Pathan: ಶಾರುಖ್ ಖಾನ್ ಗೆ ಮತ್ತಷ್ಟು ಸಂಕಷ್ಟ. ಕೇಸರಿ ಬಿಕಿನಿ, ನಾಚಿಕೆ ಇಲ್ಲದ ಬಣ್ಣ ಎನ್ನುವ ಪದಗಳ ಸಾಲು. ಪಠಾಣ್ ಸಿನೆಮಾ ನೋಡಬೇಡಿ ಎನ್ನುತ್ತಿರುವ ಜನರು.

163

ಶಾರುಖ್ ಖಾನ್ (Shah Rukh Khan) ಭಾರತ ಸಿನೆಮಾ ರಂಗದಲ್ಲೇ ಅತ್ಯಂತ ಹೆಚ್ಚು ಹೆಸರು ಗಳಿಸಿದ ನಾಯಕ ನಟ ಎಂದರೆ ತಪ್ಪಾಗಲಾರದು. ಭಾರತ ಸಿನೆಮಾ ಅಂದರೆ ಎಲ್ಲೆಡೆ ಕೇಳಿಬರುತ್ತಿದ್ದ ಹೆಸರು ಬಾಲಿವುಡ್ (Bollywood). ಆದರೆ ನಮ್ಮ ಕನ್ನಡ, ಮಲಯಾಳಂ, ತೆಲುಗು, ತಮಿಳ್ ಸಿನೆಮಾಗಳು ಸೂಪರ್ ಹಿಟ್ ಆಗಲು ಪ್ರಾರಂಭಿಸಿದವೋ ಆದಾಗಿಂದ ಬಾಲಿವುಡ್ ಗೆ ದೊಡ್ಡ ನಷ್ಟ ಪ್ರಾರಂಭವಾಯಿತು. ಮೊದಲು ದಕ್ಷಿಣದ ಸಿನೆಮಾವನ್ನೇ ಚಾಚು ತಪ್ಪದೆ ರಿಮೇಕ್ ಮಾಡಿ ಉತ್ತಮ ಹಣ ಗಳಿಸುತ್ತಿದ್ದ ಬಾಲಿವುಡ್ (Bollywood) ಗೆ ಇದೀಗ ಕೆಲಸ ಇಲ್ಲದಂತಾಗಿದೆ.

google

ಶಾರುಖ್ ಖಾನ್ (Shah Rukh Khan) ಸಿನೆಮಾ ಕಳೆದ ಐದಾರು ವರ್ಷಗಳಿಂದ ಯಾವುದು ಕೂಡ ಯಶಸ್ಸು ಕಂಡಿಲ್ಲ. ಕಾರಣ ಅವರು ಭಾರತದ ಬಗ್ಗೆ ಹೇಳಿದ ಕೆಲವು ಹೇಳಿಕೆಗಳು. ಇದರಿಂದ ಜನರು ಅಸಮಾಧಾನಗೊಂಡು ಸಿನೆಮಾವನ್ನೇ ನೋಡುವುದನ್ನೇ ನಿರಾಕರಿಸಿದ್ದರು. ಅದಾದ ನಂತರ ಎರಡು ವರ್ಷ ನಂತರ ಇದೀಗ ಪಠಾಣ್ (Pathan) ಎನ್ನುವ ಸಿನೆಮಾ ತೆರೆಗೆ ಬರಲಿದೆ. ಆದರೆ ಇದಕ್ಕೂ ಬೊಯ್ಕಾಟ್ ಬಿಸಿ ಬೀಳುತ್ತಿದೆ. ಇದಕ್ಕೆ ಕಾರಣ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಹಾಕೊಂಡಿರೋ ಬಟ್ಟೆ ಬಣ್ಣ ಹಾಗು ಪಂದ್ಯದ ಸಾಲುಗಳು.

ಪಠಾಣ್ ಸಿನೆಮಾದ ಬೇಶರಮ್ ರಂಗ್ (Besharam Rang) ಹಾಡು ಎರಡು ದಿನಗಳ ಹಿಂದೆ ಬಿಡುಗಡೆ ಗೊಂಡಿದೆ. ಈ ಹಾಡನು 15 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika Padukone) ಹಾಕಿಕೊಂಡಿರುವ ಬಿಕಿನಿ ಕೇಸರಿ ಬಣ್ಣ ಹಾಗು ಪದ್ಯದ ಸಾಲಿನಲ್ಲಿ ಬೇಶರಮ್ ರಂಗ್ (besharam Rang) ಅಂದರೆ ನಾಚಿಕೆ ಇಲ್ಲದ ಬಣ್ಣ ಎನ್ನುವ ಅರ್ಥ ಬರುತ್ತದೆ. ಜನರು ಇದಕ್ಕೆ ಕೋಪ ಗೊಂಡು ಶಾರುಖ್ ಖಾನ್ (Shah Rukh Khan) ಅವರಿಗೆ ಕೇಸರಿ ಬಣ್ಣ ನಾಚಿಕೆ ಇಲ್ಲದ ಬಣ್ಣದ ರೀತಿ ಕಾಣುತ್ತ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಾಲಿವುಡ್ (Bollywood) ಕೇವಲ ಒಂದು ಕೋಮಿನವರಿಗೆ ಯಾಕೆ ಈ ರೀತಿ ದ್ವೇಷ ಮಾಡುತ್ತಾರೆ ಎನ್ನುವುದು ಪ್ರೇಕ್ಷಕರ ಪ್ರಶ್ನೆ. ಇದೆ ಕಾರಣಕ್ಕೆ ಈ ಸಿನೆಮಾ ಬೊಯ್ಕಾಟ್ ಗೆ ಕರೆ ನೀಡಿದ್ದಾರೆ.

Leave A Reply

Your email address will not be published.