Cricket News: ಈ ಯುವ ಆಟಗಾರ ಟಿ-೨೦ ಅಲ್ಲೂ ಇಲ್ಲ, ಏಕದಿನ ತಂಡದಲ್ಲೂ ಇಲ್ಲ. ಇವನು ಬೇಕೇ ಬೇಕು ಎಂದ ವೀರೇಂದ್ರ ಸೆಹ್ವಾಗ್.

194

ICC T20 worldCup 2023 ನಿರಾಶಾದಾಯಕ ಸೋಲಿನ ಬಳಿಕ ಭಾರತ ತಂಡ ತನ್ನ ಸಂಪೂರ್ಣ ಗಮನ ನ್ಯೂಜಿಲ್ಯಾಂಡ್ ವಿರುದ್ದದ ಏಕದಿನ ಹಾಗು ಟಿ-೨೦ ಸರಣಿ ಮೇಲೆ ಹರಿಸಿದೆ. ಹಾಗೇನೇ ಕೆಲ ಹಿರಿಯ ಆಟಗಾರರಾದ ರೋಹಿತ್ ಶರ್ಮ(Rohit Sharma), ವಿರಾಟ್ ಕೊಹ್ಲಿ(Virat Kohli) ಹಾಗು ಕೆ ಎಲ್ ರಾಹುಲ್(K.L. Rahul) ರಂತವರಿಗೆ ವಿಶ್ರಾಂತಿ ಕೂಡ ನೀಡಲಾಗಿದೆ. ಹೇಳಬೇಕಂದರೆ ಇದೀಗ ಇರುವುದು ಯುವಕರ ತಂಡ. ಈ ತಂಡವನ್ನು ಮುನ್ನಡೆಸಲಿರುವುದು ಹಾರ್ದಿಕ್ ಪಾಂಡ್ಯ. ಈ ಮೂರೂ ಪಂದ್ಯಗಳ ಟಿ-೨೦ ನವೆಂಬರ್ ೧೮ ರಿಂದ ನಡೆಯಲಿದೆ.

ಶುಭಮನ್ ಗಿಲ್(Shubman Gill), ಇಶಾನ್ ಕಿಶನ್(Ishan Kishan), ಶ್ರೇಯಸ್ ಅಯ್ಯರ್(Shreyas Iyer) ಭಾರತದ ಟಾಪ್ ಆರ್ಡರ್ ಆದರೆ,ಸೂರ್ಯ ಕುಮಾರ್ ಯಾದವ್(Surya Kumar Yadav) ತಂಡದಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ಇಷ್ಟಾದರೂ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್(virendra Sehwag) ಈ ಒಬ್ಬ ಆಟಗಾರನನ್ನು ತಂಡದಿಂದ ದೂರ ಇಟ್ಟಿದಕ್ಕೆ ಬೇಸರ ಪಟ್ಟಿದ್ದಾರೆ. ಆ ಯುವ ಆಟಗಾರ ಬೇರೆ ಯಾರು ಅಲ್ಲ ಪ್ರಿಥ್ವಿ ಶಾಹ್. ಮುಂಬೈ ಓಪನರ್ ಹಾಗು ಇತ್ತೀಚಿಗೆ ತನ್ನ ರಾಜ್ಯ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್(IPL) ಅಲ್ಲಿ ಇವರ ಸ್ಟ್ರೈಕ್ ರೇಟ್ ಕೂಡ 152 ಆಸುಪಾಸಿನಲ್ಲಿದೆ. ಆದರೂ ಅಂತಾರಾಷ್ಟ್ರೀಯ ತಂಡದಲ್ಲಿ ಇಲ್ಲ ಶಾಹ್ ಎಂದು ಸೆಹ್ವಾಗ್ ಬೇಸರ ಪಟ್ಟಿದ್ದಾರೆ.

ವೀರೇಂದ್ರ ಸೆಹ್ವಾಗ್(virendra Sehwag) ಪ್ರಕಾರ ಪ್ರಿಥ್ವಿ ಶಾಹ್ (Pritvi Shah) ತಂಡಕ್ಕೆ ಬರಬೇಕು. ಇವರು ಕೊನೆ ಬಾರಿ ಅಂತಾರಾಷ್ಟ್ರೀಯ ಟಿ-೨೦ ಆಡಿದ್ದು ಜೂಲೈ ೨೦೨೧ ರಲ್ಲಿ ಅದು ಕೂಡ ಶ್ರೀಲಂಕಾ(Srilanka) ವಿರುದ್ಧ. ಅದು ಕೂಡ ಶಾಹ್ ಅವರ ಚೊಚ್ಚಲ ಅಂತಾರಾಷ್ಟ್ರೀಯ ಟಿ-೨೦ ಪಾದಾರ್ಪಣೆ ಪಂದ್ಯ ಕೂಡ ಆಗಿತ್ತು. ಆಮೇಲೆ ಅವರಿಗೆ ಯಾವುದೇ ಅವಕಾಶ ಸಿಕ್ಕಿಲ್ಲ. ಟಿ-೨೦ ತಂಡದಲ್ಲೂ ಇಲ್ಲ, ಏಕದಿನದಲ್ಲೂ ಇಲ್ಲ. ಟೆಸ್ಟ್ ತಂಡದಲ್ಲಿ ಅಂತೂ ಕೇಳುವುದೇ ಬೇಡ. ಪ್ರಿಥ್ವಿ ಶಾಹ್ ಅವರನ್ನು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ತಂಡದಲ್ಲಿ ಇರಲು ನಾನು ಬಯಸುತ್ತೇನೆ ಎಂದು ಸೆಹ್ವಾಗ್ ಹೇಳಿದ್ದಾರೆ.

Leave A Reply

Your email address will not be published.