೋಡಿದರೆ 7 ನೇ ವಿಕೆಟ್ ಗೆ ಲಿಯಾಮ್ ಲಿವಿಂಗ್ ಸ್ಟೋನ್ (Liam Livingstone) ಕಣಕ್ಕೆ ಬರುತ್ತಾರೆ. ಈ ಕ್ರಮಾಂಕದ ಆಲ್ರೌಂಡರ್ ಬೇರೆ ಯಾವ ತಂಡದಲ್ಲೂ ಇಲ್ಲ. ಇನ್ನು ಆಸ್ಟ್ರೇಲಿಯಾದಲ್ಲಿ ಆರನೇ ಕ್ರಮಾಂಕದಲ್ಲಿ ಸ್ಟೋಯಿನಿಸ್ (Marcus Stoinis) ಬರುತ್ತಾರೆ. ಇಂತಹ ಮಾದರಿ ತಂಡವನ್ನು ನಾವು ತಯಾರು ಮಾಡಬೇಕಿದೆ. ಇದು ನಾವು ಯೋಚಿಸಬೇಕಾದ ವಿಷಯ ಎಂದು ಕುಂಬ್ಳೆ ಸಲಹೆ ನೀಡಿದ್ದಾರೆ.

ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಮಾತಾಡಿರುವ ಕುಂಬ್ಳೆ, ನಾನು ಬೇರೆ ನಾಯಕ ಬೇಕೋ, ಬೇರೆ ಕೋಚ್ ಬೇಕೋ ಎಂದು ನಾನು ಹೇಳಲಾರೆ. ಇದು ತಂಡವನ್ನು ಹೇಗೆ ಆಯ್ಕೆ ಮಾಡಲಿದ್ದೀರಾ ಎನ್ನುವುದರ ಮೇಲೆ ನಿರ್ಧಾರವಾಗಲಿದೆ. ಯಾವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲಿದಿರ, ನಾಯಕನಿಗೆ ಬೇಕಾದ ಹಾಗೆ ತಂಡ ಕಟ್ಟಿ ಎಂದು ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ. ರೋಹಿತ್ ಶರ್ಮ ಅವರನ್ನು ಕೆಳಗಿಳಿಸಬೇಕೆಂದು ಅನೇಕ ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ಶಿಕಾರ ಧವನ್ (Shikar Dhavan) ಅಥವಾ ಹಾರ್ದಿಕ್ ಪಾಂಡ್ಯ (Hardhik Pandya) ಅವರನ್ನು ನಾಯಕರನ್ನಾಗಿಸಬೇಕೆಂದು ಅಭಿಪ್ರಾಯ ಕೂಡ ಪಟ್ಟಿದ್ದಾರೆ.

Leave A Reply

Your email address will not be published.